ಕರಾವಳಿ ಟಾಪ್ ನ್ಯೂಸ್
– ಪೊಲೀಸ್ ವಿರುದ್ಧ ಬಿಜೆಪಿ ಹೋರಾಟ!
– ಸುಳ್ಯ: ಬೀಗ ಮುರಿದು ಅಂಗಡಿ ಮತ್ತು ಹೋಟೆಲ್ನಿಂದ ಕಳ್ಳತನ
– ಮಂಗಳೂರು: ಹಿಂದೂ ಹೆಸರಲ್ಲಿ ಯುವತಿಗೆ ಪ್ರೀತಿಯ ನಾಟಕ!
– ಉಡುಪಿ: ವಿನಾಕಾರಣ ಸುಳ್ಳು ಕೇಸು: ಪ್ರತಿಭಟನೆ
– ಬ್ರಹ್ಮಾವರ: ಕಾರು-ಬೈಕ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು
NAMMUR EXPRESS NEWS
ಸುಳ್ಯ: ಅಂಗಡಿ ಮತ್ತು ಹೋಟೆಲ್ ಗೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಣ ಕಳವುಗೈದ ಘಟನೆ ಕನಕಮಜಲು ಗ್ರಾಮದ ಕೋಡಿಯಲ್ಲಿ ನ.25ರಂದು ರಾತ್ರಿ ವರದಿಯಾಗಿದೆ. ಕೋಡಿಯಲ್ಲಿರುವ ಜಗನ್ನಾಥ ಅವರ ಅಂಗಡಿ ಹಾಗೂ ಅದರ ಹಿಂಬದಿಯಲ್ಲಿರುವ ಮೋಹನ ಅವರ ಮಾಲಕತ್ವದ ಶ್ರೀರಾಮ್ ಹೋಟೆಲಿಗೆ ಕಳ್ಳರು ನುಗ್ಗಿದ್ದು ಹಣ ಕಳವುಗೈದಿರುವುದಾಗಿ ತಿಳಿದುಬಂದಿದೆ. ಬೆಳಿಗ್ಗೆ ಹೋಟೆಲ್ ಮಾಲಕ ಮೋಹನ ಹಾಗೂ ಜಗನ್ನಾಥ ಅವರು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕನಕಮಜಲ್ಲಿ ಕಳೆದ ಕೆಲವು ತಿಂಗಳಿನಿಂದ ಕಳ್ಳತ ಹಾವಳಿ ಜಾಸ್ತಿಯಾಗಿದ್ದು ಅವರನ್ನು ಮಟ್ಟ ಹಾಕಲು ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯ ಜನರು ದೂರಿದ್ದಾರೆ.
* ಮಂಗಳೂರು: ಹಿಂದೂ ಹೆಸರಲ್ಲಿ ಯುವತಿಗೆ ಪ್ರೀತಿಯ ನಾಟಕ!
ಮಂಗಳೂರು : ಹಿಂದೂ ಯುವತಿಯೋರ್ವಳಿಗೆ ತಾನೂ ಹಿಂದೂ ಎಂದು ನಂಬಿಸಿ ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕಕಕ್ಕೆ ಪ್ರೇರೇಪಿಸಿ, ಅತ್ಯಾಚಾರ ಎಸಗಿದ್ದಾನೆ ಎಂಬತೆ ಕ್ರಿಶ್ಚಿಯನ್ ಯುವಕನ ವಿರುದ್ಧ ದೂರು ದಾಖಲಾಗಿದೆ.
ಯುವತಿಯನ್ನು ಮಂಗಳೂರು ನಿವಾಸಿ ಹಿಂದೂ ಯುವತಿ ಎನ್ನಲಾಗಿದೆ. ಆರೋಪಿಯನ್ನು ಬಂಟ್ವಾಳ ತಾಲೂಕಿನ ಮಾಣಿಲ ನಿವಾಸಿ ವಾಲ್ಟರ್ ಡಿಸೋಜ ಎಂದು ಗುರುತಿಸಲಾಗಿದೆ. ಆರೋಪಿ ವಾಲ್ಟರ್ ಡಿಸೋಜ 2016 ರಿಂದ ಈ ರೀತಿಯಾಗಿ ವಂಚನೆ ಮಾಡುತ್ತಿದ್ದಾನೆ, ಈ ವಿಷಯ ಇತ್ತೀಚೆಗೆ ಆತನ ತಂಗಿಯ ಮುಖಾಂತರ ಅವನು ಹಿಂದೂ ಅಲ್ಲ ಕ್ರಿಶ್ಚನ್ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದಿದ್ದಾರೆ. ಈತ ನಕಲಿ ಗುರುತು ಪತ್ರಗಳ ಬಳಕೆಯಿಂದ, ಹೋಟೆಲ್ ರೂಮ್ಗಳಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ, ಇತ್ತೀಚೆಗೆ ಆಕೆಯ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಬ್ಲಾಕ್ಮೇಲ್ ಮಾಡುವ ಪ್ರಯತ್ನ ಮಾಡಿದ್ದಾನೆ. ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯುವತಿಗೆ ಕಾನೂನು ತಿಳುವಳಿಕೆ ಇಲ್ಲದ ಕಾರಣ ತಡವಾಗಿ ತಮ್ಮ ಹಿತೈಷಿಗಳ ಸಹಾಯದಿಂದ ದೂರು ನೀಡಿದ್ದಾರೆ. ತಮ್ಮ ಬಳಿ ಇರುವ ಎಲ್ಲಾ ಸಾಕ್ಷ್ಯಧಾರಗಳನ್ನು ದೂರಿನ ಜೊತೆ ಪಾಂಡೇಶ್ವರ ಪೋಲಿಸ್ ಠಾಣೆಗೆ ಹಸ್ತಾಂತರಿಸಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
* ಉಡುಪಿ: ವಿನಾಕಾರಣ ಸುಳ್ಳು ಕೇಸು; ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
ಉಡುಪಿ: ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಮೂಲಕ ನಮ್ಮನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಖಾಕಿ ಕಾಂಗ್ರೆಸ್ ಆಗಬಾರದು. ಖಾಕಿಗೆ ಗೌರವ ಇದೆ, ಆದರೆ ಖಾಕಿ ಕಾಂಗ್ರೆಸ್ ಆದರೆ ಪ್ರತಿಭಟಿಸುತ್ತೇವೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ.ಅರುಣ್ ಕುಮಾರ್ ಅವರ ವಿರುದ್ಧ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಮೇಲೆ ದೊಡ್ಡ ಪ್ರಮಾಣದಲ್ಲಿ ಕೇಸುಗಳನ್ನು ಹಾಕುತ್ತಿದ್ದಾರೆ. ಯಾವುದೇ ಸಾರ್ವಜನಿಕ ದೂರು ಇಲ್ಲದಿದ್ದರೂ ಸುಮೋಟೋ ಕೇಸ್ ಹಾಕಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಕಾಂಗ್ರೆಸ್ ನ ಕೈಗೊಂಬೆಯಂತೆ ಕೆಲಸ ಮಾಡಬಾರದು. ಈ ಸರ್ಕಾರ ಮುಸಲ್ಮಾನರಿಗೆ ದೊಡ್ಡ ಬೆಂಬಲ ನೀಡುತ್ತಿದೆ ಎಂದರು., ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಗಿ ಭಾಗಿಯಾಗಿದ್ದರು.
* ಬ್ರಹ್ಮಾವರ: ಕಾರು-ಬೈಕ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು
ಉಡುಪಿ: ಬ್ರಹ್ಮಾವರ ಹನೇಹಳ್ಳಿ ಗ್ರಾಮದ ಬಾರಕೂರು ಸರಕಾರಿ ಆಸ್ಪತ್ರೆ ಸಮೀಪ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನ.24ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಬೈಕ್ ಸವಾರ ಹರೀಶ್ ಎಂದು ಗುರುತಿಸಲಾಗಿದೆ. ಮಂದಾರ್ತಿ ಕಡೆಯಿಂದ ಬಾರ್ಕೂರು ಕಡೆಗೆ ಹೋಗುತ್ತಿದ್ದ ಕಾರು, ಮಂದಾರ್ತಿ ಕಡೆಗೆ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯ ಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ನ.25ರಂದು ಬೆಳಗಿವ ಜಾವಾ ಮೃತಪಟ್ಟರು ಎಂದು ತಿಳಿದುಬಂದಿದೆ.