ಶಿಕ್ಷಣ ಕ್ಷೇತ್ರದ ಸಾಧನೆಗೆ ಶರತ್ ಗೋರೆ ಅವರಿಗೆ ಪ್ರಶಸ್ತಿ!
– ಮೂಡುಬಿದಿರೆ ವೈಬ್ರೆಂಟ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಶರತ್ ಗೋರೆ ಅವರಿಗೆ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ
– ಶಿಕ್ಷಣ ಸೇವೆ, ಭೌತ ಶಾಸ್ತ್ರಕ್ಕೆ ನೀಡಿರುವ ಅನುಪಮ ಸೇವೆಗೆ ಸಂದ ಗೌರವ
NAMMUR EXPRESS NEWS
ಮೂಡುಬಿದಿರೆ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೂಡುಬಿದಿರೆ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಹಾಗೂ ಟ್ರಸ್ಟಿ ಶರತ್ ಗೋರೆ ಅವರು ಎಎನ್ವೈ ಇಎಲ್ಪಿ ಗ್ರೂಪ್ ಕೊಡ ಮಾಡುವ 2024-25ನೇ ಸಾಲಿನ ಸಾಲಿನ ಕರ್ನಾಟಕ ಶಿಕ್ಷಣ ರತ್ನ – ಅತ್ಯುತ್ತಮ ಭೌತಶಾಸ್ತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಶರತ್ ಗೋರೆ ಅವರು ಶಿಕ್ಷಣ ರಂಗಕ್ಕೆ ನೀಡಿರುವ ಕೊಡುಗೆ ಹಾಗೂ ಕ್ಷೇತ್ರದ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಎಎನ್ವೈಉಎಲ್ಪಿ ಸಂಸ್ಥೆಯ ನಿರ್ದೇಶಕ ಮೊಹಮ್ಮದ್ ಜಾಕೀರ್ ಹುಸೈನ್, ಕನ್ನಡ ಚಿತ್ರರಂಗದ ನಟ ರಾಕೇಶ್ ಅಡಿಗ ಮೊದಲಾದವರು ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ಅತ್ಯುತ್ತಮ ಭೌತ ಶಾಸ್ತ್ರ ಉಪನ್ಯಾಸಕರಲ್ಲಿ ಗೋರೆ ಅವರು ಕೂಡ ಒಬ್ಬರಾಗಿದ್ದು, ಮೂಡುಬಿದಿರೆ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಹಾಗೂ ಟ್ರಸ್ಟಿ ಆಗಿ ರಾಜ್ಯದಲ್ಲಿ ಮಾದರಿ ಕಾಲೇಜನ್ನು ಸ್ಥಾಪನೆ ಮಾಡಿದ್ದಾರೆ. ಅಲ್ಲದೆ ಸಾಮಾಜಿಕವಾಗಿಯೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.