ಶೇರು ಮಾರುಕಟ್ಟೆಯಲ್ಲಿ ಎಲ್ಐಸಿ ಸಾಧನೆ
– ಲಾಭಾಂಶದಲ್ಲಿ ಎಲ್ಐಸಿ ದಾಖಲೆ!
– ಸರ್ಕಾರಿ ಸ್ವಾಮ್ಯದ ಕಂಪನಿಗೆ ಐದನೇ ಸ್ಥಾನ!
NAMMUR EXPRESS NEWS
ನವದೆಹಲಿ: ಶೇರು ಪೇಟೆಯಲ್ಲಿ ಉತ್ತಮ ಸಾಧನೆ ಮಾಡಿದ ಐದು ಕಂಪನಿಗಳಲ್ಲಿ ಎಲ್ಐಸಿ ಯೂ ಒಂದಾಗಿದ್ದು ದಾಖಲೆ ಮಾಡಿದೆ. ಎಲ್ಐಸಿ ಕಳೆದ ಬಾರಿಯ ಮೂರನೇ ತ್ರೈಮಾಸಿಕ ವರದಿ ಪ್ರಕಟಿಸುವುದಕ್ಕೂ ಮುನ್ನವೇ ಷೇರು ಮಾರುಕಟ್ಟೆಯಲ್ಲಿ ಎಲೈಸಿ ಷೇರುಗಳು ಶೇ.6ರಷ್ಟು ಏರಿಕೆ ಕಂಡಿದ್ದು 1,106.25 ರೂ.ಗಳನ್ನು ದಾಖಲಿಸಿದೆ. ಸರಕಾರಿ ಸ್ವಾಮ್ಯದ ವಿಮಾ ಸಂಸ್ಥೆಯಾದ ಎಲ್ಐಸಿ 2023 ಡಿಸೆಂಬರ್ನಲ್ಲಿ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಶೇ.49ರಷ್ಟು ಲಾಭ ದಾಖಲಿಸಿದ್ದು ಸಧ್ಯ ದೇಶದ 5ನೇ ಅತಿ ದೊಡ್ಡ ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನ್ನುವ ಹೆಸರಿಗೆ ಪಾತ್ರವಾಗಿದೆ.
ಐದು ಟಾಪ್ ಕಂಪನಿಗಳ ಲಾಭಾಂಶ ಈ ಕೆಳಗಿನಂತಿದೆ.
ರಿಲಯನ್ಸ್ – 19.64 ಲಕ್ಷ ಕೋಟಿ
ಟಿಸಿಎಸ್ – 15.13 ಲಕ್ಷ ಕೋಟಿ
ಎಚ್ಡಿಎಫ್ಸಿ ಬ್ಯಾಂಕ್ – 10.66 ಲಕ್ಷ ಕೋಟಿ
ಇನ್ಫೋಸಿಸ್ – 7.02 ಲಕ್ಷ ಕೋಟಿ
ಎಲ್ಐಸಿ – 6.99 ಲಕ್ಷ ಕೋಟಿ