ಕಾರ್ಕಳ: 6 ಗ್ರಾಪಂ 8 ಸದಸ್ಯ ಸ್ಥಾನಗಳ ಉಪ ಚುನಾವಣೆ ಫಲಿತಾಂಶ
* 8 ಸ್ಥಾನದಲ್ಲಿ: 3 ಬಿಜೆಪಿ, 3 ಕಾಂಗ್ರೆಸ್ ಹಾಗೂ 2 ಪಕ್ಷೇತರ ಅಭ್ಯರ್ಥಿಗಳ ಗೆಲುವು
NAMMUR EXPRESS
ಕಾರ್ಕಳ : ಕಾರ್ಕಳ ತಾಲೂಕಿನ 6 ಗ್ರಾಮ ಪಂಚಾಯತ್ಗಳಲ್ಲಿ ತೆರವಾಗಿರುವ 8 ಸದಸ್ಯ ಸ್ಥಾನಗಳಿಗೆ ನ. 23ರಂದು ಉಪಚುನಾವಣೆ ನಡೆದಿದ್ದು, ನ. 26ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು.
8 ಸ್ಥಾನದಲ್ಲಿ 3 ಬಿಜೆಪಿ ಅಭ್ಯರ್ಥಿ, 3 ಕಾಂಗ್ರೆಸ್ ಹಾಗೂ 2 ಪಕ್ಷೇತರ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ನಿಟ್ಟೆ – ಬಿಜೆಪಿ ಗೆಲುವು
ನಿಟ್ಟೆ ಗ್ರಾ.ಪಂ.ನ (ಸಾಮಾನ್ಯ ಮಹಿಳೆ ಮೀಸಲಾತಿ)
1 ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಜ್ಯೋತಿ ರೀನಾ ಡಿ’ಸೋಜಾ (352) ಹಾಗೂ ಕಾಂಗ್ರೆಸ್ನ ಲಿನೆಟ್ ಮರೀನಾ ಡಿ’ಸೋಜಾ (228) ಮತ ಪಡೆದಿದ್ದು, 124 ಮತಗಳ ಅಂತರದಲ್ಲಿ ಗೆಲುವು ಜ್ಯೋತಿ ರೀನಾ ಡಿ’ಸೋಜಾ ಪಾಲಾಗಿದೆ.
ಕೆರ್ವಾಶೆ – ಬಿಜೆಪಿಗೆ ಗೆಲುವು
ಕೆರ್ವಾಶೆ ಗ್ರಾ.ಪಂ.ನಲ್ಲಿ ಖಾಲಿಯಿದ್ದ 1 (ಸಾಮಾನ್ಯ ಮೀಸಲಾತಿ) ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಧರ್ಮರಾಜ ಹೆಗ್ಡೆ (367) ಹಾಗೂ ಕಾಂಗ್ರೆಸ್ನ ನಾರಾಯಣ ನಾಯಕ್ (213) ಮತ ಪಡೆದಿದ್ದು, 154 ಮತಗಳ ಅಂತರದಲ್ಲಿ ಗೆಲುವು ಬಿಜೆಪಿ ಅಭ್ಯರ್ಥಿಯ ಪಾಲಾಗಿದೆ.
ಕಡ್ತಲ – ಕಾಂಗ್ರೆಸ್ ಗೆಲುವು
ಇಲ್ಲಿನ 1 ಸ್ಥಾನ(ಹಿಂದಳಿದ ಬ ವರ್ಗ)ಕ್ಕೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ದೀಕ್ಷಿತ್ ಶೆಟ್ಟಿ (371), ಬಿಜೆಪಿಯ ಗುಣವತಿ ಅರವಿಂದ ಹೆಗ್ಡೆ (283) ಮತ ಪಡೆದಿದ್ದು, 87 ಮತಗಳ ಅಂತರದಲ್ಲಿ ಗೆಲುವು ಕಾಂಗ್ರೆಸ್ ಅಭ್ಯರ್ಥಿ ದೀಕ್ಷಿತ್ ಶೆಟ್ಟಿ ಪಾಲಾಗಿದೆ.
ಈದು – ಬಿಜೆಪಿ ಗೆಲುವು
ಈದು ಪಂಚಾಯತ್ನಲ್ಲಿ ಖಾಲಿಯಿದ್ದ 1 ಸ್ಥಾನ(ಅನುಸೂಚಿತ ಪಂಗಡ ಮತ್ತು ಮಹಿಳಾ ಮೀಸಲಾತಿ) ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಂತಿ (296) ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಾರಿಜಾ (204) ಮತ ಪಡೆದಿದ್ದು, 92 ಮತಗಳ ಅಂತರದಲ್ಲಿ ಜಯಂತಿ ಗೆಲುವು ಸಾಧಿಸಿದ್ದಾರೆ.
ನಲ್ಲೂರು – ಕಾಂಗ್ರೆಸ್ ಗೆಲುವು
ನಲ್ಲೂರು ಗ್ರಾ.ಪಂ.ನ (ಅ.ಜಾ ಮತ್ತು ಮಹಿಳಾ ಮೀಸಲಾತಿ) 1 ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ನ ಸವಿತಾ ಶ್ರೀಧರ್ (321) ಹಾಗೂ ಬಿಜೆಪಿಯ ಸುಮತಿ (256) ಮತ ಪಡೆದಿದ್ದು, 65 ಮತಗಳ ಅಂತರದಲ್ಲಿ ಸವಿತಾ ಶ್ರೀಧರ್ ಜಯಭೇರಿ ಸಾಧಿಸಿದ್ದಾರೆ.
ನೀರೆ – 1 ಕಾಂಗ್ರೆಸ್, 2 ಪಕ್ಷೇತರ ಗೆಲುವು
ನೀರೆ ಗ್ರಾ.ಪಂ. (3 ಸ್ಥಾನ) ನೀರೆ – 1 (ಅ.ಪಂ. ಮಹಿಳಾ ಮೀಸಲಾತಿ)ರಲ್ಲಿ ಖಾಲಿಯಿದ್ದ 1 ಸ್ಥಾನಕ್ಕೆ ಕಾಂಗ್ರೆಸ್ನಿಂದ ಸೌಮ್ಯ ಎಂಬವರು ಓರ್ವರೆ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೀರೆ – 2 (ಹಿಂದುಳಿದ ಅ ವರ್ಗ/ಸಾಮಾನ್ಯ) ರಲ್ಲಿ ಖಾಲಿಯಿದ್ದ 2 ಸ್ಥಾನಕ್ಕೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಪ್ರಸನ್ನ ಆಚಾರ್ಯ (151) ಮಹೇಶ್ (405) ಹಾಗೂ ರಾಜೇಂದ್ರ ಶೆಟ್ಟಿ (422) ಮತ ಪಡೆಯುವ ಮೂಲಕ ಗೆಲುವು ಪಕ್ಷೇತರ ಅಭ್ಯರ್ಥಿಗಳ ಪಾಲಾಗಿದೆ.