ಮಾರಣಕಟ್ಟೆಯಲ್ಲಿ ಮಕರ ಸಂಕ್ರಮಣ ಉತ್ಸವದ ಸಜ್ಜು!
– ಜ.14ರಿಂದ 16ರವರೆಗೆ ಉತ್ಸವ: ಸರ್ವರಿಗೂ ಸ್ವಾಗತ
– ವಿವಿಧ ರೀತಿಯ ಕೆಂಡಸೇವೆ, ಮಂಡಲ ಸೇವೆ, ಯಕ್ಷಗಾನ ಸೇವೆ
NAMMUR EXPRESS NEWS
ಕುಂದಾಪುರ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ವರ್ಷಾವಧಿಯ ಮಕರ ಸಂಕ್ರಮಣ ಉತ್ಸವ ನಡೆಯಲಿದ್ದು, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಜ.14 ರಿಂದ 16ರ ವರೆಗೆ ನಡೆಯಲಿರುವ ಮಕರ ಸಂಕ್ರಮಣ ಉತ್ಸವಕ್ಕೆ ಸಂಪೂರ್ಣ ಸಿದ್ಧತೆ ನಡೆದಿದೆ. ಕರಾವಳಿಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಾರಣಕಟ್ಟೆ ದೇವಾಲಯದಲ್ಲಿ ಸಾವಿರಾರು ಭಕ್ತರು ಬೆಳಿಗ್ಗೆಯಿಂದ ದೇವರ ದರ್ಶನ ಪಡೆಯುತ್ತಾರೆ. ಜ.14ರಂದು ಬೆಳಗ್ಗೆ 9ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ 10.30ಕ್ಕೆ ಕೆಂಡಸೇವೆ, ಜ.15, ಬೆಳಗ್ಗೆ ಮಹಾಮಂಗಳಾರತಿ, ರಾತ್ರಿ 9.30ಕ್ಕೆ ಮಂಡಲ ಸೇವೆ, ಜ. 16 ರಂದು ಬೆಳಗ್ಗೆ 9:30ಕ್ಕೆ ಮಹಾಮಂಗಳಾರತಿ ಹಾಗೂ ಮಂಡಲ ಸೇವೆ, ರಾತ್ರಿ ಎಂಟು ಗಂಟೆಗೆ ಕಡಲು ನೈವೇದ್ಯ ಹಾಗೂ ಮಹಾಮಂಗಳಾರತಿ ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ ಸೇವಾ ಆಟ ಜರಗಲಿದೆ. ಸರ್ವರನ್ನು ಆಡಳಿತ ಮಂಡಳಿ ಸ್ವಾಗತಿಸಿದೆ.