- ವಿಜಯಪುರದಲ್ಲೊಂದು ವಿಚಿತ್ರ ಆತ್ಮಹತ್ಯೆ
- ನೀಡಿಗೆ ನಾಣ್ಯ ಎಸೆಯುಲು ಹೋದವಳು ಶವವಾಗಿ ಬಂದಳು
ನಮ್ಮೂರ್ ಎಕ್ಸ್ಪ್ರೆಸ್ ನ್ಯೂಸ್ ನೆಟ್ವರ್ಕ್
ವಿಜಯಪುರ: ನದಿಗೆ ನಾಣ್ಯ ಎಸೆದು ಮನದಿಚ್ಛೆ ಬೇಡಿಕೊಂಡು ಬರುವುದಾಗಿ ಹೇಳಿ ಕಾರಿನಿಂದ ಕೆಳಗಿಳಿದು ಹೋಗಿದ್ದ ಯುವತಿಯೊಬ್ಬಳು, ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ದೇವಣಗಾಂವ್ -ಅಫಜಲಪುರ ಮಧ್ಯದ ಸೇತುವೆ ಬಳಿ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯ ಶವ 2 ದಿನಗಳ ನಂತರ ಪತ್ತೆಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಐಶ್ವರ್ಯ ಶ್ರೀಪಾಲ ಕಬ್ಬಿನ ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಂಡಿಯಲ್ಲಿ ವಾಸವಾಗಿರುವ ತನ್ನ ಸಹೋದರಿ ಮನೆಗೆ ತೆರಳಿದ್ದ ಐಶ್ಚರ್ಯ ನಂತರ ಕುಟುಂಬದವರೊಂದಿಗೆ ಕಾರಿನಲ್ಲಿ ಕಲಬುರ್ಗಿ ಜಿಲ್ಲೆಯ ಗಾಣಗಾಪುರಕ್ಕೆ ತೆರಳುತ್ತಿದ್ದಳು. ಇದೇ ಸಂದರ್ಭದಲ್ಲಿ ಏನೋ ನೆನಪು ಮಾಡಿಕೊಂಡಂತೆ ಹರಕೆಯ ನಾಣ್ಯ ನದಿಯಲ್ಲಿ ಹಾಕಿಬರುವ ಇಚ್ಛೆಯನ್ನು ಕುಟುಂಬದ ಸದಸ್ಯರ ಬಳಿ ವ್ಯಕ್ತಪಡಿಸಿದ್ದಳು. ಆಕೆಯ ಇಚ್ಛೆಯಂತೆ ಸೇತುವೆ ಬಳಿ ಕಾರು ನಿಲ್ಲಿಸಿದ ಕುಟುಂಬಸ್ಥರು ಕೈಗೆ ನಾಣ್ಯ ನೀಡಿ ಕಳುಹಿಸಿದ್ದರು. ನಾಣ್ಯ ಎಸೆಯುವ ನೆಪವೊಡ್ಡಿದ ಯುವತಿ ನದಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕುಟುಂಬಸ್ಥರಿಗೆ ಗರಸಿಡಿಲು ಬಂಡಿದಂತೆ ಮಾಡಿದೆ.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಆಲಮೇಲು ಠಾಣೆ ಪೆÇಲೀಸರು, ಮೀನುಗಾರರ ಮತ್ತು ಈಜುಗಾರರ ಸಹಾಯದಿಂದ ಯುವತಿಯ ಶವವನ್ನು ಪತ್ತೆ ಮಾಡಿದ್ದಾರೆ. ಐಶ್ವರ್ಯಳ ಆತ್ಮಹತ್ಯೆಗೆ ಕಾರಣವೇನು ಎಂಬುವುದು ಗೊತ್ತಾಗಿಲ್ಲ. ಈ ಕುರಿತಂತೆ ತನಿಖೆ ನಡೆದಿದೆ.