ಚಂದ್ರನಂಗಳದಲ್ಲಿ ಭಾರತದ ಮುದ್ರೆ!
– ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಏನ್ ಮಾಡ್ತಿದೆ?
– 2025ರಲ್ಲಿ ಚಂದ್ರನತ್ತ ಮನುಷ್ಯರನ್ನು ಕಳಿಸುತ್ತೆ ಅಮೇರಿಕ!
NAMMUR EXPRESS NEWS : ಚಂದ್ರಯಾನದಲ್ಲಿ ಭಾರತ ಗೆದ್ದಿದೆ. ಈಗಾಗಲೇ ಚಂದ್ರಯಾನದಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್ನಲ್ಲಿ 4 ವೈಜ್ಞಾನಿಕ ಉಪಕರಣಗಳಿವೆ. ಅವುಗಳು ಚಂದ್ರನಲ್ಲಿ ಕಂಪನದ, ಚಂದ್ರನ ಮೇಲ್ಮನಲ್ಲಿ ಶಾಖ ಸಾಗುವ ರೀತಿಯನ್ನು, ಚಂದ್ರನ ಮೇಲ್ಮನ ಬಳಿ ಇರುವ ಪ್ಲಾಸ್ಮಾ ವಾತಾವರಣವನ್ನು ಅಧ್ಯಯನ ನಡೆಸಲಿವೆ. ಪ್ರಗ್ಯಾನ್ ರೋವರ್ನಲ್ಲಿ ಮುಖ್ಯವಾಗಿ ಎರಡು ವೈಜ್ಞಾನಿಕ ಉಪಕರಣಗಳಿದ್ದು, ಚಂದ್ರನ ಮೇಲ್ಮನ ಸಂರಚನೆಯ ಅಧ್ಯಯನ ಮಾಡಲಿದೆ.
ಚಂದ್ರನ ಅಂಗಳದಲ್ಲಿ ಪುಟಾಣಿ ರೋಬೋ!
ಜಗತ್ತಿನ ದೊಡ್ಡ ದೊಡ್ಡ ದೇಶಗಳು ಚಂದ್ರಲೋಕದ ಪೈಪೋಟಿಗೆ ಬಿದ್ದಿರುವಾಗಲೇ ಭಾರತ, ದೊಡ್ಡ ಹೆಜ್ಜೆ ಇಟ್ಟಿದೆ. ಚಂದ್ರಲೋಕಕ್ಕೆ ಪ್ರಯಾಣ ಆರಂಭಿಸಿಬಿಟ್ಟಿದೆ. ಈ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್, ಚಂದ್ರಲೋಕದಲ್ಲಿ ಕಾಲಿಟ್ಟಿವೆ. ಚಂದ್ರಲೋಕ ತಲುಪಿದ ಬಳಿಕ ಈ ಎರಡು ಒಟ್ಟಿಗೆ ಕಾರ್ಯಾಚರಣೆ ನಡೆಸಲಿವೆ. ಪರಸ್ಪರ ಸಂಪರ್ಕ ಸಾಧಿಸಿಕೊಂಡು ಕೆಲಸ ಮಾಡಲಿವೆ. ಈ ಲ್ಯಾಂಡರ್ ಮತ್ತು ರೋವರ್ ಕಾಲಿಟ್ಟಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ‘ವಾಟರ್ ಐಸ್’ ಮತ್ತು ಬೆಲೆಬಾಳುವ ಮಿನರಲ್ಸ್ ಇರುವ ಸಾಧ್ಯತೆ ಇದೆ. ಅಲ್ಲದೆ ಭೂಮಿಯಿಂದ ಚಂದ್ರನ ದೂರವನ್ನು ನಿಖರವಾಗಿ ಅಳೆಯಲಿವೆ.
ಪ್ರಗ್ಯಾನ್ ಏನು ಮಾಡುತ್ತೆ?
ಪ್ರಗ್ಯಾನ್ ಹೆಸರಿನ ಈ ರೋವರ್ನಲ್ಲಿ ಮುಖ್ಯವಾಗಿ ಎರಡು ವೈಜ್ಞಾನಿಕ ಉಪಕರಣಗಳಿವೆ. ಎಕ್ಸ್ ರೇ ಮತ್ತು ಲೇಸರ್ ಉಪಕರಣಗಳಿವೆ. ಈ ಎರಡರ ಸಹಾಯದಿಂದ ರೋವರ್, ಚಂದ್ರನ ಮೇಲ್ಮನ ಸಂರಚನೆಯ ಅಧ್ಯಯನ ಮಾಡಲಿದೆ. ಚಂದ್ರನ ಮಣ್ಣಿನಲ್ಲಿರುವ ಖನಿಜ ಮತ್ತು ರಾಸಾಯನಿಕ ವಸ್ತುಗಳ ಬಗ್ಗೆ ವಿಶ್ಲೇಷಣೆ ಮಾಡಲಿದೆ.
ಚಂದ್ರನ ಮೇಲೆ ಇಳಿದಿರುವ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ 14 ದಿನ ಸಕ್ರಿಯವಾಗಿರುತ್ತವೆ. ಚಂದ್ರನ ಮೇಲಿನ ಒಂದು ದಿನ, ಭೂಮಿಯ ಮೇಲೆ 14 ದಿನಕ್ಕೆ ಸಮ. ಈ ಎರಡು ಚಂದ್ರನ ಮೇಲೆಸೂರ್ಯಾಸ್ತವಾದರೆ, ಚಂದ್ರನಲ್ಲಿ ಉಷ್ಣಾಂಶ ಕುಸಿದು ಹೋಗುತ್ತೆ. ಆ ಬಳಿಕ ಲ್ಯಾಂಡರ್ ಮತ್ತು ರೋವರ್ ಕೆಲಸ ಮಾಡೋದು ಕಷ್ಟ.
ಭೂಮಿ ಮೇಲೆ ಚಂದ್ರನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿಗಳು ಪತ್ತೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇಸ್ರೋ ವಿಜಾನಿಗಳಿದ್ದಾರೆ.
ಚಂದ್ರನ ದಕ್ಷಿಣದಲ್ಲಿ ಇದೆ ಖನಿಜ ರಾಶಿ!
ಉಪಗ್ರಹ ಚಂದ್ರನಲ್ಲಿ ನೀರು ಹೆಪ್ಪುಗಟ್ಟಿದ ರೂಪದಲ್ಲಿದೆ. ಚಂದ್ರನಲ್ಲಿರುವ ಈ ನೀರಿನ ಕುರಿತು ಸಂಶೋಧನೆಗೆ ಪೈಪೋಟಿ ನಡೆಯುತ್ತಿದೆ. ಚಂದ್ರನಲ್ಲಿನ ನೀರು ಬಳಕೆ ಯೋಗ್ಯವಾ ಎಂಬುದನ್ನು ತಿಳಿದುಕೊಳ್ಳಲೂ ಜಗತ್ತಿನ ರಾಷ್ಟ್ರಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಚಂದ್ರನ ಮಣ್ಣಿನಲ್ಲಿ ಅತ್ಯಮೂಲ್ಯ ಹೀಲಿಯಂ-3 ಇರಬಹುದಾದ ಸಾಧ್ಯತೆ ಇದ್ದು, ಕೆಲವು ಅಂದಾಜುಗಳ ಪ್ರಕಾರ, ಚಂದ್ರನಲ್ಲಿ 10 ಲಕ್ಷ ಟನ್ ಹೀಲಿಯಂ-3 ಇದೆ ಎನ್ನಲಾಗಿದೆ. ಚಂದ್ರನಲ್ಲಿ ಐರನ್, ಟೈಟೇನಿಯಂ, ಅಲ್ಯೂಮಿನಿಯಂ, ಮ್ಯಾಗ್ನೆಷಿಯಂ ಮತ್ತು ಸಿಲಿಕಾನ್ ಸಹ ಹೇರಳವಾಗಿವೆ ಎಂಬ ನಿರೀಕ್ಷೆಗಳಿವೆ.1972ರ ಬಳಿಕ ಇದೇ ಮೊದಲ ಬಾರಿಗೆ ಚಂದ್ರಲೋಕಕ್ಕೆ ಮನುಷ್ಯರನ್ನು ಕಳುಹಿಸಲು ಅಮೆರಿಕ ಸಜ್ಜಾಗುತ್ತಿದೆ. 2025 ರಲ್ಲಿ ಅಮೆರಿಕದ ಗಗನಯಾತ್ರಿಗಳು ಚಂದ್ರನ ಅಂಗಳಕ್ಕೆ ಹೋಗಲಿದ್ದಾರೆ.
ಬಾಹ್ಯಾಕಾಶದಲ್ಲಿ ಭಾರತ, ಇಸ್ರೋ ಮುದ್ರೆ!
ವಿಕ್ರಂ ಲ್ಯಾಂಡರ್ ನೊಳಗಿದ್ದ ಪ್ರಗ್ಯಾನ್ ರೋವರ್ ಚಂದಿರನ ಅಂಗಳಕ್ಕೆ ಕಾಲಿಟ್ಟಿದೆ. ಅದು ಅಲ್ಲಿ ಮುಂದಿನ 14 ದಿನಗಳ ಕಾಲ (ಭೂಮಿಯ ಕಾಲಮಾನ) ಸುತ್ತಾಡಿ ವಿವಿಧ ಮಾಹಿತಿಗಳನ್ನು ಕಲೆಹಾಕಲಿದೆ. ಇದೀಗ ಈ ಪ್ರಗ್ಯಾನ್ ರೋವರ್ ಸುತ್ತು ಹಾಕುವ ಕಡೆಗಳಲ್ಲಿ ನಮ್ಮ ರಾಷ್ಟ್ರೀಯ ಲಾಂಛನ ಮತ್ತು ಇಸ್ರೋ ಲಾಂಛನದ ಗುರುತನ್ನು ಚಂದಿರನ ನೆಲದಲ್ಲಿ ಇದು ಗುರುತು ಹಾಕಲಿದೆ. ಈ ಮೂಲಕ ಚಂದಿರನ ಈ ಭಾಗದಲ್ಲಿ ಭಾರತದ ಸಾಧನೆಯ ನೆನಪು ಶಾಶ್ವತವಾಗಿ ಉಳಿಯುವಂತಹ ಕಾರ್ಯವನ್ನು ಇಸ್ರೋ – ಹಾರಿಬಿಟ್ಟ ವಿಕ್ರಂ ಲ್ಯಾಂಡರ್ ಒಳಗಿದ್ದ ಕಾಫಿ ಟೇಬಲ್ ಗಾತ್ರದ ಪ್ರಗ್ಯಾನ್ ರೋವರ್ ಮಾಡಲಿದೆ.
ಚಂದ್ರಯಾನ 3ರ ಉಡ್ಡಯನಕ್ಕೂ ಮೊದಲು ಇಸ್ರೋ ಈ ವಿಡಿಯೋದಲ್ಲಿ ತೋರಿಸಿದಂತೆ ಚಂದಿರನ ನೆಲದಲ್ಲಿ ರೋವರ್ ಚಲಿಸುತ್ತಿರುವಂತೆ ಅದರ ಹಿಂಭಾಗದ ಎರಡೂ ಚಕ್ರಗಳು, ನಮ್ಮ ರಾಷ್ಟ್ರ ಲಾಂಛನವಾಗಿರುವ ಮೂರು ಸಿಂಹಗಳು ಮತ್ತು ಇಸ್ರೋದ ಲೋಗೋವನ್ನು ಆ ಪ್ರದೇಶದಲ್ಲಿ ಅಚ್ಚು ಹಾಕಲಿದೆ.