ಕರಾವಳಿ ಟಾಪ್ ನ್ಯೂಸ್
ದುಬೈ ಬಿಸಿಲಿನ ತಾಪಕ್ಕೆ ಕುಂದಾಪುರದ ಯುವಕ ಸಾವು
– ಉಡುಪಿ, ಕುಂದಾಪುರದಲ್ಲಿ ಏನೇನ್ ಆಗಿದೆ..?
NAMMUR EXPRESS NEWS
ಉಡುಪಿ: ಮೆಸ್ಕಾಂ ಪಡುಬಿದ್ರಿ ಶಾಖೆಯಲ್ಲಿ ಲೈನ್ಮೆನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಉದ್ಯಾವರ ಗ್ರಾಮದ ಕಿಶೋರ್ ಕುಮಾರ್(49) ಎಂಬವರು ರಾತ್ರಿ ಮಲಗಿದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕಳೆದ 20 ವರ್ಷಗಳಿಂದ ಲೈನ್ಮೆನ್ ಆಗಿದ್ದ ಇವರು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಸೆ.14ರಂದು ರಾತ್ರಿ ಮಲಗಿದ್ದ ಅವರು, ಬೆಳಗ್ಗೆ ಎಬ್ಬಿಸುವಾಗ ಏಳದೇ ಅಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಬೈ ಬಿಸಿಲಿನ ತಾಪಕ್ಕೆ ಕುಂದಾಪುರದ ಯುವಕ ಸಾವು
ಕುಂದಾಪುರ: ಯು.ಎ.ಇ.ಯಲ್ಲಿ ಬಿಸಿಲಿನ ಝಳ ತಾಳಲಾರದೆ ಕುಂದಾಪುರದ ವಿಟ್ಠಲವಾಡಿ ಯುವಕ ಶಾನ್ ಡಿ’ಸೋಜಾ (19) ಮೃತಪಟ್ಟ ಘಟನೆ ಸೆ.15 ರಂದು ನಡೆದಿದೆ.
ದುಬಾಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾ್ ಅಲ್ ೈಾದಲ್ಲಿ ಬಿಸಿಲಿನ ತಾಪಕ್ಕೆ ಗುರಿಯಾಗಿ ಆರ್ಎಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತರಾಗಿದ್ದಾರೆ. ಅವರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಶಾನ್ ಡಿ’ಸೋಜಾ ಅವರು ಕುಂದಾಪುರದ, ಮೂಲತಃ ಮೂಡುಬಿದಿರೆಯ ಹೊಸಬೆಟ್ಟು ನಿವಾಸಿ ಎಲಿಯಾಸ್ ಸಿರಿಲ್ ಡಿ’ಸೋಜಾ ಮತ್ತು ಪ್ರಮೀಳಾ ಡಿ’ಸೋಜಾ ಅವರ ಪುತ್ರನಾಗಿದ್ದು, ಶಾನ್ ಡಿ’ಸೋಜಾ ತಂದೆ-ತಾಯಿ, ಇಬ್ಬರು ಸಹೋದರರ ಜತೆ ಯು.ಎ.ಇ. ಸೈಂಟ್ ಮೆರೀಸ್ ಚರ್ಚ್ ಬಳಿಯ ಮನೆಯಲ್ಲಿ ವಾಸವಾಗಿದ್ದರು. ಎಲಿಯಾಸ್ ಅವರು ಖಾಸಗಿ ಕಂಪೆನಿಯಲ್ಲಿ ಮ್ಯಾನೆಜರ್ ಆಗಿದ್ದು, ಪ್ರಮೀಳಾ ಅವರು ಅಕೌಂಟೆಂಟ್ ಆಗಿದ್ದರು. ಅವರ ಮಗ ಶಾನ್ ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದರು.
ಕುಸಿದು ಬಿದ್ದು ವ್ಯಕ್ತಿ ಸಾವು
ಕುಂದಾಪುರ ಸಮೀಪದ ಬನ್ನೂರಿನಲ್ಲಿ ರವಿ ಎಂಬವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಅವರಿಗೆ 56 ವರ್ಷ ವಯಸ್ಸಾಗಿತ್ತು ಹಲವು ವರ್ಷಗಳಿಂದ ಅವರು ಫಿಡ್ಸ್, ಬಿಪಿ, ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು ಅವರು ಹಂಗಳೂರು ಸಮೀಪದಲ್ಲಿ ಕುಸಿದು ಬಿದ್ದಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ನೇಣು ಬಿಗಿದುಕೊಂಡು ಆತ್ಮಹತ್ಯೆ!
ಕುಂದಾಪುರ ಸಮೀಪದ ತಕ್ಕಟ್ಟೆ ಗ್ರಾಮದ ನಿವಾಸಿ ಕೃಷ್ಣ (72) ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಿಯಾಗಿ ಕಣ್ಣು ಕಾಣಿಸಿದ ಇವರಿಗೆ ಕೆಮ್ಮಿನ ಕಾಯಿಲೆಯಿತ್ತು. ಕಾಯಿಲೆ ವಾಸಿಯಾಗದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಪೆಗೊಂಡು ಮಲಗುವ ಕೋಣೆಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಅವಘಡ 2 ಸ್ಕೂಟರ್ ಭಸ್ಮ
ಕುಂದಾಪುರದ ತೆಕ್ಕಟ್ಟೆ ವ್ಯಾಪ್ತಿಯ ಉಳ್ಳೂರು-ಹಲ್ಲೂರು ರಸ್ತೆಯ ಮೂಡುಬೆಟ್ಟು ಎಂಬಲ್ಲಿ ಮನೆ ಎದುರು ನಿ್ಲಿಿದ್ ಎರಡು ನ್ೂಟರ್ಗಳು ಆಕಸ್ಮಿಕ ಬೆಂಕಿಗೆ ಸುಟ್ಟುಹೋಗಿದೆ. ಭಾಗೀರಥಿ ಶೆಡ್ತಿ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟಿಕ್ ನ್ಯೂಟರ್ಗೆ ಏಕಾಏಕಿ ಬೆಂಕಿ ಆವರಿಸಿಕೊಂಡಿದ್ದು ಪಕ್ಕದಲ್ಲಿದ್ದ ಜುಪಿಟರ್ ನ್ಯೂಟರ್ಗೂ ಹಬ್ಬಿ ಎರಡು ಸ್ಕೂಟರ್ ಗಳು ಸುಟ್ಟು ಕರಕಲಾಗಿದೆ. ಸ್ಕೂಟರ್ಗಳು ಹೊತ್ತಿ ಉರಿದ ಪರಿಣಾಮ ಮನೆಯ ವಿದ್ಯುತ್ ಮೀಟರ್ ಬೋರ್ಡ್ ಕಿಟಕಿ, ಬಾಗಿಲು, ಗೋಡೆ, ಹೆಂಚುಗಳಿಗೆ ಹಾನಿ ಉಂಟಾಗಿದೆ