ಮೊಬೈಲ್ ಕಳುವಾದ್ರೆ… ಏನು ಮಾಡಬೇಕು?
– ಕರ್ನಾಟಕ ಪೊಲೀಸ್ ಇಲಾಖೆಯಿಂದ ಮೊಬೈಲ್ ಬ್ಲಾಕ್ ಮಾಡಲು ಹೊಸ ಅಪ್ಲಿಕೇಶನ್
– ಪೊಲೀಸರಿಗೆ ದೂರು ಕೂಡ ನೀಡಬಹುದು!
NAMMUR EXPRESS NEWS
ಮೊಬೈಲ್ ಇದ್ದಕ್ಕಿದ್ದ ಹಾಗೆ ಕಳೆದುಹೋಗುತ್ತದೆ. ಎಲ್ಲೋ ಬಿಟ್ಟು ಮರೆತು ಹೋದರೆ, ಅದನ್ನು ಇನ್ಯಾರೋ ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲವೇ ಯಾರೋ ಮೊಬೈಲ್ ಕದ್ದು ಹೋಗಿರತ್ತಾರೆ. ಆಗ ಏನು ಮಾಡೋದು ಮೊಬೈಲ್ ಹುಡುಕೋದು ಹೇಗೆ? ಸಿಗುತ್ತಾ? ಕಂಪ್ಲೆಂಟ್ ಕೊಡಬೇಕಾ? ಪೊಲೀಸ್ ಸ್ಟೇಷನ್ ಗೆಲ್ಲಾ ಓಡಾಡಬೇಕಾ? ಯಾರು ಓಡಾಡುತ್ತಾರೆ. ಸಿಂಪಲ್ ದಾರಿ ಇಲ್ವಾ? ಹೀಗೆ ಕಾಡುವ ಹತ್ತಾರು ಪ್ರಶ್ನೆ ಪೊಲೀಸ್ ಇಲಾಖೆಯೇ ಉತ್ತರವನ್ನು ನೀಡುತ್ತಿದೆ. ನಿಮ್ಮ ಮೊಬೈಲ್ಗಳ ಕರ್ನಾಟಕ ಪೊಲೀಸ್ ಇಲಾಖೆ ಹೇಳೋದೇನು ಅನ್ನುವುದನ್ನ ನೋಡುವುದಾದರೆ ವಿವರ ಹೀಗಿದೆ.
ನಿಮ್ಮಫೋನ್ ಕಳೆದುಹೋಗಿದೆಯೇ?
ಹಾಗಿದ್ದಲ್ಲಿ, ಕೆಎಸ್ ಪಿ ಅಪ್ಲಿಕೇಶನ್ ನಲ್ಲಿ ನಿಮ್ಮ ಕಳೆದುಹೋದ ಫೋನ್ ಅನ್ನು ಬ್ಲಾಕ್ ಮಾಡಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ. ಕಳೆದು ಹೋದ ಮೊಬೈಲ್ನ್ನು ಬ್ಲಾಕ್ ಮಾಡಲು ಪೊಲೀಸ್ ಇಲಾಖೆ ತಿಳಿಸಿದ ಈ ವಿಧಾನವನ್ನು ಬಳಸಿ
– ಮೊದಲಿಗೆ ಗೂಗಲ್ ಪ್ಲೇಸ್ಟೋರ್ ನಿಂದ ಕೆಎಸ್ ಪಿ ಅಪ್ಲಿಕೇಶನ್ ನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ.
– ಅದರಲ್ಲಿ ಮೊಬೈಲ್ ದೂರನ್ನು E-lost ನಲ್ಲಿ ವರದಿ ಮಾಡಲು ಕೆಎಸ್ ಪಿ ಅಪ್ಲಿಕೇಶನ್ ನ್ನು ಒಪೆನ್ ಮಾಡಿ ಅಲ್ಲಿರುವ E-lost ವರದಿ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ E-lost ವರದಿಯನ್ನು ನೋಂದಾಯಿಸಿ’ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ ನಿಮ್ಮ ಹೆಸರು, ವಿಳಾಸ, ಜಿಲ್ಲೆ ರಾಜ್ಯ ಮೊಬೈಲ್ ನಂಬರ್ ಹಾಗೂ ಸಾಧ್ಯವಾದರೆ ಇಮೆಲ್ ಐಡಿ ನೋಂದಾಯಿಸಿ, ನಂತರ ನೆಕ್ಸ್ಟ್ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ ಮೊಬೈಲ್ನ ಬಿಲ್ ಇದ್ದರೆ ಅದನ್ನು ಅಪ್ಲೋಡ್ ಮಾಡಿ ನಂತರ ಸೆಲೆಕ್ಟ್ ಆರ್ಟಿಕಲ್ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ “ಮೊಬೈಲ್ ” ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ ಮೊಬೈಲ್ ಮಾಹಿತಿಯನ್ನು ನೋಂದಾಯಿಸಿ ನಂತರ ಆಡ್ ಆಪ್ಷನ್ ನ್ನು ಆಯ್ಕೆ ಮಾಡಿ
– ನಂತರ ಮೊಬೈಲ್ ಕಳೆದುಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ಹಾಗೂ ಕಳೆದು ಹೋದ ಬಗೆಯ ಬಗ್ಗೆ ಮಾಹಿತಿ ನೋಂದಾಯಿಸಿ ಸುಭ್ಮಿತ್ ಆಪ್ಷನ್ ನ್ನು ಆಯ್ಕೆ ಮಾಡಿ ಕೋನೆಗೆ ರಶೀದಿಯನ್ನು ಪಡೆಯಿರಿ.