Categories
ಕಡೂರು ಚಿಕ್ಕಮಗಳೂರು ಮಲ್ನಾಡ್

ಪ್ರಿಯತಮೆ ಕೊಂದು ಫ್ರಿಡ್ಜ್ ಅಲ್ಲಿ ಇಟ್ಟ ಟೆಕ್ಕಿ!

ಪ್ರಿಯತಮೆ ಕೊಂದು ಫ್ರಿಡ್ಜ್ ಅಲ್ಲಿ ಇಟ್ಟ ಟೆಕ್ಕಿ!
– ಮದುವೆಗೆ ಹುಡುಗಿ ಸಿಗಲಿಲ್ಲ ಎಂದು ವಿಷ ಸೇವಿಸಿ ಆತ್ಮಹತ್ಯೆ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಡೂರು: ಯುವಕನೊಬ್ಬ ಮದುವೆಯಾಗುತ್ತಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಶಿರಾ ಗ್ರಾಮದ ಬ್ರಹ್ಮಸಂದ್ರ ಗ್ರಾಮದ ನಿವಾಸಿ, ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ 26 ವರ್ಷದ ಕುಮಾರ್ ಎಂದು ಗುರುತಿಸಲಾಗಿದೆ. ಕುರಿ ಕಾಯುತ್ತಿದ್ದ ಸಂದರ್ಭದಲ್ಲಿ ಮದುವೆಯ ವಿಚಾರದಲ್ಲಿ ಮಾನಸಿಕವಾಗಿ ನೊಂದು ಮದ್ಯವನ್ನು ಸೇವಿಸಿ, ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪ್ರಿಯತಮೆ ಕೊಂದು ಫ್ರಿಡ್ಜ್ ಅಲ್ಲಿ ಇಟ್ಟ ಟೆಕ್ಕಿ!

ಭಾರತೀಯ ನೌಕಾಪಡೆಯ ಐಎನ್‌ಎಸ್ ಡೇಗಾದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ 30 ವರ್ಷದ ಚಿಂತಡ ರವೀಂದ್ರ, ತನ್ನ ಪ್ರೇಯಸಿಯನ್ನೇ ಅಮಾನುಷವಾಗಿ ಕೊಲೆ ಮಾಡಿ, ದೇಹವನ್ನು ತುಂಡರಿಸಿ ಫ್ರಿಡ್ಜ್‌ ಸೇರಿಸಿದ್ದಾನೆ. 2021 ರಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾಗಿದ್ದ ಪೋಲಿಪಲ್ಲಿ ಮೌನಿಕಾ (28) ಮತ್ತು ರವೀಂದ್ರರ ಸಂಬಂಧವು ಆರಂಭದಲ್ಲಿ ಸುಂದರವಾಗಿದ್ದರೂ, ಅದು ಇಷ್ಟೊಂದು ಕ್ರೂರವಾಗಿ ಅಂತ್ಯಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ರವೀಂದ್ರನ ಪತ್ನಿ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದ ಸಮಯದಲ್ಲಿ, ಆತ ಮೌನಿಕಾಳನ್ನು ಗಾಜುವಾಕಾದಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆಸಿಕೊಂಡಿದ್ದನು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೌನಿಕಾ ರವೀಂದ್ರನಿಂದ ಸುಮಾರು 3.5 ಲಕ್ಷ ರೂಪಾಯಿ ಹಣ ಪಡೆದಿದ್ದರು ಎನ್ನಲಾಗಿದೆ.

ಈ ಹಣದ ವಿಚಾರವಾಗಿ ಮತ್ತು ತಮ್ಮ ಅಕ್ರಮ ಸಂಬಂಧವನ್ನು ರವೀಂದ್ರನ ಪತ್ನಿ ಹಾಗೂ ಕುಟುಂಬಕ್ಕೆ ತಿಳಿಸುವುದಾಗಿ ಮೌನಿಕಾ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ರವೀಂದ್ರ ಮೌನಿಕಾಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಕೊಲೆ ಕೇವಲ ಆವೇಶದಲ್ಲಿ ನಡೆದಿದ್ದಲ್ಲ, ಅದಕ್ಕಾಗಿ ರವೀಂದ್ರ ಪೂರ್ವತಯಾರಿ ನಡೆಸಿದ್ದ ಎನ್ನುವ ಶಂಕೆ ಮೂಡಿದೆ. ಕೊಲೆಗೆ ಬೇಕಾದ ಚಾಕುಗಳನ್ನು ಆತ ಆನ್‌ಲೈನ್ ಮೂಲಕ ತರಿಸಿಕೊಂಡಿದ್ದನು. ಕೃತ್ಯದ ನಂತರ ದೇಹವನ್ನು ಸಾಕ್ಷ್ಯವಿಲ್ಲದಂತೆ ನಾಶಮಾಡಲು ಆತ ಅನುಸರಿಸಿದ ಹಾದಿ ಭಯಾನಕವಾಗಿದೆ. ಮೌನಿಕಾಳ ದೇಹವನ್ನು ಆತ ಮೂರು ಭಾಗಗಳಾಗಿ ತುಂಡರಿಸಿದ್ದಾನೆ. ದೇಹದ ಒಂದು ಭಾಗವನ್ನು ತನ್ನ ಮನೆಯ ಫ್ರಿಜ್‌ನಲ್ಲಿ ಅಡಗಿಸಿಟ್ಟರೆ, ಮತ್ತೊಂದು ಭಾಗವನ್ನು ಗೋಣಿ ಚೀಲದಲ್ಲಿ ತುಂಬಿ ಮಂಚದ ಅಡಿಯಲ್ಲಿ ಬಚ್ಚಿಟ್ಟಿದ್ದನು.

ಉಳಿದಂತೆ ತಲೆ ಮತ್ತು ಕೈಗಳಿದ್ದ ಭಾಗವನ್ನು ದೂರದ ಅಡವಿವರಂ ಎಂಬ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾನೆ. ಅಕ್ಕಪಕ್ಕದ ಮನೆಯವರಿಗೆ ಯಾವುದೇ ಕಿರುಚಾಟವಾಗಲಿ ಅಥವಾ ಅನುಮಾನಾಸ್ಪದ ಸದ್ದಾಗಲಿ ಕೇಳಿಸದಂತೆ ಅತ್ಯಂತ ಸಂಚಿನಿಂದ ಈ ಕೃತ್ಯ ಎಸಗಲಾಗಿದೆ. ಇಷ್ಟೆಲ್ಲಾ ಆದ ನಂತರ ರವೀಂದ್ರ ತಲೆಮರೆಸಿಕೊಳ್ಳುವ ಸಾಹಸಕ್ಕೆ ಕೈಹಾಕದೇ ತನ್ನ ಸ್ನೇಹಿತನೊಬ್ಬನಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಸ್ನೇಹಿತನ ಬುದ್ಧಿವಾದದಂತೆ ಗಾಜುವಾಕಾ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ರವೀಂದ್ರ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಮನೆಗೆ ತೆರಳಿದಾಗ ಅಲ್ಲಿ ಕಂಡ ದೃಶ್ಯಗಳು ಅನುಭವವಿರುವ ಅಧಿಕಾರಿಗಳನ್ನೂ ಕೂಡ ಕ್ಷಣಕಾಲ ಬೆಚ್ಚಿಬೀಳುವಂತೆ ಮಾಡಿದ್ದವು. ಸದ್ಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರವೀಂದ್ರನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಒಂದು ಸುಂದರ ಸಂಬಂಧವು ಹಣ ಮತ್ತು ಹಗೆತನದ ಕಿಚ್ಚಿಗೆ ಸಿಲುಕಿ ಇಷ್ಟೊಂದು ಭೀಕರ ಸ್ವರೂಪ ಪಡೆದುಕೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮೌನಿಕಾಳ ಕುಟುಂಬವು ಆಕೆಯ ಹಠಾತ್ ಅಗಲಿಕೆಯಿಂದ ಆಘಾತಗೊಂಡು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

Categories
ಕಡೂರು ಚಿಕ್ಕಮಗಳೂರು

ಮಾಜಿ ಶಾಸಕನ ಅಳಿಯನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ

ಮಾಜಿ ಶಾಸಕನ ಅಳಿಯನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ

* ಕಡೂರು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅಳಿಯ ಸಂದೇಶ್ ಕುಮಾರ್
* ರಾತ್ರೋರಾತ್ರಿ ಠಾಣೆ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

NAMMMUR EXPRESS NEWS
ಕಡೂರು: ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಅಳಿಯ ಸಂದೇಶ್ ಕುಮಾರ್ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ಮತ್ತು ಅವನ ಸಂಗಡಿಗರು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

* ಕಾರು ಓವರ್​ಟೇಕ್​ ವಿಚಾರಕ್ಕೆ ಹಲ್ಲೆ ಎಂಬ ಆರೋಪ
ಈ ಹಲ್ಲೆಯು ಕಾರು ಓವರ್‌ಟೇಕ್ ವಿಚಾರಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಸಂದೇಶ್ ಕುಮಾರ್ ಮತ್ತು ಸಂತೋಷ್ ನಡುವೆ ಗಲಾಟೆ ಉಂಟಾಗಿ ಹಲ್ಲೆಗೆ ದಾರಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಡೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ಸುದ್ದಿ ಹರಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ಮಧ್ಯರಾತ್ರಿ ಕಡೂರು ಪೊಲೀಸ್ ಠಾಣೆ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.

* ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಆಕ್ರೋಶ
ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಠಾಣೆ ಬಳಿ ಘೋಷಣೆಗಳನ್ನು ಕೂಗಿ ಬಿಜೆಪಿ ನಾಯಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾತ್ರೋರಾತ್ರಿ ನಡೆದ ಈ ಪ್ರತಿಭಟನೆಯಿಂದ ಕಡೂರು ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಯಿತು.

* 24 ಗಂಟೆಗಳ ಒಳಗೆ ಬಂಧಿಸುವುದಾಗಿ ಎಸ್‌ಪಿ ಭರವಸೆ
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಆಮಟೆ ಕಾರ್ಯಕರ್ತರನ್ನು ಮನವೊಲಿಸಲು ಯತ್ನಿಸಿದರು. 24 ಗಂಟೆಗಳ ಒಳಗೆ ಹಲ್ಲೆಕೋರರನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಈ ಭರವಸೆ ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟು ಹಿಂದಿರುಗಿದರು.
ಬೆಳ್ಳಿ ಪ್ರಕಾಶ್ ಬಿಜೆಪಿ ಹಿರಿಯ ನಾಯಕರಾಗಿದ್ದು, ಕಡೂರು ಕ್ಷೇತ್ರದಲ್ಲಿ ಬಲಿಷ್ಠ ಪ್ರಭಾವ ಹೊಂದಿದ್ದಾರೆ. ಅವರ ಅಳಿಯನ ಮೇಲೆ ನಡೆದ ಹಲ್ಲೆ ರಾಜಕೀಯ ದ್ವೇಷದಿಂದಲೇ ಎಂಬ ಆರೋಪ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂತೋಷ್ ಮತ್ತು ಸಂಗಡಿಗರನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯ ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತಿದೆ.

Categories
agumbe ಉಡುಪಿ ಉತ್ತರ ಕನ್ನಡ ಕಡೂರು ಕರಾವಳಿ ಕಲಬುರಗಿ ಕಾರವಾರ ಕಾರ್ಕಳ ಕುಂದಾಪುರ ಕೊಪ್ಪ ಗದಗ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ತೀರ್ಥಹಳ್ಳಿ ತುಮಕೂರು ದಕ್ಷಿಣ ಕನ್ನಡ ಪುತ್ತೂರು ಬೆಂಗಳೂರು ಬೆಳಗಾವಿ ಬೆಳ್ತಂಗಡಿ ಮಂಗಳೂರು ಮಲ್ನಾಡ್ ಮುಲ್ಕಿ ಮೈಸೂರು ರಾಜ್ಯ ವಿಜಯನಗರ ವಿಜಯಪುರ ಶಿವಮೊಗ್ಗ ಶೃಂಗೇರಿ ಸಾಗರ ಹಾವೇರಿ ಹಾಸನ ಹೊಸನಗರ

ಅಯ್ಯೋ ದೇವ್ರೇ..ಈ ವಾರವೂ ಮಳೆ!

ಅಯ್ಯೋ ದೇವ್ರೇ..ಈ ವಾರವೂ ಮಳೆ!
– ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸಾಧ್ಯತೆ
– ಅಕ್ಟೋಬರ್ 8ರವರೆಗೂ ಗಾಳಿ ಜತೆಗೆ ಮಳೆ ಅಲರ್ಟ್
– ದಸರಾಕ್ಕೂ ಮಳೆ ಅಡ್ಡಿ: ಅಡಿಕೆ ಬೆಳೆಗೆ ಸಂಕಷ್ಟ

 

NAMMUR EXPRESS NEWS
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಇದರಿಂದಾಗಿ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ ಸೇರಿ ಹಲವೆಡೆ ಮಳೆಯಾಗಲಿದೆ. ಈಗಾಗಲೇ ಕಳೆದ 6 ತಿಂಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ರೈತರು ಹೈರಾಣಾಗಿದ್ದಾರೆ. ಇದೀಗ ಮತ್ತೆ ಮೋಡ, ಮಳೆ ಜನ ಜೀವನಕ್ಕೆ ಭಾರೀ ತೊಂದರೆ ಆಗಿದೆ.
ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಪ್ರಭಾವ ಕರ್ನಾಟಕದ ಮೇಲೂ ಆಗಲಿದ್ದು, ಅಕ್ಟೋಬರ್ 8ರವರೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.
ಯಲ್ಲಾಪುರದಲ್ಲಿ ಭಾರಿ ಮಳೆಯಾಗಿದೆ, ಹೊನ್ನಾವರ, ಆಗುಂಬೆ, ಅಂಕೋಲಾ, ಕ್ಯಾಸಲ್​ರಾಕ್, ಗೇರುಸೊಪ್ಪ, ಮಂಕಿ, ಕದ್ರಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಮಟಾ, ಕುಂದಾಪುರ, ಲೋಂಡಾ, ಮಂಗಳೂರು, ಮುಂಡಗೋಡಿನಲ್ಲಿ ಮಳೆಯಾಗಿದೆ.
ಅಡಿಕೆ ಸೀಸನ್ ಆಗಿರುವುದರಿಂದ ಅಡಿಕೆ ಬೆಳೆ ಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಾರಿ ದಸರಾಕ್ಕೂ ಮಳೆ ಹಲವೆಡೆ ಅಡ್ಡಿ ಮಾಡಿದೆ.

Categories
ಕಡೂರು

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಪಾಪಿಗಳು

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಪಾಪಿಗಳು

* ಕಡೂರಿನಲ್ಲಿ ಅಮಾನವೀಯ ಘಟನೆ
* ಕೆಚ್ಚಲು ಕೊಯ್ದ ಕಿಡಿಗೇಡಿಗಳನ್ನು ಬಂಧಿಸುವಂತೆ ದೂರು

NAMMMUR EXPRESS NEWS
ಕಡೂರು: ತಾಲೂಕಿನ ಚೌಳಹಿರಿಯೂರು ಸಮೀಪದ ತಮ್ಮಿಹಳ್ಳಿಯಲ್ಲಿ ಹಸುವಿ ಕೆಚ್ಚಲು ಕೊಯ್ದು ದುರುಳರು ತಮ್ಮ ವಿಕೃತಿ ಮೆರೆದಿದ್ದಾರೆ. ಗ್ರಾಮದ ಶೇಖರಪ್ಪ ಎಂಬುವರ ಸುಮಾರು 20 ದನಗಳನ್ನು ಕಳ್ಳರು ತಂತಿ ಬೇಲಿಯೊಳಗೆ ಹಿಡಿದು ಕೂಡಿಹಾಕಿ ಬೇರೆಡೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ ಆ ಯತ್ನ ವಿಫಲಗೊಂಡಾಗ ಒಂದು ಹಸುವಿನ ಕೆಚ್ಚಲು ಕತ್ತರಿಸಿ ಪರಾರಿಯಾಗಿದ್ದಾರೆ. ಬಳಿಕ ಆ ಹಸು ಸತ್ತಿದೆ ಎಂದು ತಿಳಿದುಬಂದಿದೆ.
ಹಸುವಿನ ಕೆಚ್ಚಲು ಕತ್ತರಿಸಿರುವ ಘಟನೆ ಕುರಿತಂತೆ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಶೇಖರಪ್ಪ ಕುಟುಂಬದೊಂದಿಗೆ ಕಡೂರು ಬಿಜೆಪಿ ಯುವ ಮೋರ್ಚಾ ಹಾಗೂ ಬಜರಂಗದಳ ಕಾರ್ಯಕರ್ತರು ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

Categories
ಕಡೂರು

ಶೀಘ್ರದಲ್ಲೇ ಕಡೂರಿನಲ್ಲಿ ಗಾರ್ಮೆಂಟ್ಸ್ ಉದ್ಯಮ ಶುರು!

ಶೀಘ್ರದಲ್ಲೇ ಕಡೂರಿನಲ್ಲಿ ಗಾರ್ಮೆಂಟ್ಸ್ ಉದ್ಯಮ ಶುರು!
– 236 ಎಕರೆ ನೋಟಿಫಿಕೇಷನ್: ಶೇ.85 ಕಾಮಗಾರಿ ಪೂರ್ಣ
– ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ: ಶಾಸಕ ಆನಂದ್

NAMMUR EXPRESS NEWS
ಕಡೂರು: ಕಡೂರು ಹೊರವಲಯದ ನಗದಿಯಾತ್ ಕಾವಲಿನಲ್ಲಿ 2,300 ಎಕರೆ ಜಾಗ ನೋಟಿಫಿಕೇಷನ್ ಮಾಡಲಾಗಿದ್ದು ಅಲ್ಲಿ ಹೆಲಿಕಾಪ್ಟರ್ ಬಿಡಿಭಾಗಗಳ ತಯಾರಿಕಾ ಘಟಕ ಆರಂಭಿಸಲು ಪ್ರಕ್ರಿಯೆ ಆರಂಭವಾಗಿತ್ತು. ಕಾರಣಾಂತರದಿಂದ ಅದು ನಡೆಯಲಿಲ್ಲ. ಇದೇ ಜಾಗದಲ್ಲಿ ಕೈಗಾರಿಕಾ ವಸಾಹತು ಮಾಡಲು 236 ಎಕರೆ ನೋಟಿಫಿಕೇಷನ್ ಆಗಿ ಅಲ್ಲಿ ಈಗಾಗಲೇ ಶೇ 85ರಷ್ಟು ಕಾಮಗಾರಿ ಮುಗಿದಿದ್ದು ಅಲ್ಲಿ ಗಾರ್ಮೆಂಟ್ಸ್ ಶುರುವಾಗಲಿದೆ. ಗಾರ್ಮೆಂಟ್ಸ್ ಸಂಸ್ಥೆಯೊಂದು ಇಲ್ಲಿ ಸಿದ್ಧ ಉಡುಪು ಘಟಕ ಆರಂಭಿಸಲು ಆಸಕ್ತಿ ತೋರಿದೆ. ಅವರಿಗೆ ಭೂಮಿ ನೀಡುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಸಿಂಗ್ ಕಠಾರಿಯಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಭೂಮಿ ಮಂಜೂರಾಗಿದೆ. ಶೀಘ್ರದಲ್ಲೇ ಅಲ್ಲಿ ಕಟ್ಟಡ ಮತ್ತಿತರ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ ಎಂದು ಶಾಸಕ ಕೆ‌.ಎಸ್ ಆನಂದ್ ತಿಳಿಸಿದ್ದಾರೆ.

Categories
ಕಡೂರು

ಕಡೂರು ಬಿಜೆಪಿ ಯುವ ಮೋರ್ಚಾಕ್ಕೆ ನೂತನ ಸಾರಥಿಗಳ ನೇಮಕ

ಕಡೂರು ಬಿಜೆಪಿ ಯುವ ಮೋರ್ಚಾಕ್ಕೆ ನೂತನ ಸಾರಥಿಗಳ ನೇಮಕ

– ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದ ನಾಯಕರು
– ಅಧ್ಯಕ್ಷರಾಗಿ ಅಜಯ್ ಒಡೆಯರ್, ಪ್ರಧಾನ ಕಾರ್ಯದರ್ಶಿಗಳಾಗಿ ಕುಮಾರ್ ಪಾಟೀಲ್, ನವೀನ್

NAMMUR EXPRESS NEWS

ಕಡೂರು: ಭಾರತೀಯ ಜನತಾ ಪಾರ್ಟಿ ಕಡೂರು ಮಂಡಲದ ನೂತನ ಯುವ ಮೋರ್ಚಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಕಡೂರು ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್‌ರವರ ನೇತೃತ್ವದಲ್ಲಿ ಕಡೂರು ಮಂಡಲದ ಬಿಜೆಪಿ ಅಧ್ಯಕ್ಷರಾದ ಬಿ.ಪಿ ದೇವಾನಂದ‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಮ್ಮ ತಾಲೂಕು ಯುವ ಮೋರ್ಚಾ ಪದಾಧಿಕಾರಿಗನ್ನು ಆಯ್ಕೆ ಮಾಡಿದೆ.

ನೂತನ ಸಮಿತಿಯ ವಿವರ ಹೀಗಿದೆ..!

ಅಧ್ಯಕ್ಷರಾಗಿ ಅಜಯ್ ಒಡೆಯರ್ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಕುಮಾರ್ ಪಾಟೀಲ್ .ಜಿ ಹಾಗೂ ನವೀನ್ ಎಂ‌.ಬಿ, ಉಪಾಧ್ಯಕ್ಷರುಗಳಾಗಿ ಮಂಜುನಾಥ್.ಕೆ, ಸುನಿಲ್ ಎಸ್.ಎಂ, ರಘು, ಗೌತಮ್ ಹೆಚ್ ಹಾಗು ಸೇತುರಾಮ್, ಕಾರ್ಯದರ್ಶಿಗಳಾಗಿ ಸಚ್ಚಿನ್, ಪೃಥ್ವಿದೇವರಾಜ್, ಕಾರ್ತಿಕ್ ಎಂ.ಹೆಚ್, ಸಂಜಯ್ ಕೆ.ಆರ್ ಹಾಗು ಸಚ್ಚಿನ್ ಮಣಿಧೀರ್, ಖಜಾಂಚಿಯಾಗಿ ಅಭಿ, ಕಾರ್ಯಕಾರಣಿ ಸದಸ್ಯರಾಗಿ ಚಂದನ್, ಪ್ರಕಾಶ್ ಹೆಚ್, ಗಣೇಶ್ ಕೆ ಸಿ, ರಘು ಎಂ.ಜಿ, ಗಿರೀಶ್, ಪ್ರಶಾಂತ್ ಎನ್.ಎಸ್, ಧೃವ, ಲಿಖಿತ್, ಆಕಾಶ್ ಕೊಟಾರಿ, ಮನೋಜ್, ಕುಶಾಲ್ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೂ ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್ ಹಾಗೂ ಮಂಡಲ ಅಧ್ಯಕ್ಷರಾದ ಬಿ.ಪಿ ದೇವಾನಂದ ಮತ್ತು ತಾಲೂಕಿನ ಪ್ರಮುಖರು ಶುಭಹಾರೈಸಿದರು.

Categories
ಕಡೂರು ಚಿಕ್ಕಮಗಳೂರು ತರೀಕೆರೆ

ಕಾಫಿ ನಾಡಲ್ಲಿ ಮೋದಿ ಉತ್ಸವ: ಪ್ರತಿ ತಾಲೂಕಲ್ಲೂ ಸಂಭ್ರಮ!

ಕಾಫಿ ನಾಡಲ್ಲಿ ಮೋದಿ ಉತ್ಸವ: ಪ್ರತಿ ತಾಲೂಕಲ್ಲೂ ಸಂಭ್ರಮ!
– ಶೃಂಗೇರಿ, ಕೊಪ್ಪ, ಎನ್. ಆರ್. ಪುರದಲ್ಲಿ ವಿಜಯೋತ್ಸವ
– ಕಡೂರು, ಬೀರೂರು, ತರೀಕೆರೆಯಲ್ಲಿ ಸಂಭ್ರಮ

NAMMUR EXPRESS NEWS
ಚಿಕ್ಕಮಗಳೂರು: ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದೀಜಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಸಂದರ್ಭಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ನೂತನ ಸಂಸದರಾದ ಸಂಭ್ರಮವನ್ನು ಭಾನುವಾರ ಕಾಫಿ ನಾಡಿನ ಎಲ್ಲಾ ತಾಲೂಕಲ್ಲೂ ಆಚರಣೆ ಮಾಡಲಾಯಿತು.

ಕಡೂರು, ತರೀಕೆರೆಯಲ್ಲಿ ವಿಜಯೋತ್ಸವ

ಶ್ರೀನಿವಾಸ್ ಪೂಜಾರಿ ಸಂಸದರಾಗಿರುವ ಪ್ರಯುಕ್ತ ಲಿಂಗದಳ್ಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಹಾಗೂ ಊಟದ ವ್ಯವಸ್ಥೆ ಮಾಡಲಾಯಿತು. ತರೀಕೆರೆ ತಾಲೂಕಿನಲ್ಲಿ ಹಲವೆಡೆ ಸಂಭ್ರಮಾಚಾರಣೆ ಮಾಡಲಾಯಿತು. ಕಡೂರಿನಲ್ಲಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ಶೃಂಗೇರಿ ಕ್ಷೇತ್ರದಲ್ಲಿ ಸಂಭ್ರಮ: ಎಲ್ಲೆಡೆ ಸಿಹಿ ಹಂಚಿಕೆ!
ಕೊಪ್ಪ, ಎನ್ ಆರ್ ಪುರ, ಶೃಂಗೇರಿ ತಾಲೂಕಿನಾದ್ಯಂತ ಮಾಜಿ ಶಾಸಕ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ ಮತ್ತು ಸಾರ್ವಜನಿಕರಿಗೆ ಮೋದಿ ಪದಗ್ರಹಣದ ಲೈವ್ ವೀಕ್ಷಣೆಯನ್ನು ಬಿಜೆಪಿ ಕೊಪ್ಪ ಮಂಡಲದ ಪರವಾಗಿ ಕೊಪ್ಪ ಬಸ್ ನಿಲ್ದಾಣದಲ್ಲಿ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು