ಕರಾವಳಿಯಲ್ಲಿ ಈಡಿಗ ವಿಶ್ವ ಸಮ್ಮೇಳನದ ರಂಗು!
– ರಾಜ್ಯದ ಮೂಲೆ ಮೂಲೆಯಿಂದ ಜನ ಸಾಗರ
– ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಗಮನ ಸೆಳೆದ ಬೀಚ್ ಫೆಸ್ಟಿವಲ್: ಬೀಚಿನಲ್ಲಿ ಜನವೋ ಜನ!
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದ ಕಳಿಯ ಸಸಿಹಿತ್ಲು ಇದರ ಸುವರ್ಣ ಮಹೋತ್ಸವದ ಅಂಗವಾಗಿ ವಿಶ್ವಸಮ್ಮೇಳನ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸುವರ್ಣ ಸಿರಿ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಸಿಕ್ಕಿದ್ದು ಇದೀಗ ಎರಡನೇ ಕಾಲಿಟ್ಟಿದೆ. ಜ. 24ರಂದು ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನದಿಂದ ಅಗ್ಗಿದಕಳಿಯ ನಾರಾಯಣಗುರು ಸ೦ಘದವರೆಗೆ ಅದ್ದೂರಿಯ ಜನಪದ ಮೆರವಣಿಗೆ ನಡೆಯಿತು. ಉದ್ಯಮಿ ಧನಂಜಯ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.ಈ ಸಂದರ್ಭ ಶ್ರೀಕ್ಷೇತ್ರ ಬಳ್ಕೊಟ್ಟು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬೆಳಗಾವಿ ಶ್ರೀಕ್ಷೇತ್ರ ನಿಪ್ಪಾಣಿ ಮಠದ ಪೀಠಾಧಿಪತಿ ಶ್ರೀ ಅರುಣಾನಂದ ಸ್ವಾಮೀಜಿ ಮುಂಬೈ ಶ್ರೀಕ್ಷೇತ್ರ ಪೂವಾಯಿಯ ಶ್ರೀ ಸುವರ್ಣ ಬಾಬಾ, ಮಹೇಶ್ ಶಾಂತಿ, ಮಾಜಿ ಸಚಿವ ಸುನೀಲ್ ಕುಮಾರ್, ರಾಜಶೇಖರ ಕೋಟ್ಯಾನ್, ಸಿ.ಬಿ ಕರ್ಕೇರ, ಪ್ರಕಾಶ್ ಬಿನ್, ಸತ್ಯಜಿತ್ ಸುರತ್ಕಲ್, ಎಲ್ ವಿ ಅಮೀನ್, ಧರ್ಮಪಾಲ ದೇವಾಡಿಗ, ಹರೀಶ್ ಅಂಕೇಶ್ವರ, ಚಂದ್ರಶೇಖರ ಬೆಳ್ಳಡ. ರಮೇಶ್ ಚೇಳಾಯರು, ನರೇಶ್ ಸಸಿಹಿತ್ಸು ಸರೋಜಿನಿ ಶಾಂತರಾಜ್, ಎಸ್.ಆರ್.ಪ್ರದೀಪ್, ಉದಯ ಬಿ. ಸುವರ್ಣ, ರಂಜಿತ್ ಪೂಜಾರಿ ತೋಡಾರು ಮತ್ತಿತರು ಉಪಸ್ಥಿತರಿದ್ದರು.
ಗಮನ ಸೆಳೆದ ಬೀಚ್ ಫೆಸ್ಟಿವಲ್: ಬೀಚಿನಲ್ಲಿ ಜನವೋ ಜನ!
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವದ ಸಮಿತಿಯ ರಮೇಶ್ ಪೂಜಾರಿ ವಹಿಸಿದ್ದು, ಉದ್ಘಾಟನೆಯನ್ನು
ಶ್ರೀ ಮಹಾ ಶೇಷ ರುಂಡಮಾಲಿನಿ ದೇವಸ್ಥಾನ ಪೂವೈ ಮುಂಬೈ ಶ್ರೀ ಸುವರ್ಣ ಬಾಬಾ, ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ನಂತರ ವೇದಿಕೆಯಲ್ಲಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೀಚಿನಲ್ಲಿ ಜನವೋ ಜನ!
ಬೀಚ್ ಫೆಸ್ಟಿವಲ್ ಕಾರ್ಯಕ್ರಮದ ಪ್ರಯುಕ್ತ ಆಹಾರವನ್ನು ಸವಿಯಲು ಜನಜಂಗುಳಿಯೇ ಸೇರಿದ್ದು, ಸಂಭ್ರಮಿಸುತ್ತಿದ್ದರು. ಕಾರ್ಯಕ್ರಮದಲ್ಲಿ ಹರೀಶ್ ಪೂಜಾರಿ ಅಧ್ಯಕ್ಷರು ಬಿಲ್ಲವ ಸಂಘ ಅಂಕಲೇಶ್ವರ ಗುಜರಾತ್, ಮೀನಾಕ್ಷಿ ಶಿಂದೆ, ಶಶಿಧರ್ ಶೆಟ್ಟಿ, ಅನಿಲ್ ಕುಮಾರ್, ಭುಜಂಗ ಕೆ, ಚಂದ್ರಹಾಸ್ ಬೆಳ್ಚಡ, ನಿಶ್ಚಲ್ ಶೆಟ್ಟಿ, ಮನೋಜ್ ನಾಗಪಾಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.