ಐಟಿ ಫೈಲಿಂಗ್ಗೆ ಜುಲೈ 31ರ ಗಡುವು
– ನಿಮ್ಮ ಆದಾಯ ತೆರಿಗೆ ಫೈಲ್ ಮಾಡಿ..
– ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ
NAMMUR EXPRESS NEWS
ನವದೆಹಲಿ: ವಯುಕ್ತಿಕ ತೆರಿಗೆ 2022-23ರ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಐಟಿಆರ್ ಫೈಲಿಂಗ್ ಮಾಡಲು ಕೊನೆಯ ಕ್ಷಣದವರೆಗೆ ಕಾಯಬೇಡಿ ಮತ್ತು ಯಾವುದೇ ಅವಧಿ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಬೇಡಿ ಎಂದು ಇಲಾಖೆ ಹೇಳಿದೆ. ಐಟಿ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕವನ್ನು ಜುಲೈ 31ರ ನಂತರ ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲದಿರುವುದರಿಂದ ಆದಾಯ ತೆರಿಗೆ ಪಾವತಿದಾರರು ಆದಷ್ಟು ಬೇಗನೆ ಐಟಿಆರ್ ಫೈಲಿಂಗ್ ಮುಗಿಸಿಕೊಳ್ಳುವುದು ಸೂಕ್ತ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಲೋತ್ರಾ ತಿಳಿಸಿದ್ದಾರೆ.
ಐಟಿ ರಿಟರ್ನ್ ಫೈಲ್ ಮಾಡಲು ಇದೇ ಜುಲೈ 31 ಕೊನೆಯ ದಿನವಾಗಿದೆ. ಈ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸುವ ಸಾಧ್ಯತೆಗಳು ಕಡಿಮೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಲೋತ್ರಾ ತಿಳಿಸಿದ್ದಾರೆ.
ವೈಯುಕ್ತಿಕ ತೆರಿಗೆದಾರರು ಐಟಿ ರಿಟರ್ನ್ಸ್ ಮಾಡುವುದು ಕಡ್ಡಾಯ. ಜತೆಗೆ ಬ್ಯಾಂಕ್ ಲೋನ್ ಮುಂತಾದ ಸೌಲಭ್ಯಗಳಿಗೆ ಕಡ್ಡಾಯ ದಾಖಲೆ ಕೂಡ ಇದಾಗಿದೆ.
ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್
HOW TO APPLY : NEET-UG COUNSELLING 2023