ಸೇನೆ ಸೇರಲು ಈಗ ಯುವತಿಯರಿಗೂ ಅವಕಾಶ!
– ಏನಿದು ಯೋಜನೆ? ಅಗ್ನಿವೀರ್ ನೇಮಕಾತಿಯಲ್ಲಿ ಯುವತಿಯರು ಹಾಜರ್
– ದೇಶದ ಹಲವೆಡೆ ಯುವತಿಯರ ನೇಮಕಾತಿ?
NAMMUR EXPRESS NEWS
ಭಾರತ ಮುಂದುವರಿಯುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪೊಲೀಸ್ ಇಲಾಖೆ, ಆಡಳಿತ ವಲಯ, ರಾಜಕೀಯ ವಲಯದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಈ ನಡುವೆ ಉತ್ತರಾಖಂಡದಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೂ ಸೇನೆ ಸೇರುವ ಅವಕಾಶ ಸಿಗಲಿದೆ. ಹೌದು, ಇಲ್ಲಿ ಹೆಣ್ಣು ಮಕ್ಕಳಿಗೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೆಣ್ಣುಮಕ್ಕಳು ಆರ್ಮಿ ಪೊಲೀಸ್ಗೆ ಆಯ್ಕೆಯಾಗುವ ಹೆಮ್ಮೆಯ ಅವಕಾಶಗಳನ್ನೂ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಖನೌದಲ್ಲಿ ಮಹಿಳಾ ಸೇನಾ ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ನವೆಂಬರ್ ತಿಂಗಳಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದರು.
ದೇಶದ ಬಹುತೇಕ ಕಡೆ ಈಗ ಮಹಿಳಾ ಅಭ್ಯರ್ಥಿಗಳನ್ನು ಸೇನೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಇನ್ಮುಂದೆ ಹೆಣ್ಣು ಮಕ್ಕಳು ಕೂಡ ದೇಶ ಸೇವೆಯಲ್ಲಿ ಪುರುಷರಷ್ಟೇ ಹೋರಾಟ ಮಾಡಲಿದ್ದಾರೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023