ಅಕ್ಟೋಬರಲ್ಲಿ ಅರ್ಧ ತಿಂಗಳು ಬ್ಯಾಂಕ್ಗಳಿಗೆ ರಜೆ!
– ದೇಶದಲ್ಲಿ ಬರೋಬ್ಬರಿ 16 ದಿನಗಳ ಕಾಲ ರಜೆ
– ಆರ್ಬಿಐ ನೀಡಿರುವ ರಜೆ ಪಟ್ಟಿಯ ಪ್ರಕಟಣೆ
– ಗ್ರಾಹಕರಿಗೆ ತೊಂದರೆ: ಎಟಿಎಂ ಅಲ್ಲಿ ಹಣ ವ್ಯವಸ್ಥೆ ಮಾಡಿ…!
NAMMUR EXPRESS NEWS
ನವದೆಹಲಿ : ಅಕ್ಟೋಬರ್ ತಿಂಗಳು ಬಂದರೆ ಸಾಲು ಸಾಲು ಹಬ್ಬಗಳ ಸೀಸನ್ ಕೂಡ ಆರಂಭವಾಗುತ್ತಿದೆ. ಇದೀಗ ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 16 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಹೀಗಾಗಿ ಬ್ಯಾಂಕ್ಗಳಿಗೆ ತೆರಳುವ ಮುನ್ನ ಬ್ಯಾಂಕ್ ರಜೆಯ ಬಗ್ಗೆ ಗಮನ ಹರಿಸಿ. ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ಗೆ ರಜೆಯನ್ನು ನಿಗದಿ ಮಾಡುತ್ತದೆ. ಆರ್ಬಿಐ ನೀಡಿರುವ ಬ್ಯಾಂಕ್ ಕ್ಯಾಲೆಂಡರ್ಗಳ ಪ್ರಕಾರ, ಸಾರ್ವಜನಿಕ ರಜೆ, ಪ್ರಾದೇಶಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಎರಡು ಶನಿವಾರ, ನಾಲ್ಕು ಭಾನುವಾರ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಕ್ ವ್ಯವಹಾರವನ್ನು ಮಾಡುವ ಗ್ರಾಹಕರು ಬ್ಯಾಂಕ್ ರಜೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡಿರಬೇಕು. ಅದ್ರಲ್ಲೂ ದೇಶದಾದ್ಯಂತ ಅಕ್ಟೋಬರ್ ತಿಂಗಳಿನಲ್ಲೇ ಅತೀ ಹೆಚ್ಚು ದಿನಗಳ ಕಾಲ ಬ್ಯಾಂಕ್ ವ್ಯವಹಾರ ಬಂದ್ ಆಗಿರಲಿದೆ. ಆರ್ಬಿಐ ನೀಡಿರುವ ರಜೆ ಪಟ್ಟಿಯ ಪ್ರಕಾರ, ಸಾರ್ವಜನಿಕ ರಜೆ, ಪ್ರಾದೇಶಿಕ ರಜೆ, ಎರಡು ಶನಿವಾರ, ನಾಲ್ಕು ಬಾನುವಾರಗಳನ್ನು ಸೇರಿಸಿದರೆ ಒಟ್ಟು ಅಕ್ಟೋಬರ್ ತಿಂಗಳಿನಲ್ಲಿ 15 ಕ್ಕೂ ಹೆಚ್ಚು ಬ್ಯಾಂಕ್ ರಜೆಗಳು ಇರುತ್ತವೆ. ಆದರೆ ಬ್ಯಾಂಕ್ ರಜೆ ರಾಜ್ಯದಿಂದ ರಾಜ್ಯದ ಬದಲಾವಣೆ ಆಗಲಿದೆ.
ಅಕ್ಟೋಬರ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ:
ಅಕ್ಟೋಬರ್ 1 – ಭಾನುವಾರ
ಅಕ್ಟೋಬರ್ 2 – ಸೋಮವಾರ,ಗಾಂಧಿ ಜಯಂತಿ
ಅಕ್ಟೋಬರ್ 8 – ಭಾನುವಾರ
ಅಕ್ಟೋಬರ್ 14- ಶನಿವಾರ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ – 15 – ಭಾನುವಾರ
ಅಕ್ಟೋಬರ್ – 22 – ಭಾನುವಾರ
ಅಕ್ಟೋಬರ್ – 23 – ಸೋಮವಾರ, ದಸರಾ (ಮಹಾನವಮಿ) / ಆಯುಧ ಪೂಜೆ / ದುರ್ಗಾ ಪೂಜೆ / ವಿಜಯ ದಶಮಿ
ಅಕ್ಟೋಬರ್ – 24 – ಮಂಗಳವಾರ, ದಸರಾ / ದಸರಾ (ವಿಜಯದಶಮಿ) / ದುರ್ಗಾ ಪೂಜೆ (ಹೈದರಾಬಾದ್ ಇಂಫಾಲ್ ಹೊರತುಪಡಿಸಿ)
ಅಕ್ಟೋಬರ್ – 29 – ಭಾನುವಾರ
ಅಕ್ಟೋಬರ್ – 31 – ಮಂಗಳವಾರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ.
ಬ್ಯಾಂಕ್ ಗಳಿಗೆ ರಜೆ ಇದ್ದರೂ ಕೂಡ ಗ್ರಾಹಕರಿಗೆ ಯಾವುದೇ ರೀತಿಯಲ್ಲಿಯೂ ಸಮಸ್ಯೆ ಆಗೋದಿಲ್ಲ. ಗ್ರಾಹಕರು ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ಆನ್ಲೈನ್ ಮೂಲಕವೇ ಪಡೆಯಬಹುದಾಗಿದೆ. ಯುಪಿಐ, ಪೋನ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ರೀತಿಯ ಸೇವೆಗಳು ಲಭ್ಯವಿದೆ. ಆನ್ಲೈನ್ ಬ್ಯಾಂಕಿಂಗ್ ಸೇವೆಯನ್ನು ಹೊರತು ಪಡಿಸಿ ಬ್ಯಾಂಕ್ ಶಾಖೆಗಳಿಗೆ ತೆರಳುವ ಅನಿವಾರ್ಯತೆ ಇದ್ದಾಗ ನೀವು ರಜೆಯಾ ದಿನಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.