ನಾಡ ಹಬ್ಬ ದಸರಾ ವಿಶೇಷ ಏನು?
– ನವರಾತ್ರಿ ಹಬ್ಬದ ಬಗ್ಗೆ ದಂತ ಕಥೆಗಳು ಹೇಳುವುದು ಏನು..?, ನಾಡ ಹಬ್ಬದ ವಿಶೇಷ ಏನು…?
– ಮಹಿಷಾಸುರನನ್ನು ಸಂಹಾರ ಮಾಡಿದ ದುರ್ಗಿ!
– ಮೈಸೂರು ಸೇರಿ ಹಳ್ಳಿ ಹಳ್ಳಿಯಲ್ಲೂ ದಸರಾ ಸಂಭ್ರಮ
NAMMUR EXPRESS NEWS
ದಸರಾ… ಎಷ್ಟೊಂದು ಸುಂದರ. ಹೌದು. ನಾಡ ಹಬ್ಬ ದಸರಾಗೆ ಇಡೀ ಕರುನಾಡು ಸಿಂಗಾರಗೊಂಡಿದೆ. ಮೈಸೂರು ಅರಮನೆ ಸೇರಿ ಎಲ್ಲೆಡೆ ದಸರಾ ರಂಗು ಮನೆ ಮಾಡಿದೆ.
– ನವರಾತ್ರಿ ಹಬ್ಬದ ಬಗ್ಗೆ ದಂತ ಕಥೆಗಳು ಹೇಳುವುದು ಏನು..?, ನಾಡ ಹಬ್ಬದ ವಿಶೇಷ ಏನು…?
ಶ್ರಾವಣ ಮಾಸ ಪ್ರಾರಂಭ ಆಯ್ತು ಅಂದರೆ ಹಬ್ಬಗಳು ಸಾಲು ಸಾಲಾಗಿ ಬರುತ್ತಾ ಹೋಗುತ್ತದೆ.. ಗೌರಿ ಗಣೇಶ ಮಹಾಲಯ ಅಮಾವಾಸ್ಯೆಯ ನಂತರ ದುರ್ಗಿ ದೇವಿಯನ್ನು ಆರಾಧಿಸುವ ನವರಾತ್ರಿ ಹಬ್ಬ ಅಥವಾ ದಸರಾ ಪ್ರಾರಂಭ ಆಗುತ್ತದೆ
ವಿವಿಧ ಹಿಂದೂ ದಂತಕಥೆಗಳ ಪ್ರಕಾರ, ಈ ದಿನ ದುರ್ಗಾ ದೇವಿಯು ಮಹಿಷಾಸುರನನ್ನು ವಧಿಸಿದ ದಿನ ಎಂದು ನಂಬಲಾಗುತ್ತದೆ. ಮಹಿಷಾಸುರನು ಸರ್ವಶಕ್ತ ಅರ್ಧಮಾನವ, ಅರ್ಧ ಎಮ್ಮೆಯ ರೂಪದಲ್ಲಿದ್ದ ರಾಕ್ಷಸನಾಗಿದ್ದನು. ಅಂತಿಮವಾಗಿ ವಿಜಯದಶಮಿಯಂದು ಅವಳು ತನ್ನ ತ್ರಿಶೂಲದಿಂದ ಮಹಿಷಾಸುರನನ್ನು ಸಂಹಾರ ಮಾಡುತ್ತಾಳೆ.
ಅಲ್ಲಿ ಅವರ ನಡುವಿನ ಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು ಎಂದು ಹೇಳಲಾಗುತ್ತದೆ, ಇದನ್ನು ಈಗ ನವರಾತ್ರಿ ಎಂದು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ ನವರಾತ್ರಿಯ ಬಗ್ಗೆ ರಾಮಾಯಣದಲ್ಲಿ ಇರುವ ಪ್ರಕಾರ ಸೀತೆಯನ್ನು ಅಪಹರಿಸಿದ್ದ ರಾವಣನನ್ನು ವಧೆ ಮಾಡಲು ರಾಮನು ಒಂಬತ್ತು ದಿನಗಳ ಕಾಲ ದುರ್ಗೆಯ ಪೂಜೆ ಮಾಡಿ ದುರ್ಗಿಯ ಶಕ್ತಿ ಹಾಗೂ ಬಲ ಪಡೆದು ಒಂಬತ್ತು ದಿನ ಕಾಲ ಯುದ್ದ ಮಾಡಿ ರಾಮನು ರಾವಣನನ್ನು ಅಂತಿಮ ದಿನ ವಧಿಸಿದ ಹಾಗಾಗಿ ಈ ದಿನ ವನ್ನು ನವರಾತ್ರಿ ಅಥವಾ ವಿಜಯ ದಶಮಿ ಎಂದು ಕರೆಯಲಾಗುತ್ತದೆ ಒಟ್ಟಾರೆ ಈ ನವರಾತ್ರಿ ಕೆಡುಕಿನ ಮೇಲೆ ಒಳ್ಳೆಯದು, ಕತ್ತಲೆಯ ಮೇಲೆ ಬೆಳಕು ಮತ್ತೆ ಅಧರ್ಮದ ಮೇಲೆ ಧರ್ಮದ ವಿಜಯದ ಸಂಕೇತವನ್ನು ಸೂಚಿಸುತ್ತದೆ.
ದಸರಾಕ್ಕೂ ಮೈಸೂರಿಗೆ ಇರುವ ಸಂಬಂಧ ಏನು?
ದೇವಿಯು ಮಹಿಷಾಸುರ ವಧೆ ಮಾಡಿದ ಹಿನ್ನಲೆಯಲ್ಲಿ ಮೈಸೂರು ಎಂಬ ಹೆಸರು ಬಂದಿತ್ತು. ಹಾಗಾಗಿ ಮೈಸೂರಿನಲ್ಲಿ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಮೈಸೂರು ದಸರಾ ಉತ್ಸವಗಳು 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಪ್ರಾರಂಭವಾಯಿತು. ನವರಾತ್ರಿಯ ಆಚರಣೆಯನ್ನು ಮಹಾನವಮಿ ಎಂದು ಕರೆಯಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರಿನ ಒಡೆಯರ್ಗಳು ದಸರಾ ಉತ್ಸವವನ್ನು ಮುಂದುವರೆಸಿದರು. ಆರಂಭದಲ್ಲಿ ರಾಜ ಒಡೆಯರ್ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಒಡೆಯರ್ ರಾಜ ದಂಪತಿಗಳು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಉತ್ಸವಗಳು ಪ್ರಾರಂಭವಾದವು.
ಇದು ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ, 1805 ರಲ್ಲಿ, ದಸರಾ ಸಮಯದಲ್ಲಿ ಮೈಸೂರು ಅರಮನೆಯಲ್ಲಿ ವಿಶೇಷ ರಾಜರ ಸಭೆ ನಡೆಸುವ ಸಂಪ್ರದಾಯವನ್ನು ಪ್ರಾರಂಭಿಸಲಾಯಿತು. ವಿಶೇಷ ರಾಜಸಭೆಯಲ್ಲಿ ರಾಜಮನೆತನದ ಸದಸ್ಯರು, ಪ್ರಮುಖ ಅತಿಥಿಗಳು, ಅಧಿಕಾರಿಗಳು ಹಾಗೂ ಜನಸಾಮಾನ್ಯರು ಪಾಲ್ಗೊಂಡಿದ್ದರು. ಪ್ರಸ್ತುತ ಒಡೆಯರ್ ಕುಟುಂಬದ ವಂಶಸ್ಥರು ದಸರಾ ಸಂದರ್ಭದಲ್ಲಿ ಖಾಸಗಿ ರಾಜಸಭೆ ನಡೆಸುವುದರೊಂದಿಗೆ ಈಗಲೂ ಈ ಸಂಪ್ರದಾಯ ಮುಂದವರೆಯುತ್ತಿದೆ