ಇದು ಸೋಷಿಯಲ್ ಮೀಡಿಯಾ ಜಮಾನ!
– ಒಳ್ಳೆಯದಕ್ಕೆ ಬಳ್ಸಿದ್ರೆ ಒಳ್ಳೇದು, ಕೆಟ್ಟದಕ್ಕೆ ಬಳ್ಸಿದ್ರೆ ಕೆಟ್ಟದ್ದು
– ಸೋಷಿಯಲ್ ಮೀಡಿಯಾ ಚಟ ಅಂಟಿದ್ರೆ ಬಿಡೋದೇ ಇಲ್ಲ
– ಯುವ ಜನತೆಯ ಬದುಕು ಬಹುತೇಕ ಇದಕ್ಕೆ ಬಲಿ!?
ಸೋಷಿಯಲ್ ಮೀಡಿಯಾ ದಿನದ ವಿಶೇಷ
ಈ ಯುಗವನ್ನು ಸೋಷಿಯಲ್ ಮೀಡಿಯಾ ಯುಗ ಎಂದರೆ ಕಂಡಿತಾ ಸುಳ್ಳು ಆಗೋದಿಲ್ಲ. ಹುಟ್ಟಿದ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗಿನ ಅರ್ಧಕ್ಕಿಂತ ಹೆಚ್ಚಿನ ಜನರ ಪರಪಂಚ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ಆಗಿದೆ.
ಮಾನವ ಸಹಜತೆಯಿಂದ ದೂರ ಹೋಗಿ ಬೆರಗಿನ ಪ್ರಪಂಚವನ್ನೇ ತನ್ನ ಪ್ರಪಂಚ ಎಂದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚೂ ಬೆಳೆದಂತೆ ಸಂಬಂಧಗಳು ಕಾಲಕ್ರಮೇಣ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಎಲ್ಲವೂ ಕಾಲ್ಪನಿಕ ಜಗತ್ತಿಗೆ ಜಾರುತ್ತಿದೆ.
ದೇಶದ ಅಸ್ತಿ ಎಂದೇ ಕರೆಯುವ ಯುವ ಜನತೆಯು ದಿನದ 2 4 ಗಂಟೆ ಫೋನ್, ಸಾಮಾಜಿಕ ಜಾಲತಾಣ ಎಂದೂ ಸಮಯವನ್ನು ವ್ಯಯ ಮಾಡುತ್ತಾರೆ.ತಮ್ಮ ಅರ್ಹತೆ ಮತ್ತೆ ಕೌಶಲ್ಯವನ್ನು ವ್ಯಯ ಮಾಡುತ್ತಿದ್ದಾರೆ. ಜತೆಗೆ ಸಾಮಾಜಿಕ ಅಸಮತೋಲನ, ಅಪರಾಧ ಹೆಚ್ಚಳ, ನಿರುದ್ಯೋಗ, ವ್ಯಸನಕ್ಕೂ ಕಾರಣ ಆಗುತ್ತಿದೆ.
ಸಾಮಾಜಿಕ ಜಾಲತಾಣ ಎಂಬ ರಾಕ್ಷಸನ ಬಲೆಗೆ ಈಗಾಗಲೇ ಜನ ಸಿಕ್ಕಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಲೈಫ್ ಆಗಿದೆ. ವಾಟ್ಸಪ್ ಚಾಟ್ ವ್ಯವಹಾರ ಆಗಿದೆ. ಯೂಟ್ಯೂಬ್ ವಿಡಿಯೋ ಅವರ ಸಮಾಜ ಆಗಿದೆ. ಹೀಗಾದ್ರೆ ಕಷ್ಟ ಕಷ್ಟ!
ಒಳ್ಳೆಯದೂ ಉಂಟು!
ಸಾಮಾಜಿಕ ಜಾಲ ತಾಣ ಜನರ ಅಭಿವೃದ್ಧಿ, ಅಭಿವ್ಯಕ್ತಿ ಸ್ವತಂತ್ರಕ್ಕೆ ಕೈಕನ್ನಡಿ. ಆದ್ರೆ ಅದನ್ನು ಹೇಗೆ ಬಳಸಿಕೊಳ್ಳಬೇಕೋ ಹಾಗೆ ಬಳಸಿಕೊಳ್ಳಬೇಕು. ಈಗಿನ ಡಿಜಿಟಲ್ ಯುಗಕ್ಕೆ ಸೋಷಿಯಲ್ ಮೀಡಿಯಾ ಅತ್ಯಂತ ಹೆಚ್ಚು ಕೊಡುಗೆ ನೀಡಿದೆ. ಎಲ್ಲಾ ಅವಕಾಶ ಈಗ ಕೈಯಲ್ಲೇ ಸಿಗುತ್ತಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023