ರಾಷ್ಟ್ರಪಿತನಿಗೆ ದೇಶದ ನಮನ..!
– ಅಹಿಂಸೆ ಮೂಲಕ ದೇಶ ಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ
– ದೇಶದೆಲ್ಲೆಡೆ ಗಾಂಧಿ ಜಯಂತಿ ಆಚರಣೆ: ನುಡಿ ನಮನ
NAMMUR EXPRESS NEWS
ಭಾರತಕ್ಕೆ ಬ್ರಿಟೀಷರ ದಾಸ್ಯದಿಂದ ಮುಕ್ತಿ ಕೊಡಿಸಿದ ಮಹಾನ್ ನಾಯಕ ಗಾಂಧೀಜಿ ಅವರ ತ್ಯಾಗ, ಸೇವೆಯನ್ನು ನೆನೆಯುವ ಗಾಂಧಿಯವರ ಜನ್ಮದಿನವನ್ನು ದೇಶದ ಎಲ್ಲಾ ಕಡೆ ಆಚರಣೆ ಮಾಡಲಾಗುತ್ತದೆ.1869ರಲ್ಲಿ ಭಾರತದ ಪೋರಬಂದರ್ನಲ್ಲಿ ಗಾಂಧಿ ಜನಿಸಿದರು. ತಂದೆ ಕರಮಚಂದ ಗಾಂಧಿ ಮತ್ತು ತಾಯಿ ಪುತಲಿಬಾಯಿ. 13 ನೇ ವಯಸ್ಸಿನಲ್ಲಿ, ಮಹಾತ್ಮ ಗಾಂಧಿಯವರು ಕಸ್ತೂರ್ಬಾ ಅವರನ್ನು ವಿವಾಹವಾದರು, ಇದು ನಿಯೋಜಿತ ವಿವಾಹವಾಗಿದೆ. ಅವರಿಗೆ ಹರಿಲಾಲ್, ಮಣಿಲಾಲ್, ರಾಮದಾಸ್ ಮತ್ತು ದೇವದಾಸ್ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಕಸ್ತೂರ್ಬಾ ಅವರು1944 ರಲ್ಲಿ ಇಹ ಲೋಕ ತ್ಯಜಿಸಿದರು.
ಇವರು ತನ್ನ ಕೊನೆಯ ಕ್ಷಣದ ಒಳಗೂ ಗಾಂಧಿಯ ಎಲ್ಲ ಕೆಲಸದಲ್ಲೂ ಪಾಲುದಾರರಾಗಿದ್ದರು.
ಗಾಂಧಿಯವರು ತನ್ನ18 ನೇ ವಯಸ್ಸಿನಲ್ಲಿ ಓದಲು ವಿದೇಶಕ್ಕೆ ತೆರಳಿ ಆಲ್ಲಿ ಕಾನೂನು ಪದವಿಯನ್ನು ಪಡೆದರು. ದಕ್ಷಿಣ ಆಫ್ರಿಕಕ್ಕೆ ಹೋದಾಗ ಅಲ್ಲಿನ ಕಪ್ಪು ಬಿಳಿಯರ ಮೇಲಿನ ತಾರತಮ್ಯ ಅವರನ್ನು ಹೋರಾಟಕ್ಕೆ ದುಮುಕುವಂತೆ ಮಾಡಿತು. ಆಲ್ಲಿ ಹೋರಾಡಿ ಕರಿಯರಿಗೆ ದಕ್ಷಿಣ ಆಫ್ರಿಕನ್ನರು ಮತದಾನದ ಹಕ್ಕನ್ನು ಗಳಿಸಿದ ನಂತರದ ವರ್ಷಗಳಲ್ಲಿ (1994), ಹಲವಾರು ಸ್ಮಾರಕಗಳೊಂದಿಗೆ ಗಾಂಧಿಯನ್ನು ರಾಷ್ಟ್ರೀಯ ನಾಯಕ ಎಂದು ಘೋಷಿಸಲಾಯಿತು.
ಜ.30 1948ರಲ್ಲಿ ಹಿಂದೂ ರಾಷ್ಟ್ರೀಯವಾದಿ ನಾಥುರಾಮ್ ಗೋಡ್ಸೆ ಗಾಂಧಿಯನ್ನು ಶೂಟ್ ಮಾಡಿ ಕೊಲೆ ಮಾಡಲಾಯಿತು.
ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯ ಚುಕ್ಕಾಣಿಯನ್ನು ಹಿಡಿದವರು.ಅನೇಕ ಹೋರಾಟಗಾರು ಹುರಿದುಂಬಿಸುತ್ತಾ ಹಲವಾರು ಚಳುವಳಿಗಳನ್ನು ಆರಂಭಿಸಿದರು. ಬ್ರಿಟಿಷ್ ವಿರುದ್ಧ ಹೊರಾಡಲು ಮಹಾತ್ಮ ಗಾಂಧೀಜಿ ಅವರು ಭಾರತದ ಜನರಿಗೆ ನೀಡಿದ ದಿವ್ಯಾಸ್ತ್ರವೆಂದರೆ, ಸತ್ಯಾಗ್ರಹ, ವಿದೇಶಿವಸ್ತುಗಳಿಗೆ ಬಹಿಷ್ಕಾರ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಅಮರಣ ಉಪವಾಸ ಇವುಗಳನ್ನು ಮುನ್ನೆಡೆಸುವ ಮೂಲಕ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ್ದರು.
ಅವರು ಭಾರತಕ್ಕೆ ಹಿಂದಿರುಗಿದಾಗ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧಿಯವರ ಆಕ್ರಮಣವು ವೇಗವನ್ನು ಪಡೆಯಿತು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸಿದ್ಧಾಂತ ಮತ್ತು ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು, ಅಹಿಂಸಾತ್ಮಕ ಪ್ರತಿರೋಧ ಮತ್ತು ನಾಗರಿಕ ಅಸಹಕಾರವನ್ನು ಬ್ರಿಟಿಷ್ ದಬ್ಬಾಳಿಕೆಗೆ ಸವಾಲು ಹಾಕುವ ಸಾಧನವಾಯಿತು.
1942ರಲ್ಲಿ ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳುವಳಿ ಆರಂಭಿಸಿದರು. ಇದೇ ಕೊನೆಯ ಹೋರಾಟ ಎಂದ ಗಾಂಧೀಜಿಯವರು, ಭಾರತೀಯರಿಗೆ ಮಾಡು ಇಲ್ಲವೆ ಮಡಿ ಎನ್ನುವ ಕರೆಯನ್ನು ನೀಡಿದರು, ಈ ಹೋರಾಟದಲ್ಲಿ ಸಾಕಷ್ಟು ಸಾವು, ನೋವುಗಳು ಸಂಭವಿಸಿದರೂ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಛಲ ಬಿಡದ ಹೋರಾಟದಿಂದ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು.
ಅಂತರಾಷ್ಟ್ರೀಯ ಅಹಿಂಸಾ ದಿನ :
ಪ್ರತಿ ವರ್ಷ ಅಕ್ಟೋಬರ್ 2 ರಂದು, ರಾಷ್ಟ್ರಕ್ಕೆ ಅವರ ಕೊಡುಗೆಗಳನ್ನು ಗೌರವಿಸಲು ರಾಷ್ಟ್ರೀಯ ರಜಾದಿನವನ್ನು ಆಚರಿಸಲಾಗುತ್ತದೆ. ಜೂನ್ 15, 2007 ರಂದು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅವರ ಗೌರವಾರ್ಥವಾಗಿ ಅಕ್ಟೋಬರ್ 2 ಅನ್ನು ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸಿತು. ಈ ದಿನವು ಶಾಂತಿ, ಸಹಿಷ್ಣುತೆ, ತಿಳುವಳಿಕೆ ಮತ್ತು ಅಹಿಂಸೆಯ ಸಂಸ್ಕೃತಿಯನ್ನು ಸುರಕ್ಷಿತಗೊಳಿಸುವ ಗುರಿಯೊಂದಿಗೆ ಅಹಿಂಸೆಯ ಪರಿಕಲ್ಪನೆಯ ಸಾರ್ವತ್ರಿಕ ಮಹತ್ವವನ್ನು ಗೌರವಿಸುತ್ತದೆ.
ಮಹಾತ್ಮಾ ಗಾಂಧಿಯವರು ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು ಪ್ರಯತ್ನಿಸಿದರು ಮತ್ತು ಅದರಲ್ಲಿ ಅವರು ಯಶಸ್ವಿಯಾದರು. ಸಮಾಜದಲ್ಲಿ ಹರಡಿರುವ ಅನಿಷ್ಟಗಳನ್ನು ಹೋಗಲಾಡಿಸಲು, ತಾರತಮ್ಯ ತೊಲಗಿಸಲು, ಅಸ್ಪೃಶ್ಯತೆ ತೊಲಗಿಸಲು, ಸಮಾಜಕ್ಕೆ ಅಹಿಂಸೆ ಮತ್ತು ಸತ್ಯದ ಮಾರ್ಗದಲ್ಲಿ ನಡೆಯಲು ದಾರಿದೀಪ ಆಯ್ತು . ಇವರನ್ನು ರಾಷ್ಟ್ರಪಿತ ಬಾಪೂಜಿ ಎಂದು ತುಂಬಾ ಪ್ರೀತಿಯಿಂದ ಕರೆಯಲಾಗುತ್ತದೆ.
ದೌರ್ಜನ್ಯಗಳ ವಿರುದ್ಧ ಅಹಿಂಸಾ ಮಾರ್ಗದಲ್ಲಿ ನಡೆದು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ತಮ್ಮ ಪಾತ್ರವನ್ನು ವಹಿಸಿದ್ದರು. ಗಾಂಧೀಜಿಯವರು ನಮನು ಅಗಲಿರಬಹುದು ಆದರೆ ಚಿಂತನೆಗಳು ಎಲ್ಲರಿಗೂ ಮಾರ್ಗದರ್ಶಿಸಲ್ಪಡುತ್ತಿದ್ದೇವೆ.
ಜನ್ಮದಿನವನ್ನು ಸ್ಮರಿಸುವಲ್ಲಿ ಮಾತ್ರವಲ್ಲದೆ ಅವರ ಅದಮ್ಯ ಮನೋಭಾವ, ನಾಯಕತ್ವ ಮತ್ತು ಸಾಮಾಜಿಕ ನ್ಯಾಯ ಮತ್ತು ಶಾಂತಿಗಾಗಿ ಅಚಲ ಬದ್ಧತೆಯನ್ನು ಗುರುತಿಸುವಲ್ಲಿಯೂ ಇದೆ.
ಸ್ವಚ್ಛ ಭಾರತ್ ಮಿಷನ್ ಮೂಲಕ ಶ್ರಮದಾನ
2014ರ ಗಾಂಧಿ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು ಇಲ್ಲಿದ ಪ್ರತಿ ವರ್ಷ ಗಾಂಧಿ ಜಯಂತಿಯ ಅಂಗವಾಗಿ ಶಾಲಾ ಕಾಲೇಜಿನಲ್ಲಿ ಹಾಗೂ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಶ್ರಮದಾನವನ್ನು ನಡೆಸಿ ಗೌರವನ್ನು ನೀಡಲಾಗುತ್ತದೆ.