ಸಾಲ ಮಾಡಿ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್.!
– ರಿಸರ್ವ್ ಬ್ಯಾಂಕಿನಿಂದ ಮಹತ್ವದ ನಿರ್ಧಾರ
-ಬ್ಯಾಂಕುಗಳು ತಪ್ಪು ಮಾಡಿದರೆ 50 ಸಾವಿರ ದಂಡ!
NAMMUR EXPRESS NEWS
ದೇಶದಲ್ಲಿ ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ. ಬ್ಯಾಂಕುಗಳು ಗ್ರಾಹಕರಿಗೆ ವೈಯಕ್ತಿಕ ಸಾಲ, ಗೃಹಸಾಲ ಸೇರಿದಂತೆ ವಾಹನ ಸಾಲಗಳನ್ನು ನೀಡುತ್ತದೆ.ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಸಾಲಗಳ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಸಾಲ ನೀಡುವ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ನೀಡುತ್ತಿದೆ. ಬ್ಯಾಂಕುಗಳಲ್ಲಿ ಸಾಲ ಪಡೆದವರು ಹೆಚ್ಚಿನ ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ. ಬ್ಯಾಂಕುಗಳು ನೀಡುವ ವಾಹನ ಸಾಲ ಸಾಮಾನ್ಯವಾಗಿ ವಾಹನಗಳನ್ನು ಖರೀದಿಸುವಾಗ ಆರ್ಥಿಕ ಸಮಸ್ಯೆ ಎದುರಾಗುವುದು ಸಹಜ. ಈ ಸಮಯದಲ್ಲಿ ಜನರು ಲೋನ್ ಪಡೆಯಲು ಮುಂದಾಗುತ್ತಾರೆ.
ವಾಹನಗಳ ಮೇಲೆ ಕೆಲವು ಹಣಕಾಸಿನ ಯೋಜನೆಗಳನ್ನು ವಿವಿಧ ಬ್ಯಾಂಕ್ ಗಳು ನೀಡುತ್ತದೆ. ಬ್ಯಾಂಕುಗಳು ನೀಡುವ ವಾಹನ ಸಾಲದ ಮೂಲಕ ಸಾಕಷ್ಟು ಜನರು ವಾಹನಗಳನ್ನು ಖರೀದಿಸುತ್ತಾರೆ. ಇನ್ನು ಬ್ಯಾಂಕ್ ನಿಂದ ಸಾಲ ಪಡೆದ ಮೇಲೆ ಸಾಲ ಪಡೆದವರು ಕಾಲಾನುಕ್ರಮ ಸಾಲವನ್ನು ಕಟ್ಟಬೇಕು. ಸಾಲ ಕಟ್ಟದೆ ಇದ್ದರೆ ಬ್ಯಾಂಕ್ ಸಾಲ ಪಡೆದವರ ಮೇಲೆ ಕ್ರಮ ಕೈಗೊಳ್ಳುತ್ತದೆ. ಇದೀಗ ವಾಹನಗಳ ಮೇಲೆ ಸಾಲ ಮಾಡಿದವರಿಗೆ ಹೈಕೋರ್ಟ್ ನಿಂದ ಗುಡ್ ನ್ಯೂಸ್ ಲಭಿಸಿದೆ. ಬ್ಯಾಂಕ್ ನ ಮೂಲಕ ಸಾಲ ಪಡೆದವರ ವಾಹನದ ಲೋನ್ ಗಳಿಗೆ ಸರಿಯಾದ ಸಮಯಕ್ಕೆ EMI ಪಾವತಿಸಬೇಕು. EMI ಪಾವತಿ ನಿಗದತ ಸಮಯ ದೊಳಗೆ ಆಗದಿದ್ದರೆ, ಸಾಲಗಾರರ ವಾಹನಗಳನ್ನು ಬಲವಂತವಾಗಿ ಬ್ಯಾಂಕ್ ಗಳು ವಶಪಡಿಸಿಕೊಳ್ಳುತ್ತದೆ. ಇದಕ್ಕಾಗಿ ಬ್ಯಾಂಕ್ ರಿಕವರಿ ಎಜೇಂಟ್ ಗಳನ್ನೂ ಬಳಸಿಕೊಳ್ಳುತ್ತದೆ. ಈ ಕುರಿತು ಹೈಕೊರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.
ಇನ್ನುಮುಂದೆ ಬ್ಯಾಂಕುಗಳು ಗಳು ರಿಕವರಿ ಏಜೆಂಟ್ ಗಳನ್ನೂ ಬಳಸುವಂತಿಲ್ಲ. ನ್ಯಾಯಮೂರ್ತಿಗಳಾದ ರಾಜೀವ್ ರಂಜನ್ ಪ್ರಸಾದ್ ಅವರು ಬ್ಯಾಂಕ್ ಗಳಿಗೆ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ರಿಕವರಿ ಎಜೇಂಟ್ ಗಳು ವಾಹನಗಳನ್ನು ವಶಪಡಿಸಿಕೊಳ್ಳುವುದು ಕಾನೂನುಬಾಹಿರ ಮತ್ತು ಜೀವನೋಪಾಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮೇ 19 ರಂದು ತೀರ್ಪು ನೀಡಿದ್ದಾರೆ. ಹಾಗೆಯೆ ಅಂತಹ ರಿಕವರಿ ಏಜೆಂಟ್ ಗಳ ವಿರುದ್ಧ FIR ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಬ್ಯಾಂಕುಗಳು ಇಂತಹ ತಪ್ಪು ಮಾಡಿದರೆ 50 ಸಾವಿರ ದಂಡ
ಇನ್ನು ತಪ್ಪಿತಸ್ಥ ಬ್ಯಾಂಕ್ ಗಳು ಮತ್ತು ಹಣಕಾಸು ಕಂಪನಿಗಳಿಗೆ ತಲಾ 50 ಸಾವಿರ ರೂ. ದಂಡವನ್ನು ಹೈಕೋರ್ಟ್ ವಿಧಿಸಿದೆ. ರಿಟ್ ಅರ್ಜಿಗಳ ಬ್ಯಾಚ್ ಅನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಪ್ರಸಾದ್, ಗ್ರಾಹಕರು ಇಎಂಐ ಪಾವತಿಸಲು ಡೀಫಾಲ್ಟ್ ಮಾಡಿದರೆ ವಾಹನವನ್ನು ವಶಪಡಿಸಿಕೊಳ್ಳಲು ಬ್ಯಾಂಕ್ ಗಳು ಮತ್ತು ಹಣಕಾಸು ಕಂಪನಿಗಳು ರಿಕವರಿ ಏಜೆಂಟ್ ಗಳ ಸೇವೆಗಳನ್ನು ಬಳಸಲಾಗುವುದಿಲ್ಲ ಎಂದು ಆದೇಶ ನೀಡಲಾಗಿದೆ