ಅಡಿಕೆ ಆಯ್ತು, ಈಗ ಕೊಬ್ಬರಿಗೂ ಡಿಮ್ಯಾಂಡ್!
– ಇನ್ನೊಂದೆಡೆ ಟೊಮೆಟೊ, ಶುಂಠಿಗೆ ಕಳ್ಳರ ಕಾಟ!
– ಕುಸಿತವಾಗಿದ್ದ ಕೊಬ್ಬರಿ ದರವೂ ಏರಿಕೆ
NAMMUR EXPRESS NEWS
ರಾಜ್ಯ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆ ಸದ್ಯ ಏರಿಕೆಯ ಹಾದಿಯಲ್ಲಿದ್ದು ತೆಂಗು ಬೆಳೆಗಾರರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ತಿಪಟೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಕ್ವಿಂಟಾಲ್ಗೆ ಗರಿಷ್ಠ 10000 ರೂಪಾಯಿಗಳಿಗೆ ಮಾರಾಟವಾಗಿದೆ. ಇನ್ನು 57 ಸಾವಿರ ದಾಟಿದ ಬಳಿಕ ಅಲ್ಪ ಕುಸಿತ ಕಂಡಿದ್ದ ಅಡಿಕೆ ಕೂಡ ಏರಿಕೆಯಾಗುತ್ತಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಕೂಡ ಕೊಬ್ಬರಿ ದರ ಏರಿಕೆ ಕಂಡಿದೆ. ಕ್ವಿಂಟಾಲ್ ಕೊಬ್ಬರಿ ಗರಿಷ್ಠ 10000 ರೂಪಾಯಿಗೆ ಮಾರಾಟವಾಗಿದ್ದರೆ, ಸರಾಸರಿ ದರ 9500 ರೂಪಾಯಿ ಆಗಿತ್ತು. ಜುಲೈ 26ರಂದು ಗರಿಷ್ಠ ದರ 10206 ರೂಪಾಯಿವರೆಗೆ ಮಾರಾಟವಾಗಿತ್ತು. ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಗರಿಷ್ಠ 10008 ರೂಪಾಯಿ ತಲುಪಿದೆ.
ತುರುವೇಕೆರೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಗರಿಷ್ಠ 10,200 ವರೆಗೆ ಮಾರಾಟವಾಗಿದೆ. ತುಮಕೂರು ಮಾರುಕಟ್ಟೆಯಲ್ಲಿ ಕೂಡ ಕೊಬ್ಬರಿ ಗರಿಷ್ಠ 9950 ರೂಪಾಯಿವರೆಗೆ ಮಾರಾಟವಾಗಿದೆ. ಕ್ವಿಂಟಾಲ್ ಕೊಬ್ಬರಿ ದರ 7500 ರೂಪಾಯಿಗಳಿಗೆ ಕುಸಿಯುವ ಮೂಲಕ ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು, ಸದ್ಯ ದರ ಏರಿಕೆಯಿಂದ ನಿಟ್ಟುಸಿರು ಬಿಡುವಂತಾಗಿದೆ.
57 ಸಾವಿರ ರೂಪಾಯಿ ತಲುಪಿದ ನಂತರ ಕುಸಿತ ಕಂಡಿದ್ದ ಅಡಿಕೆ ದರ ಮತ್ತೆ ಏರಿಕೆಯಾಗುತ್ತಿದೆ. ಸದ್ಯ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಕೆಂಪಡಕೆ ದರ 55-56 ಸಾವಿರದವರೆಗೆ ಮಾರಾಟವಾಗುತ್ತಿದೆ. ಪ್ರಮುಖ ಅಡಿಕೆ ಮಾರುಕಟ್ಟೆಯಾಗಿರುವ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್ಗೆ ಕನಿಷ್ಠ 41,399 ಇದ್ದರೆ, ಗರಿಷ್ಠ 56,612 ರೂಗಳವರೆಗೆ ಮಾರಾಟವಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ದರ ಕನಿಷ್ಠ46,403 ರೂಪಾಯಿ ಇದ್ದರೆ, ಗರಿಷ್ಠ54,790 ರೂಪಾಯಿಗೆ ಮಾರಾಟವಾಗಿದೆ.
ಶುಂಠಿ ದರವೂ ಏರಿಕೆ!
ರಾಜ್ಯದಲ್ಲಿ ಶುಂಠಿ ದರವೂ ಇರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಶುಂಠಿ ಕಳ್ಳರ ಕಾಟವೂ ಹೆಚ್ಚಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಬಳಿ ಶುಂಠಿಯನ್ನೇ ಕದ್ದಿದ್ದಾರೆ ಕಳ್ಳರು.
ಟೊಮೆಟೊ ಲೋಡ್ ಲಾರಿ ಸಮೇತ ಕಳ್ಳತನ!
ರಾಜ್ಯದಲ್ಲೇ ಅತೀ ಹೆಚ್ಚು ಟೊಮೆಟೊ ಬೆಳೆಯುವ ಕೋಲಾರದಲ್ಲಿ ಟೊಮೆಟೊ ಲೋಡ್ ಲಾರಿ ಸಮೇತ ಕಳ್ಳತನವಾಗಿದೆ.
ಕೋಲಾರದಿಂದ ಗುಜರಾತ್ ಕಡೆಗೆ ಹೋಗಿದ್ದ ಲಾರಿಯೂ ಇಲ್ಲ, ಚಾಲಕನೂ ಪತ್ತೆಯಾಗಿಲ್ಲ. ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023