ಕರಾವಳಿ ಟಾಪ್ ನ್ಯೂಸ್
– ಪಡಿಬಿದ್ರಿ: ಬಾರುಕೋಲಿನಲ್ಲಿ ಯಕ್ಷಗಾನ ಕಲಾವಿದನಿಗೆ ದೈಹಿಕ ಹಲ್ಲೆ; ದೂರು ದಾಖಲು!
– ಮಂಗಳೂರು:ಸೆಲೂನ್ ದಾಂಧಲೆ ಪ್ರಕರಣ, 14 ಮಂದಿ ಅರೆಸ್ಟ್!
– ವಿಟ್ಲ: ಮಹಿಳೆಯೊಬ್ಬರಿಗೆ ಸೀರೆಗೆ ಬೆಂಕಿ ತಗುಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು
NAMMUR EXPRESS NEWS
ಪಡಿಬಿದ್ರಿ: ಯಕ್ಷಗಾನ ಕಲಾವಿದರೊಬ್ಬರಿಗೆ ದೈಹಿಕ ಹಲ್ಲೆ ನಡೆಸಿದ ಘಟನೆಯೊಂದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಾಲ ವಾಪಸು ನೀಡಲಿಲ್ಲ ಎಂದು ಆರೋಪ ಮಾಡಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಪಡುಬಿದ್ರಿ ನಿವಾಸಿ, ಸಸಿಹಿತ್ಲು ಮೇಳದ ನಿತಿನ್ಕುಮಾರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಸಚಿನ್ ಅಮೀನ್ ಉದ್ಯಾವರ, ಇವರ ತಂದೆ ಕುಶಾಲಣ್ಣ, ಇನ್ನೋರ್ವ ಫೈನಾನ್ಶಿಯರ್ ಆರೋಪಿಗಳು. ಸಚಿನ್ ಮತ್ತು ನಿತಿನ್ ಇಬ್ಬರೂ ಯಕ್ಷಗಾನ ಕಲಾವಿದರು ಜೊತೆಗೆ ಗೆಳೆಯರು ಕೂಡ. ಆದರೆ ಪಡೆದ ಸಾಲ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ನಿತಿನ್ನನ್ನು ಆರೋಪಿ ಸಚಿನ್, ಆತನ ತಂದೆ ಕುಶಾಲಣ್ಣ, ಇನ್ನೋರ್ವ ಫೈನಾನ್ಶಿಯರ್ ಸೇರಿ ಉದ್ಯಾವರದ ಮನೆಯೊಂದರಲ್ಲಿ ಜ.21 ರಂದು ಕಂಬಳದ ಕೋಣಗಳ ಬಾರುಕೋಲಿನ ಮೂಲಕ ಹಲ್ಲೆ ನಡೆಸಿದ್ದಾರೆ. ಬೆತ್ತದಿಂದ ನಿತಿನ್ ಅವರ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಖಾಲಿ ಬಾಂಡ್ ಪೇಪರ್ಗೆ ಬಲವಂತದಿಂದ ಸಹ ಸೇರಿದ್ದಾರೆ. ನಂತರ ಸಂಜೆ ಆರೋಪಿಗಳು ನಿತಿನ್ ಕಳುಹಿಸಿದ್ದಾರೆ. ಜ.21 ರ ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಹೋಗಿದ್ದ ನಿತಿನ್, ಜ.22 ರಂದು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪೊಲೀಸರಿಗೆ ದೂರು ನೀಡಲಾಗಿದೆ. ಈ ಘಟನೆಯ ಕುರಿತು ತನಿಖೆ ನಡೆಸುತ್ತಿದೆ.
– ಮಂಗಳೂರು:ಸೆಲೂನ್ ದಾಂಧಲೆ ಪ್ರಕರಣ, 14 ಮಂದಿ ಅರೆಸ್ಟ್!.
ಮಂಗಳೂರು: ನಗರದ ಬಿಜೈ ಕೆ. ಎಸ್. ಆರ್. ಟಿ. ಸಿ ಬಳಿಯ ಯುನಿಸೆಕ್ಸ್ ಸೆಲೂನ್ಗೆ ರಾಮಸೇನೆಯ ಕಾರ್ಯಕರ್ತರು ನುಗ್ಗಿ ದಾಂಧಲೆಗೈದ ಘಟನೆ ಜ. 23ರಂದು ಮಧ್ಯಾಹ್ನ ನಡೆದಿದೆ. ದಾಂಧಲೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡ ಪೊಲೀಸರು ರಾಮಸೇನೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ ಹಾಗೂ ಟಿವಿ ಚಾನೆಲ್ನ ಕ್ಯಾಮರಾಮ್ಯಾನ್ ಶರಣ್ ರಾಜ್ ಸಹಿತ 14 ಮಂದಿಯನ್ನು ಸಂಜೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಇತರ ಆರೋಪಿಗಳನ್ನು ಫರಂಗಿಪೇಟೆಯ ಹರ್ಷರಾಜ್ ಯಾನೆ ಹರ್ಷಿತ್, ಮೂಡುಶೆಡ್ಡೆಯ ಮೋಹನದಾಸ್ ಯಾನೆ ರವಿ, ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ಉಳಾಯಿಬೆಟ್ಟುವಿನ ರವೀಶ್, ಬೆಂಜನಪದವು ಶಿವಾಜಿನಗರದ ಸುಖೇತ್, ವಾಮಂಜೂರಿನ ಅಂಕಿತ್, ಮೂಡುಶೆಡ್ಡೆ ಶಿವಾಜಿನಗರದ ಕಾಲಿಮುತ್ತು, ಬೊಂಡಂತಿಲ ತಾರಿಗುಡ್ಡೆಯ ಅಭಿಲಾಶ್, ಮೂಡುಶೆಡ್ಡೆ ಶಿವಾಜಿನಗರದ ದೀಪಕ್, ಸರಿಪಳ್ಳದ ವಿಶ್ಲೇಶ್, ಮೂಡುಶೆಡ್ಡೆಯ ಶಿವಾಜಿನಗರದ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.
– ವಿಟ್ಲ: ಮಹಿಳೆಯೊಬ್ಬರಿಗೆ ಸೀರೆಗೆ ಬೆಂಕಿ ತಗುಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು
ವಿಟ್ಲ:ಕೆಲವು ದಿನಗಳ ಹಿಂದೆ ಸುಶೀಲ ಅವರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ. ಅನಂತಾಡಿ ಗ್ರಾಮದ ಶಾಕೊಟ್ಟೆ ನಿವಾಸಿ ದಿ. ಹೊನ್ನಪ್ಪ ಗೌಡ ಅವರ ಪತ್ನಿ ಸುಶೀಲ(76) ಮೃತಪಟ್ಟ ಮಹಿಳೆ. ಮಾಹಿತಿ ಪ್ರಕಾರ ಸುಶೀಲ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದು, ಅಗ್ನಿ ಅವಘಡದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.