ಸಹೋದರ ಸಹೋದರಿಯರ ಅನುಬಂಧ… ಈ ರಕ್ಷಾ ಬಂಧನ!
– ಏನಿದು ರಕ್ಷಾ ಬಂಧನದ ಮಹತ್ವ..?
– ರಾಖಿ ಯಾಕೆ ಕಟ್ಟುತ್ತಾರೆ… ಇಲ್ಲಿದೆ ವಿಶೇಷ ವರದಿ
NAMMUR EXPRESS NEWS
ಸಹೋದರ ಸಹೋದರಿಯರ ಬಾಂಧವ್ಯದ ಬೆಸುಗೆ ರಕ್ಷಾಬಂಧನ. ಸಹೋದರತೆಯ ಮಹತ್ವ ಸಾರುವ ಈ ರಕ್ಷಾ ಬಂಧನವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ದೇಶದ ಎಲ್ಲೆಡೆ ಆಚರಿಸಲಾಗುತ್ತದೆ. ತಂಗಿ ತನ್ನ ಅಣ್ಣನಿಗಿಗೆ ಕಟ್ಟುವ ರಾಖಿ ಅದು ದಾರ ಅಷ್ಟೇ ಅಲ್ಲ. ತಂಗಿ ಅಣ್ಣನಿಗೆ ರಕ್ಷೆಯನ್ನು ಬೇಡಿ ಕಟ್ಟುವ ಪವಿತ್ರವಾದ ಬಂಧ. ರಕ್ಷಾ ಬಂಧನ ಹಬ್ಬಕ್ಕೆ ನಮ್ಮ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ತಂಗಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಣೆ ನೀಡು ಎಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ನಾನು ನಿನ್ನಗೆ ಸದಾ ಕಾಲ ರಕ್ಷಾ ಕವಚವಾಗಿರುವೆ ಎಂದು ತಂಗಿಗೆ ತನ್ನ ಕೈಯಲ್ಲಿ ಆಗುವಷ್ಟು ಉಡುಗೊರೆ ಕೊಟ್ಟು ಆಶೀರ್ವಾದ ಮಾಡುವುದು ಈ ರಕ್ಷಾ ಬಂಧನದ ವಿಶೇಷ.
ರಕ್ಷಾ ಬಂಧನದ ಬಗ್ಗೆ ದಂತ ಕಥೆಗಳು ಏನು?
ಹಿಂದೂ ಪುರಾಣದ ಪವಿತ್ರ ಗ್ರಂಥವಾದ ಮಹಾಭಾರತದ ಪ್ರಕಾರ ಕೃಷ್ಣನ ಕೈಯಲ್ಲಿ ರಕ್ತಸುರಿಯುತ್ತಿರುವ ಸಂದರ್ಭದಲ್ಲಿ ರಕ್ತವನ್ನು ತಡೆಯಲು ದ್ರೌಪದಿ ತನ್ನ ಸೀರೆಯನ್ನು ಹರಿದು ಕೃಷ್ಣನ ಕೈಗೆ ಕಟ್ಟಿದಳು. ಈ ಸಂದರ್ಭದಲ್ಲಿ ದ್ರೌಪದಿಯ ವಾತ್ಸಲ್ಯ, ಕಾಳಜಿ ಕಂಡ ಕೃಷ್ಣ, ಆಕೆಯನ್ನು ರಕ್ಷಣೆ ಮಾಡುವ ಭರವಸೆ ನೀಡಿದನು ಎಂದು ಹೇಳುವ ಕಥೆಯಿದೆ. ರಾಖಿಗೆ ಸಂಬಂಧ ಪಟ್ಟ ಇನ್ನೊಂದು ಕಥೆ ಚಿತ್ತೋರ್ನ ರಾಣಿ ಕರ್ಣಾವತಿ ಮತ್ತು ಮೊಘಲ್ ಚಕ್ರವರ್ತಿ ಹುಮಾಯೂನ್ಗೆ ಸಂಬಂಧಿಸಿದೆ. ರಾಣಿ ಕರ್ಣಾವತಿ ಚಿತ್ತೋ ರಾಜನ ವಿಧವೆ ರಾಣಿ. ಈಕೆಯ ರಾಜ್ಯದ ಮೇಲೆ ಗುಜರಾತಿನ ಸುಲ್ತಾನ ಬಹದ್ದೂರ್ ಷಾ ಅತಿಕ್ರಮಣ ಮಾಡಿದ. ಈ ವೇಳೆ ಆಕೆಗೆ ರಾಜ್ಯ ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ವೇಳೆ ಆಕೆ ಮೊಘಲ್ ಚಕ್ರವರ್ತಿ ಹುಮಾಯೂನ್ಗೆ ರಾಜ್ಯ ರಕ್ಷಣೆಗೆ ಕರೆ ನೀಡಿ ರಾಖಿಯನ್ನು ಕಳುಹಿಸಿದಳು. ಈ ವೇಳೆ ಹುಮಾಯೂನ್ ಅಣ್ಣನಂತೆ ಆಕೆ ಸಹಾಯಕ್ಕೆ ಬಂದು ಚಿತ್ತೋರ್ ರಕ್ಷಿಸಿದ ಎಂಬ ಕಥೆ ಇದೆ. ಹೀಗೆ ಹಲವು ಕಥೆಗಳಿವೆ ಎಲ್ಲಾ ಕಥೆಗಳ ಸಾರ ಒಂದೇ ಅಣ್ಣ ತಂಗಿಯ ಭಾಂದವ್ಯ.
ರಾಖಿಕಟ್ಟಲು ಒಡಹುಟ್ಟಿದವರೆ ಆಗಬೇಕಿಲ್ಲ!
ರಕ್ಷಾಬಂಧನ ಆಚರಿಸಲು ಒಡ ಹುಟ್ಟಿದ ಅಣ್ಣತಂಗಿಯೆ ಆಗಬೇಕಿಲ್ಲ .ಮನಸ್ಪೂರ್ತಿಯಾಗಿ ಅಣ್ಣ ತಂಗಿ ಎಂಬ ಭಾವ ಇರುವ ಯಾರೂ ಬೇಕಾದರೂ ಪವಿತ್ರ ರಾಖಿ ಕಟ್ಟಿ ರಕ್ಷಣೆ ಕೇಳಬಹುದು. ಈಗಿನ ಕಾಲದಲ್ಲಿ ಈ ರಾಖಿ ಹಬ್ಬವನ್ನು ತಮ್ಮಗೆ ಬಂಧ ರೀತಿಯಲ್ಲಿ ಆಚರಿಸುತ್ತತ್ತಿರುವುದರಿಂದ ಈ ಹಬ್ಬದ ಮಹತ್ವ ಕಳೆದು ಹೋಗುತ್ತಿದೆ.
ಎಲ್ಲರೂ ರಾಖಿ ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿ ಎಲ್ಲ ಸಹೋದರ ಸಹೋದರಿಯಾರಿಗೂ ಸಹೋದರತ್ವ ಮಹತ್ವ ಸಾರುವ ರಕ್ಷಾ ಬಂಧನದ ಶುಭಾಷಯಗಳು.