- ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
- ನಕಲಿ ಆಪ್ ಲಿಂಕ್ ನಂಬಿ ಹಣ ಕಳೆದುಕೊಳ್ಳಬೇಡಿ!
ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ರ ಒಳಗಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಇದಾದ ಬಳಿಕ ಜೂನ್ 30ರವರೆಗೆ ಗಡುವನ್ನು ವಿಸ್ತರಿಸಲಾಗಿದೆ. ಪಾನ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ದಂಡ ಪಾವತಿ ಮಾಡಬೇಕಿದೆ.
ಕೇಂದ್ರ ಸರ್ಕಾರ ಈ ರೀತಿ ಪಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡೋಕೆ 1000 ರೂಪಾಯಿ ದಂಡ ವಿಧಿಸುತ್ತಿರೋದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ 1000 ರೂಪಾಯಿ ದಂಡ ವಿಧಿಸಿರುವ ಸರ್ಕಾರದ ನಡೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಈ ಎಲ್ಲದರ ನಡುವೆ ಆಧಾರ್ ಹಾಗೂ ಪಾನ್ ಲಿಂಕ್ ಮಾಡಲು ಈ ಹಿಂದೆ ವಿಧಿಸಲಾಗುತ್ತಿದ್ದ 1000 ರೂಪಾಯಿ ದಂಡವನ್ನು ಈಗ ತೆಗೆದು ಹಾಕಲಾಗಿದ್ದು ಉಚಿತ ಲಿಂಕ್ಗೆ ಅವಕಾಶ ನೀಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ. ಈ ಲಿಂಕ್ನ ಮೂಲಕ ನೀವು ಆಧಾರ್ -ಪಾನ್ ಲಿಂಕ್ ಮಾಡಿದಲ್ಲಿ ನಿಮಗೆ ದಂಡ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. ಈ ಮಾತನ್ನು ನಂಬಿ ಲಿಂಕ್ ಓಪನ್ ಮಾಡಿದ ಅನೇಕರು ಖಾತೆಯಲ್ಲಿದ್ದ ಹಣ ಕಳೆದುಕೊಳ್ತಿದ್ದಾರೆ.
ಅಂದಹಾಗೆ ಇದೊಂದು ಸುಳ್ಳು ಸುದ್ದಿಯಾಗಿದ್ದು ಈ ರೀತಿಯ ಯಾವುದೇ ವಿನಾಯಿತಿಯನ್ನು ನೀಡಲಾಗಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಈವರೆಗೆ ಆಧಾರ್ ಕಾರ್ಡ್ – ಪಾನ್ ಕಾರ್ಡ್ ಲಿಂಕ್ ಮಾಡದವರು ಜೂನ್ 30ರ ಒಳಗಾಗಿ 1000 ರೂಪಾಯಿ ದಂಡ ಪಾವತಿ ಮಾಡಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ.