ಕೊಪ್ಪ ಮೂಲದ ಯುವತಿ ಬೈಕ್ ಅಪಘಾತಕ್ಕೆ ಬಲಿ!
– ಬೆಂಗಳೂರಲ್ಲಿ ಕೆಲಸ ಮುಗಿಸಿ ಹೋಗುವಾಗ ಲಾರಿ ಡಿಕ್ಕಿ: ಮತ್ತೋರ್ವನಿಗೆ ಗಂಭೀರ ಗಾಯ
– ತಂದೆ ಮನೆ ಶಿಕಾರಿಪುರದಲ್ಲಿ ಅಂತಕ್ರಿಯೆ
NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕು ಗಣಪತಿಕಟ್ಟೆಯ ಮೂಲದ ಯುವತಿಯೊಬ್ಬಳು ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತಕ್ಕೆ ಗುರುವಾರ ಬಲಿಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗಣಪತಿ ಕಟ್ಟೆ ಮೂಲದ ರೇಣುಕಾ ಎಂಬುವರ ಪುತ್ರಿ ದೀಪ (25) ಎಂಬ ಯುವತಿ ಬೈಕ್ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಗುರುವಾರ ಬೆಳಗಿನ ಜಾವ 4:00ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಕಚೇರಿ ಕೆಲಸ ಮುಗಿಸಿ ಬೈಕ್ ಅಲ್ಲಿ ಮನೆಗೆ ತೆರಳುತ್ತಿದ್ದ ವೇಳೆಗೆ ಲಾರಿ ಗುದ್ದಿದ ಪರಿಣಾಮ ದೀಪಾ ಎಂಬುವರು ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಯುವಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ದೀಪ ಅವರ ಮೂಲತಃ ತಂದೆಯ ಮನೆಯಾದ ಶಿಕಾರಿಪುರದಲ್ಲಿ ಅಂತ್ಯಕ್ರಿಯೆ ನಡೆದಿದೆ.