ಈಡಿಗ ಹಾಗೂ 26 ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
– ಅ.25ರಿಂದ ಅರ್ಜಿ ಅಹ್ವಾನ: ನೀವೂ ಅರ್ಜಿ ಹಾಕಬಹುದು
– ಪದವಿ, ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ವ್ಯಾಸಂಗ ಮಾಡುತ್ತಿರುವವರಿಗೆ ಅವಕಾಶ
NAMMUR EXPRESS NEWS
ಶ್ರೀ. ಜೆ. ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ (JPNP) ವತಿಯಿಂದ 2024- 2025ನೇ ಸಾಲಿನಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಮತ್ತು B.Ed ವ್ಯಾಸಂಗ ಮಾಡುತ್ತಿರುವ ಆರ್ಯ ಈಡಿಗ ಮತ್ತು 26 ಪಂಗಡಗಳ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 25ನೇ ಅಕ್ಟೋಬರ್ 2024 ರಿಂದ ಆನ್ಲೈನ್ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೆಬ್ಸೈಟ್ ಮೂಲಕ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10ನೇ ನವೆಂಬರ್ 2024.
ವೆಬ್ಸೈಟ್ ವಿಳಾಸ Jpnp.org.in
ಆದಷ್ಟು ಕರ್ನಾಟಕದ ಎಲ್ಲಾ ಮೂಲೆ ಮೂಲೆಯಲ್ಲಿ ಇರುವ ಕಟ್ಟ ಕಡೆಯ ಅರ್ಹ ವಿದ್ಯಾರ್ಥಿಗಳಿಗೂ ಈ ವಿದ್ಯಾರ್ಥಿ ವೇತನ ತಲುಪಿಸುವ ಗುರಿ ಹೊಂದಲಾಗಿದೆ.
ಶಿವು ಹೊದಲ
ಸಂಚಾಲಕರು
ಶ್ರೀ J P ನಾರಾಯಣಸ್ವಾಮಿ ಪ್ರತಿಷ್ಠಾನ, ಬೆಂಗಳೂರು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನೀಡಲು ತೀರ್ಥಹಳ್ಳಿಯ ಸಂತೆ ಮಾರುಕಟ್ಟೆ ರಸ್ತೆಯ ಶ್ರೀ ನಾರಾಯಣ ಗುರು ಸೊಸೈಟಿಗೆ ಭೇಟಿ ನೀಡಲು ಮನವಿ ಮಾಡಲಾಗಿದೆ.