ಕೊಪ್ಪದ ಕುಂಚೂರು ಜಾತ್ರೆಗೆ ಸಜ್ಜು!
– ಫೆ.14ರಿಂದ ಫೆ.19ರವರೆಗೆ ಧಾರ್ಮಿಕ ಕಾರ್ಯಕ್ರಮ
– ದುರ್ಗಾಪರಮೇಶ್ವರಿ ಅಮ್ಮನವರ ಸೇವೆಗೆ ಭಕ್ತರು ಸಿದ್ಧ
NAMMUR EXPRESS NEWS
ಕೊಪ್ಪ: ಕೊಪ್ಪ ಸಮೀಪದ ಶ್ರೀ ಕ್ಷೇತ್ರ ಕುಂಚೂರು ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವ ಫೆಬ್ರವರಿ 15 ರಂದು ನೆರವೇರಲಿದೆ. ಈ ಅಂಗವಾಗಿ ಫೆ.14ರಿಂದ ಫೆ.19ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆಬ್ರವರಿ 14 ರಂದು ಶ್ರೀ ಗಣಪತಿ ಹೋಮ, ರಾಶಿಪೂಜೆ ಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದ್ದು, ಫೆ.15ರಂದು ಮಧ್ಯಾಹ್ನ ರಥಾರೋಹಣ, ರಾತ್ರಿ 8 ಗಂಟೆಗೆ ರಥೋತ್ಸವ ನೆರವೇರಲಿದ್ದು, ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಮಂದಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಫೆ. 16 ರಂದು ತುಲಾಭಾರ, ರಾತ್ರಿ ಯಕ್ಷಗಾನ ನಡೆಯಲಿದೆ. ಫೆ.17 ರಂದು ಶ್ರೀ ದುರ್ಗಿ ಸಮಾರಾಧನೆ, ಸಾಮೂಹಿಕ ಸತ್ಯನಾರಾಯಣ ವ್ರತ, ರಾತ್ರಿ ಮಾರಿ ಹಾಗೂ ಭೂತನ ಪೂಜೆ ನಡೆಯುತ್ತವೆ. ಫೆಬ್ರವರಿ 18 ರಂದು ಮಾರಿ ಪೂಜೆ ನಡೆಯಲಿದ್ದು, ಫೆ.19 ರಂದು ಸಂಪ್ರೋಕ್ಷಣೆಯೊಂದಿಗೆ ಕುಂಚೂರು ಜಾತ್ರೆಗೆ ತೆರೆ ಬೀಳಲಿದೆ. ಇತ್ತೀಚಿನ ವರ್ಷಗಳಲ್ಲಿ ಶ್ರೀ ಕ್ಷೇತ್ರ ಕುಂಚೂರು ಅಭಿವೃದ್ಧಿ ಹೊಂದಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಇಮ್ಮಡಿಯಾಗಿದೆ. ಶ್ರೀ ಕ್ಷೇತ್ರದ ಮುಖ್ಯಸ್ಥರಾದ ಕುಂಚೂರು ಶ್ರೀನಿವಾಸ್ ಹಾಗೂ ಗ್ರಾಮಸ್ಥರು ರಥೋತ್ಸವ, ಜಾತ್ರೆ, ಮಾರಿ ಹರಕೆಗಳನ್ನು ವಿಶೇಷ ಪರಿಶ್ರಮದಿಂದ ನಿರ್ವಹಿಸಲಿದ್ದಾರೆ.