ಆಧಾರ್ ಪ್ಯಾನ್ ಲಿಂಕ್: ಜೂ.30 ಕೊನೆ ದಿನ!
– 1000 ರೂ ದಂಡಕ್ಕೆ ಕೊನೆ ದಿನ
– ಕೂಡಲೇ ಲಿಂಕ್ ಮಾಡಿ.. ಇಲ್ಲದಿದ್ರೆ ದಂಡ ಫಿಕ್ಸ್
NAMMUR EXPRESS NEWS
ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮಾಡಲು ನಾಳೆ ಅಂದರೆ ಜೂನ್ 30 ಕೊನೆಯ ದಿನವಾಗಿದೆ. ಜೂನ್ 30ರವರೆಗೆ 1000 ರೂಪಾಯಿ ದಂಡದೊಂದಿಗೆ ಆಧಾರ್ ಪಾನ್ ಲಿಂಕ್ ಮಾಡಬೇಕಾಗುತ್ತದೆ. ದಂಡ ಕಟ್ಟಿಯೂ ಪಾನ್ ಆಧಾರ್ ಲಿಂಕ್ ಮಾಡದೆ ಇದ್ದರೆ ಟಿಡಿಎಸ್ ಮತ್ತು ಟಿಸಿಎಸ್ ದರವೂ ಹೆಚ್ಚಾಗಿ ನಿಮಗೆ ನಷ್ಟವಾಗಲಿದೆ.
ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಲಿಂಕ್ ಮಾಡದೆ ಇದ್ದರೆ ಪರಿಣಾಮ ಏನಾಗುತ್ತದೆ?
ಆದಾಯ ತೆರಿಗೆ ನಿಯಮದ ಪ್ರಕಾರ ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಹಲವು ಬಾರಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಅವಕಾಶ ನೀಡಿತ್ತು. ಹಲವು ಡೆಡ್ಲೈನ್ ನೀಡಿತ್ತು. ಆ ಡೆಡ್ಲೈನ್ಗಳೆಲ್ಲವೂ ಮುಗಿದ ಬಳಿಕ 1000 ರೂಪಾಯಿ ದಂಡ ಪಾವತಿಯೊಂದಿಗೆ ಪಾನ್ ಆಧಾರ್ ಲಿಂಕ್ ಮಾಡಲು ಕೊನೆಯ ಅವಕಾಶ ನೀಡಿತ್ತು. ಈ ರೀತಿ ದಂಡ ಪಾವತಿಯೊಂದಿಗೆ ಆಧಾರ್ ಪಾನ್ ಲಿಂಕ್ ಮಾಡಲು ನಾಳೆ ಅಂದರೆ ಜೂನ್ 30 ಕೊನೆಯ ದಿನವಾಗಿದೆ. ನೀವು ಇನ್ನೂ ಆಧಾರ್ ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ನಾಳೆಯೊಳಗೆ 1000 ರೂಪಾಯಿ ದಂಡದೊಂದಿಗೆ ಲಿಂಕ್ ಮಾಡಿ.
“ಪಾನ್ ಕಾರ್ಡ್ ಹೊಂದಿರುವವರೇ ಗಮನಿಸಿ, ಪಾನ್ ಆಧಾರ್ ಲಿಂಕ್ ಮಾಡಿ! ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ ಪಾನ್ ಕಾರ್ಡ್ ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಆಧಾರ್-ಪಾನ್ ಲಿಂಕ್ ಮಾಡಬೇಕು. ಪಾನ್ ಮತ್ತು ಆಧಾರ್ ಕಾರ್ಡ್ ಅನ್ನು 30.06.2023 ದಿನಾಂಕದ ಮೊದಲು ಲಿಂಕ್ ಮಾಡಿ. ದಯವಿಟ್ಟು ಇಂದೇ ನಿಮ್ಮ ಪಾನ್ ಮತ್ತು ಆಧಾರ್ ಲಿಂಕ್ ಮಾಡಿ” ಎಂದು ಆದಾಯ ತೆರಿಗೆ ಇಲಾಖೆ ಟ್ವಿಟ್ ಮಾಡಿದೆ.
ಆದಾಯ ತೆರಿಗೆ ನಿಯಮಗಳ ಪ್ರಕಾರ ಯಾರು ಕೂಡ ಒಂದು ಪಾನ್ ಕಾರ್ಡ್ಗಿಂತ ಹೆಚ್ಚಿನ ಪಾನ್ ಕಾರ್ಡ್ ಹೊಂದಿರುವಂತೆ ಇಲ್ಲ. ಎಲ್ಲಾದರೂ ಯಾರಾದರೂ ಒಂದು ಪಾನ್ ಕಾರ್ಡ್ಗಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ಅವರು 10000 ರೂಪಾಯಿ ದಂಡ ಪಾವತಿಸಬೇಕು.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023