ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಸಾಹಿತ್ಯ ದಿಗ್ಗಜರ ಸಮಾಗಮ!
– ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ನಾಡಿನ ಖ್ಯಾತ ಲೇಖಕರು ಬೇಟಿ
– ಡಾ. ನಾ ಸೋಮೇಶ್ವರ, ಕನ್ನಡದ ಪ್ರೇಮಕವಿ ಬಿ. ಆರ್.
ಲಕ್ಷ್ಮಣರಾವ್ ಚರ್ಚೆ
NAMMUR EXPRESS NEWS
ಕಾರ್ಕಳ: ಜನವರಿ-3-2025ರಂದು ಕಾರ್ಕಳದ ಜೋಡುರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಎರಡು ಪ್ರಮುಖ ದಿಗ್ಗಜರು ಆಗಮಿಸುತ್ತಿದ್ದಾರೆ. ಚಂದನವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರಾಗಿರುವ, ನಡೆದಾಡುವ ಗ್ರಂಥಾಲಯ ಎಂಬ ಖ್ಯಾತಿಯನ್ನು ಪಡೆದ ಡಾ. ನಾ ಸೋಮೇಶ್ವರ ಅವರು ಸಂಜೆ 4:00 ಗಂಟೆಗೆ ಮೂಡುಬಿದಿರೆ ಕ್ರಿಯೇಟಿವ್ ಪುಸ್ತಕಮನೆಗೆ ಹಾಗೂ ಸಂಜೆ 5:00 ಗಂಟೆಗೆ ಕಾರ್ಕಳದ ಜೋಡುರಸ್ತೆಯ ಕ್ರಿಯೇಟಿವ್ ಪುಸ್ತಕ ಮನೆಗೆ ಭೇಟಿ ನೀಡಲಿದ್ದಾರೆ.
ಕನ್ನಡದ ಪ್ರೇಮಕವಿ ಹಾಗು ತುಂಟಕವಿ ಎಂದೇಚಿರಪರಿಚಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಂಜೆ 5:30ಕ್ಕೆ ಪುಸ್ತಕ ಮನೆಗೆ ಆಗಮಿಸುತ್ತಿದ್ದಾರೆ. ಈ ಇಬ್ಬರು ಖ್ಯಾತ ಲೇಖಕರ ಭೇಟಿ ಸಾಹಿತ್ಯಾಸಕ್ತರಿಗೆ ಒಂದುಸುವರ್ಣಾವಕಾಶ. ಸಾಹಿತ್ಯಾಸಕ್ತರು ಈ ಅಪರೂಪದ ಸಂದರ್ಭದಲ್ಲಿ ಪಾಲ್ಗೊಂಡು, ಈ ಸಾಹಿತ್ಯ ದಿಗ್ಗಜರ ಭೇಟಿಯಿಂದ ಪ್ರೇರಣೆಯನ್ನು ಪಡೆಯುವಂತೆ ಆಹ್ವಾನಿಸಲಾಗಿದೆ.
ಸ್ಥಳ:ಕ್ರಿಯೇಟಿವ್ ಪುಸ್ತಕಮನೆ,
ಜೋಡುರಸ್ತೆ, ಕಾರ್ಕಳ