- ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ
- ಇಂದು ಭಾರೀ ಮಳೆ: ಎಲ್ಲೆಡೆ ರೆಡ್ ಅಲರ್ಟ್
- ತಾಲೂಕು ಆಡಳಿತಗಳಿಂದ ಮಳೆ ಸಭೆ
NAMMUR EXPRESS NEWS
ಶಿವಮೊಗ್ಗ: ಕಳೆದ 2 ದಿನಗಳಿಂದ ರಾಜ್ಯದ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು ಮಲೆನಾಡಿನಲ್ಲಿ ಮಳೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುರುವಾರ ಇಡೀ ದಿನ ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ಮೇ 19ರ ಗುರುವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಭಾರಿ ಮಳೆಯಾಗುವ ಸಂಭವವಿದೆ. ಸುಮಾರು 10 ಸೆಂಟಿಮೀಟರ್ ನಿಂದ 15 ಸೆಂಟಿಮೀಟರ್ ಮಳೆ ಸುರಿಯುವ ಸಾಧ್ಯತೆಯಿದೆ.
ಹಲವೆಡೆ ಅಪಘಾತ!: ಮಳೆ ಹಿನ್ನೆಲೆ ಹಲವೆಡೆ ಸಣ್ಣ ಪುಟ್ಟ ಅಪಘಾತ ಸಂಭವಿಸಿದೆ. ಇನ್ನು ಮರಗಳು ಧರೆಗೆ ಉರುಳಿವೆ.
ಅಧಿಕಾರಿಗಳೇ ಎಚ್ಚರ ಎಚ್ಚರ
ಮಳೆ ಅನಾಹುತ ಸೃಷ್ಟಿಸುವ ಸಾಧ್ಯತೆಗಳಿದ್ದು ತಾಲೂಕು ಆಡಳಿತಗಳು ಎಚ್ಚರಿಕೆ ವಹಿಸಬೇಕಿದೆ. ಮನೆ, ಮರಗಳು ಉರುಳುವ ಸಾಧ್ಯತೆಗಳಿವೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಇರುತ್ತಿದೆ.