ನೀವೂ ಸ್ವಂತ ಉದ್ಯೋಗ ಮಾಡಬೇಕಾ?
– ರುಡ್ಸೆಟ್ ಸಂಸ್ಥೆ ಬ್ರಹ್ಮಾವರದಲ್ಲಿ ಸ್ವ ಉದ್ಯೋಗ ತರಬೇತಿ
– ಜುಲೈ 4ರಿಂದ ವಿವಿಧ ತರಬೇತಿ: ಅರ್ಜಿ ಅಹ್ವಾನ
– ಊಟ, ವಸತಿ, ಕಿಟ್ ಫ್ರೀ… ಏನಿದು ಯೋಜನೆ?
NAMMUR EXPRESS NEWS
ಬ್ರಹ್ಮಾವರ: ಸ್ವ ಉದೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರ್ಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ, ಇಂದು ಅನೇಕ ಯುವಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ನಡೆಯುವ ರುಡ್ಸೆಟ್ ಸಂಸ್ಥೆ, ಬಹ್ಮಾವರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗು ಜಿಲ್ಲಾ ಪಂಚಾಯತ್, ಉಡುಪಿ ಇವರ ವತಿಯಿಂದ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್ನೊಂದಿಗೆ ತರಬೇತಿ ನೀಡಲಾಗುವುದು, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಮೊದಲ ಆದ್ಯತೆ.
ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ತಿಂಗಳಲ್ಲಿ ನಡೆಯಲಿರುವ ತರಬೇತಿಗಳು, ದಿನಾಂಕ: 04.07.2023 ರಿಂದ 13.07.2023 10 ದಿನಗಳ ಫಾಸ್ಟ್ ಫುಡ್ ತಯಾರಿಕೆ, ದಿನಾಂಕ: 17.07.2023 ರಿಂದ 15.08.2023 30 ದಿನಗಳ ಎಂಬ್ರಾಯ್ಡರಿ ಮತ್ತು ಪ್ಯಾಬ್ರಿಕ್ ಪೈಂಟಿಂಗ್ ತರಬೇತಿಯನ್ನು ಆಯೋಜಿಸಲಾಗುವುದು, ಈ ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷ ಒಳಗಿರುವವರು, ಬಿ.ಪಿ.ಎಲ್. ಕುಟುಂಬದ ಸದಸ್ಯರಾಗಿರಬೇಕು, ಕನ್ನಡ ಓದಲು ಬರೆಯಲು ಬರುವ, ಮುಂದೆ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು, ನಿಮ್ಮ ಹೆಸರು,ವಿಳಾಸ, ನಿಮ್ಮ ವಾಟ್ಸಪ್ ಮೊಬೈಲ್ ನಂಬರ್, ನೀವು ಪಡೆಯಲು ಇಚ್ಚಿಸುವ ತರಬೇತಿ ಯಾವುದು ಎಂದು ಬರೆದು ಇದರ ಜೊತೆಗೆ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ.
ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಡಬಹುದು.
ನಿರ್ದೇಶಕರು: ರುಡ್ ಸೆಟ್ ಸಂಸ್ಥೆ, 52 ನೇ ಹೇರೂರು, ಬ್ರಹ್ಮಾವರ-575213, ಉಡುಪಿ ಜಿಲ್ಲೆ.
ದೂರವಾಣಿ : 0820–2563455, 9449862808, 9844086383. 9591233748 9448348569, 8050549412. 8861325564,
52, Heroor, BRAHMAVARA-576 213, Udupi District, Karnataka Ph: 0820-2563455,
Email: [email protected], Website: www.rudsetitraining.org
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023