ಶೀಘ್ರದಲ್ಲೇ ಕಡೂರಿನಲ್ಲಿ ಗಾರ್ಮೆಂಟ್ಸ್ ಉದ್ಯಮ ಶುರು!
– 236 ಎಕರೆ ನೋಟಿಫಿಕೇಷನ್: ಶೇ.85 ಕಾಮಗಾರಿ ಪೂರ್ಣ
– ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ: ಶಾಸಕ ಆನಂದ್
NAMMUR EXPRESS NEWS
ಕಡೂರು: ಕಡೂರು ಹೊರವಲಯದ ನಗದಿಯಾತ್ ಕಾವಲಿನಲ್ಲಿ 2,300 ಎಕರೆ ಜಾಗ ನೋಟಿಫಿಕೇಷನ್ ಮಾಡಲಾಗಿದ್ದು ಅಲ್ಲಿ ಹೆಲಿಕಾಪ್ಟರ್ ಬಿಡಿಭಾಗಗಳ ತಯಾರಿಕಾ ಘಟಕ ಆರಂಭಿಸಲು ಪ್ರಕ್ರಿಯೆ ಆರಂಭವಾಗಿತ್ತು. ಕಾರಣಾಂತರದಿಂದ ಅದು ನಡೆಯಲಿಲ್ಲ. ಇದೇ ಜಾಗದಲ್ಲಿ ಕೈಗಾರಿಕಾ ವಸಾಹತು ಮಾಡಲು 236 ಎಕರೆ ನೋಟಿಫಿಕೇಷನ್ ಆಗಿ ಅಲ್ಲಿ ಈಗಾಗಲೇ ಶೇ 85ರಷ್ಟು ಕಾಮಗಾರಿ ಮುಗಿದಿದ್ದು ಅಲ್ಲಿ ಗಾರ್ಮೆಂಟ್ಸ್ ಶುರುವಾಗಲಿದೆ. ಗಾರ್ಮೆಂಟ್ಸ್ ಸಂಸ್ಥೆಯೊಂದು ಇಲ್ಲಿ ಸಿದ್ಧ ಉಡುಪು ಘಟಕ ಆರಂಭಿಸಲು ಆಸಕ್ತಿ ತೋರಿದೆ. ಅವರಿಗೆ ಭೂಮಿ ನೀಡುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಸಿಂಗ್ ಕಠಾರಿಯಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಭೂಮಿ ಮಂಜೂರಾಗಿದೆ. ಶೀಘ್ರದಲ್ಲೇ ಅಲ್ಲಿ ಕಟ್ಟಡ ಮತ್ತಿತರ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ಶಾಸಕ ಕೆ.ಎಸ್ ಆನಂದ್ ತಿಳಿಸಿದ್ದಾರೆ.