- ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಲೆನಾಡು ಮೂಲದ ಸಾಹಿತಿ
- ಕನ್ನಡದ ನಂ 1 ವಿಮರ್ಶಕ ಸ್ಥಾನ ಪಡೆದಿದ್ದರು
- ಪತ್ರಕರ್ತರಾಗಿ, ಸಾಹಿತಿಯಾಗಿ ನಾಡಿಗೆ ಅಪಾರ ಸೇವೆ
NAMMUR EXPRESS NEWS
ಶಿವಮೊಗ್ಗ: ಖ್ಯಾತ ವಿಮರ್ಶಕ, ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ ಸಾಹಿತಿ ಡಿಎಸ್ ನಾಗಭೂಷಣ ಅವರು ನಿಧನರಾಗಿದ್ದಾರೆ. ನೇರ ನಡೆ ನುಡಿಯ ಲೇಖಕರಾಗಿದ್ದ 70 ವರ್ಷದ ಡಿಎಸ್ ನಾಗಭೂಷಣ ಅವರು ಆನಾರೋಗ್ಯ ಕಾರಣ ಬುಧವಾರ ತಡರಾತ್ರಿ ನಿಧನರಾಗಿದ್ದು, ಗುರುವಾರ ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಕಲ್ಲಹಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹತ್ತು ವರ್ಷ ‘ಹೊಸ ಮನುಷ್ಯ’ ಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ನಾಗಭೂಷಣ ಅವರು, ರೂಪರೂಪಗಳನ್ನು ದಾಟಿ, ವಿಧವಿಧ, ಇಂದಿಗೆ ಬೇಕಾದ ಗಾಂಧಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಈ ಕೃತಿಗಳು ನಿಷ್ಠರ ವಿಮರ್ಶೆಯ ಧ್ವನಿಯಾಗಿದ್ದವು. ಇನ್ನು ಶ್ರೀಮತಿ ಸವಿತಾ ನಾಗಭೂಷಣ ಸಹ ಕನ್ನಡದ ಖ್ಯಾತ ಲೇಖಕಿ ಮತ್ತು ಕವಿಯಾಗಿದ್ದಾರೆ. ಸುಮಾರು 20 ವರ್ಷದ ಹಿಂದೆ ನಾಗಭೂಷಣರು ಆಕಾಶವಾಣಿಯ ಕೆಲಸದಿಂದ
ಸ್ವಯಂನಿವೃತ್ತಿ ಪಡೆದ ಮೇಲೆ ದಂಪತಿಗಳು ಶಿವಮೊಗ್ಗದಲ್ಲಿ ವಾಸವಿದ್ದರು.