ಕಾರ್ಕಳ: ಕಾಡ್ಗಿಚ್ಚಿಗೆ ಅಪಾರ ಅರಣ್ಯ ಸಂಪತ್ತು ಆಹುತಿ!
– ಅಪಾರ ಸಸ್ಯ ಸಂಕುಲ , ಮರಗಳು ನಾಶ
– 50 ಜನರ ತಂಡದಿಂದ ಅರಣ್ಯ ಉಳಿಸಿದರು!
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಮರ್ಣೆ ಗ್ರಾಮ ಪಂಚಾಯತಿ ಹಾಗೂ ಶಿರ್ಲಾಲು ಗ್ರಾಮ ಪಂಚಾಯತಿ ಗಡಿ ಭಾಗವಾದ ಚಿಂಕರಮಲೆಯ ಅರಣ್ಯ ವ್ಯಾಪ್ತಿಯ ಉಯ್ಯಾಲೆ ಪಾದೆ ಎಂಬಲ್ಲಿ ವ್ಯಾಪ್ತಿ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಅರಣ್ಯ ಹೊತ್ತಿ ಉರಿಯುತ್ತಿದ್ದು ಅಪಾರ ಸಸ್ಯ ಸಂಕುಲ , ಮರಗಳು ನಾಶವಾಗಿದೆ. ಚಿಂಕರ ಮಲೆ ಅರಣ್ಯ ವ್ಯಾಪ್ತಿಯಲ್ಲಿ ಸುತ್ತ ಮುತ್ತ ಪ್ರದೇಶಗಳಲ್ಲಿ ಈಗಾಗಲೇ ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದುಕಳೆದ ಮೂರು ದಿನಗಳಿಂದ ಉರಿಯುತ್ತಿರುವ ಕಾಳ್ಗಿಚ್ಚಿಗೆ ಸುಮಾರು ಮೂರು ಹೆಕ್ಟೇರ್ ಪ್ರದೇಶ ಆಹುತಿಯಾಗಿದೆ
50 ಜನರ ತಂಡದಿಂದ ಅರಣ್ಯ ಉಳಿಸಿದರು!
ಉಯ್ಯಾಲೆ ಪಾದೆಯು ಮುಖ್ಯ ರಸ್ತೆಯಿಂದ ಸುಮಾರು ಎರಡು ಕಿ.ಮೀ . ಗುಂಡಮ, ಮಾರ್ಲಿ, ಕುದುರು ಪ್ರದೇಶಗಳಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ಸುಮಾರು 50 ಜನರ ತಂಡ ಬೆಂಕಿಯನ್ನು ನಂದಿಸಿದೆ. ಇನ್ನೊಂದೆಡೆ ಈಗಾಗಲೇ ಅರಣ್ಯಾಧಿಕಾರಿಗಳ ತಂಡವು ಕಾಡ್ಗಿಚ್ಚು ಹಬ್ಬಿರುವ ಪ್ರದೇಶಕ್ಕೆ ಭೇಟಿ ನೀಡಿ ಬೆಂಕಿ ಆರಿಸಲು ನಿರಂತರ ಪರಿಶ್ರಮಪಡುತ್ತಿದೆ. ಶಿರ್ಲಾಲು ಪ್ರದೇಶದಲ್ಲಿ ಕಾಡ್ಗಿಚ್ಚು ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಜೇನು ಗೂಡಿಗೆ ಹಾಕಿದ ಬೆಂಕಿ ಹಾಕಿದ್ದರಾ?
ಸಿಡಿಲು ಬಡಿದು ಅಥವಾ ಜೇನು ತೆಗೆಯುವ ಸಂದರ್ಭದಲ್ಲಿ ಜೇನು ಹುಳುಗಳನ್ನು ಓಡಿಸುವಾಗ ಹೊಗೆ ಹಾಕಿದ್ದು ಇದರಿಂದ ಬೆಂಕಿ ಅಥವಾ ರಣ ಬಿಸಿಲಿಗೆ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ. ಕಾರ್ಕಳ ತಾಲೂಕು ವಲಯ ಅರಣ್ಯಾ ವಲಯಾಧಿಕಾರಿ ಪ್ರಭಾಕರ್ ಕುಲಾಲ್ ಸಿಡಿಲಿನ ಬೆಂಕಿ ಬಿದ್ದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.