ಕರಾವಳಿ ಟಾಪ್ ನ್ಯೂಸ್
ಮಣಿಪಾಲ: ಟ್ಯಾಂಕರ್ ಗೆ ಬೈಕ್ ಡಿಕ್ಕಿ, ಯುವಕ ಸ್ಥಳದಲ್ಲೇ ಸಾವು
– ಕಾರ್ಕಳ: ಸಿಡಿಲು ಬಡಿದು ವಿದ್ಯಾರ್ಥಿನಿಗೆ ಗಾಯ
– ಉಡುಪಿ : ಕೊಳೆತ ಮತ್ತು ರುಂಡ ಮುಂಡ ಬೇರ್ಪಟ್ಟ ಶವ ಪತ್ತೆ
NAMMUR EXPRESS NEWS
ಮಣಿಪಾಲ: ಕೆಟ್ಟುನಿಂತಿದ್ದ ಟ್ಯಾಂಕರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ. 8 ರಂದು ಸಂಜೆ ಪರ್ಕಳ ಎಸ್ ಬಿಐ ಬ್ಯಾಂಕ್ ಬಳಿ ಸಂಭವಿಸಿದೆ. ಮೃತಪಟ್ಟ ಬೈಕ್ ಸವಾರನನ್ನು ಶೆಟ್ಟಿಬೆಟ್ಟು ದೇವು ಪೂಜಾರಿ ಪುತ್ರ ಸೃಜನ್ ಸಾಗರ್(22) ಎಂದು ಗುರುತಿಸಲಾಗಿದೆ. ಟೈಯರ್ ಪಂಚರ್ ಆಗಿ ರಸ್ತೆಯಲ್ಲಿ ನಿಂತಿದ್ದ ನೀರಿನ ಟ್ಯಾಂಕ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮಣಿಪಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
– ಕಾರ್ಕಳ: ಸಿಡಿಲು ಬಡಿದು ವಿದ್ಯಾರ್ಥಿನಿಗೆ ಗಾಯ
ಕಾರ್ಕಳ : ಸಿಡಿಲು ಬಡಿದು ವಿದ್ಯಾರ್ಥಿನಿಯೋರ್ವಳು ಗಾಯಗೊಂಡ ಘಟನೆ ಕಾರ್ಕಳ ಪುರಸಭಾ ವ್ಯಾಪ್ತಿಯ ಪತ್ತೊಂಜಿಕಟ್ಟೆ ಎಂಬಲ್ಲಿ ನಡೆದಿದೆ.
ಸುರೇಶ್ ಪೂಜಾರಿ ಎಂಬವರ ಪುತ್ರಿ ಶ್ರೀ ಭುವನೇಂದ್ರ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಚೈತನ್ಯ ಸಿಡಿಲಘಾತವಾಗಿ ಅಸ್ವಸ್ಥಗೊಂಡಿದ್ದಾರೆ.
ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೈತನ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರದೀಪ್, ಕಂದಾಯ ನಿರೀಕ್ಷಕ ಶಿವಪ್ರಸಾದ್, ಪುರಸಭಾ ಸದಸ್ಯೆ ನೀತಾ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ಪ್ರವೀಣ್ ಭೇಟಿ ನೀಡಿದ್ದಾರೆ.
– ಉಡುಪಿ : ಕೊಳೆತ ಮತ್ತು ರುಂಡ ಮುಂಡ ಬೇರ್ಪಟ್ಟ ಶವ ಪತ್ತೆ
ಉಡುಪಿ: ಮಣಿಪಾಲ ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟು ಕಲಾಭೂಮಿ ಕಟ್ಟಡದ ಹಿಂಭಾಗದ ಹಾಡಿಯಲ್ಲಿ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ನಡೆದಿದೆ. ವ್ಯಕ್ತಿ ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಶಂಕೆವ್ಯಕ್ತವಾಗಿದೆ. ವ್ಯಕ್ತಿ ಮೃತಪಟ್ಟು 20 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ.ಮೃತದೇಹ ಗುರುತು ಹಿಡಿಯಲಾಗದಷ್ಟು ಕೊಳೆತು ಹೋಗಿದೆ.