ಗಣೇಶ ಹಬ್ಬದಲ್ಲಿ ಈ ನಿಯಮ ಪಾಲನೆ ಮಾಡಲೇಬೇಕು!
– ಪೊಲೀಸ್ ಇಲಾಖೆ ಏನೇನು ಕ್ರಮ ಕೈಗೊಂಡಿದೆ?
– ತೀರ್ಥಹಳ್ಳಿ ತಾಲೂಕಲ್ಲಿ ಭಾರೀ ಬಂದೋಬಸ್ತ್
NAMMUR EXPRESS NEWS
ಗಣೇಶ ಹಬ್ಬವನ್ನು ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನಲ್ಲಿ ಸಂಭ್ರಮದಿಂದ ಆಚರಣೆ ಮಾಡಲು ಸಿದ್ಧತೆಯನ್ನ ನಡೆಸಿಕೊಂಡಿದ್ದಾರೆ. ಪ್ರತಿ ಊರಲ್ಲೂ ಗಣೇಶನ ಹಬ್ಬ ದ ಸಡಗರ ಶುರುವಾಗಿದೆ.ತಾಲೂಕು ಆಡಳಿತಗಳು ಪೋಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಹಬ್ಬದ ಆಚರಣೆಗೆ ಸಹಕಾರವನ್ನು ನೀಡಿದೆ. ತೀರ್ಥಹಳ್ಳಿ, ಹೊಸನಗರ, ರಿಪ್ಪನಪೇಟೆ ಸೇರಿದಂತೆ ಏಕಗವಾಕ್ಷಿ ಯೋಜನೆಯ ಅಡಿಯಲ್ಲಿ ಎಲ್ಲಾ ಪರವಾನಿಗೆಯನ್ನು ನೀಡಲಾಗಿದೆ. ರಿಪ್ಪನ ಪೇಟೆ ಪೋಲಿಸ್ ಠಾಣೆಯಲ್ಲೂ ಕೂಡ ಪರವಾನಿಗೆ ನೀಡಲಾಗಿದೆ.
ಏನೇನು ನಿಯಮ ಪಾಲನೆ ಕಡ್ಡಾಯ?
1. ಫೈಯರ್ ಸೇಫ್ಟಿ : ಅಂದರೆ ಬೆಂಕಿಗೆ ಸಂಬಂಧಿಸಿದ ದುರ್ಘಟನೆಯ ಬಗ್ಗೆ ಎಚ್ಚರದಿಂದ ಇರುವುದು, ಮಂಟಪ, ವೇದಿಕೆ, ಸುತ್ತಮುತ್ತ, ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲಿಸುವುದು. ಜೊತೆಗೆ ಮೆಸ್ಕಾಂ ಸೇರಿದಂತೆ ಇಲಾಖೆಯ ಅನುಮೋದನೆ ಪಡೆಯುವಂತೆ ಸೂಚಿಸಲಾಗಿದೆ. ಅನೈತಿಕವಾಗಿ ವಿದ್ಯುತ್ತನ್ನು ಪಡೆದುಕೊಳ್ಳುವುದು ಕಾನೂನುಬಾಹಿರವಾಗಿದೆ.
2. ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ದಿನ ಮೆರವಣಿಗೆ ಮತ್ತು ಇತರೆ ಕಾರ್ಯಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
3. ಪರಿಸರ ಸ್ನೇಹಿ ಗಣಪತಿಯನ್ನ ಎಲ್ಲೆಡೆ ಇಡುವಂತೆ ಸೂಚನೆಯನ್ನು ಹೊರಡಿಸಲಾಗಿದೆ.
4. ಶಾಂತಿ ಭಂಗ ಚಟುವಟಿಕೆ ಹಾಗೂ ಇತರೆ ಘಟನೆಗಳಿಗೆ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ನೀಡಲು ಸ್ವಯಂಸೇವಕರನ್ನ ನೇಮಕ ಮಾಡುವಂತೆ ಸೂಚನೆ ಹೊರಡಿಸಲಾಗಿದೆ.
5. ಇನ್ನೊಬ್ಬರಿಗೆ ನೋವಾಗುವಂತೆ ಘೋಷಣೆ ಕೂಗುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು, ಇತರೆ ವ್ಯವಸ್ಥೆಗಳ ಬಗ್ಗೆ ಪೊಲೀಸರು ಕಣ್ಣು ಇಡಲಾಗಿದೆ.
6. ಅಬಕಾರಿ ಇಲಾಖೆಯವರು ಪರಿಸ್ಥಿತಿಗಳಿಗೆ ತಕ್ಕಂತೆ ಹಾಗೂ ಮಧ್ಯ ನಿಷೇಧ ಕ್ರಮವನ್ನು ತೆಗೆದುಕೊಂಡಿದೆ.
7. ಗಣೇಶ ಹಬ್ಬವನ್ನು ಎಲ್ಲರ ಸಹಕಾರದಿಂದ ಹಾಗೂ ಸಹಭಾಗಿತ್ವದಿಂದ ಗಲಾಟೆ, ಘರ್ಷಣೆ ಆಗದಂತೆ ಆದೇಶಿಸಲಾಗಿದೆ.
8. ಪೋಲಿಸ್ ನಂಬರ್ ಹಾಗೂ ಆಂಬುಲೆನ್ಸ್ ನಂಬರ್, ಗ್ರಹ ರಕ್ಷಕ ದಳ, ಫೈರ್, ಸ್ಥಳೀಯರ ಆಸ್ಪತ್ರೆ ನಂಬರ್ ಪ್ರದರ್ಶಿಸಬೇಕು.
9. ಯಾವುದೇ ಅಹಿತಕರ ಘಟನೆ ನಡೆದರೆ ಆಯೋಜಕರನ್ನೇ ಹೊಣೆ ಮಾಡಲಾಗುವುದು.
ಪೊಲೀಸ್ ಬಂದೋಬಸ್ತ್!
ಪೊಲೀಸ್ ವ್ಯವಸ್ಥೆ ಅಚ್ಚುಕಟ್ಟಿನ ಭದ್ರತೆ ಮಾಡಿದ್ದು ಗಣೇಶ ಹಬ್ಬದ ಆಚರಣೆ ವೇಳೆ ಅನೇಕ ರೀತಿಯ ಸೂಚನೆಗಳನ್ನು ನೀಡಿದೆ.
ಪೊಲೀಸರು ಇಲಾಖೆ ಎಲ್ಲಾ ಕಡೆಯೂ ಕೂಡ ಗಣೇಶ ಹಬ್ಬದ ಆಚರಣೆಗೆ ಬಿಗಿ ಬಂದೋಬಸ್ತ್ ಮಾಡಿದ್ದು ಜೊತೆಗೆ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ತೀರ್ಥಹಳ್ಳಿ ಪೊಲೀಸರು ತೀರ್ಥಹಳ್ಳಿಯ ಎಲ್ಲಾ ಕಡೆ ಭಾರೀ ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ.