- ರಿಪ್ಪಿನಪೇಟೆಯ ಯುವ ಪ್ರತಿಭೆ ಪೂಜಿತಾ ಸಾಧನೆ
- ಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿ
NAMMUR EXPRESS NEWS
ರಿಪ್ಪನ್ ಪೇಟೆ(ಹೊಸನಗರ): ಗ್ರಾಮೀಣ ಭಾಗವೊಂದರ ಹುಡುಗಿ ರಿಪ್ಪನ್ ಪೇಟೆಯ ಬರುವೆ ಗ್ರಾಮದ ಪೂಜಿತಾ ಹಾಕಿ ಕ್ಷೇತ್ರದಲ್ಲಿ ಇದೀಗ ರಾಷ್ಟ್ರದ ಗಮನ ಸೆಳೆದಿದ್ದಾಳೆ.
ರಿಪ್ಪನ್ಪೇಟೆ ಬರುವೆ ಗ್ರಾಮದ ನಿವಾಸಿಗಳಾದ ನಾಗೇಶ್ ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತ ರಾಷ್ಟ್ರ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ. ಅಲ್ಲದೆ ಕರ್ನಾಟಕದ ಸ್ಟಾರ್ ಆಟಗಾರ್ತಿಯಾಗಿದ್ದಾಳೆ.
ಮಧ್ಯ ಪ್ರದೇಶದ ಭೂಫಾಲ್ ನಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಮಂಗಳವಾರ ಹರಿಯಾಣ ತಂಡವನ್ನು ಮಣಿಸಿ ಫೈನಲ್ ಹಂತಕ್ಕೆ ತಲುಪಿದೆ.ಈ ಪಂದ್ಯಾವಳಿಯಲ್ಲಿ ಪೂಜಿತಾ ಉತ್ತಮವಾಗಿ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಬುಧವಾರ ಒಡಿಸ್ಸಾ ತಂಡದ ವಿರುದ್ಧ ಫೈನಲ್ ಪಂದ್ಯಾವಳಿ ನಡೆಯಲಿದೆ.ರಿಪ್ಪನ್ ಪೇಟೆಯ ಬರುವೆ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಕಷ್ಟ ಸುಖ, ನೋವುಗಳನ್ನು ನೋಡಿ ಕೃಷಿ ಆಧರಿಸಿ ಜೀವನ ಸಾಗಿಸಿಕೊಂಡು ಬಂದಂತಹ ನಾಗೇಶ್ ಗೌಡ ಪತ್ನಿ ಪೂರ್ಣಿಮಾ ಈ ದಂಪತಿಗಳ ಮಗಳಾದ ಕುಮಾರಿ ಪೂಜಿತ ಮಂಗಳವಾರ ರಾಷ್ಟ್ರಮಟ್ಟದಲ್ಲಿ ರಿಪ್ಪನ್ ಪೇಟೆಯ ಕೀರ್ತಿಪತಾಕೆಯನ್ನು ಕ್ರೀಡಾಲೋಕದಲ್ಲಿ ಹಾರಿಸುತ್ತಿದ್ದಾಳೆ.
ಹಳ್ಳಿಯಿಂದ ದಿಲ್ಲಿವರೆಗೆ..!
ಕುಮಾರಿ ಪೂಜಿತಾ ತನ್ನ ಬಾಲ್ಯದ ಜೀವನವನ್ನು ರಿಪ್ಪನ್ ಪೇಟೆಯ ಸರಕಾರಿ ಬಾಲಕಿಯರ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿ ಮುಂದಿನ ವ್ಯಾಸಂಗಕ್ಕಾಗಿ ಶಿವಮೊಗ್ಗದ ಕ್ರೀಡಾ ಹಾಸ್ಟೆಲ್ ನಲ್ಲಿ 5 ನೇ ತರಗತಿ ಯಿಂದ ಏಳನೇ ತರಗತಿಯವರೆಗೆ ನಂತರ ಎಂಟರಿಂದ 10ನೇ ತರಗತಿ ಕ್ರೀಡಾ ಹಾಸ್ಟೆಲ್ ಮಡಿಕೇರಿಯಲ್ಲಿ ವ್ಯಾಸಂಗ ಮಾಡಿ ಪದವಿಯನ್ನು ಥೆರೆಶಿಯನ್ ಕಾಲೇಜ್ ಮೈಸೂರಿನಲ್ಲಿ ಮುಗಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಹಲವಾರು ಸಮಸ್ಯೆಗಳ ಮಧ್ಯೆ ಸಾವಿರಾರು ಸ್ಪರ್ಧಾಳುಗಳ ಮಧ್ಯೆ ಸ್ಪರ್ಧಿಸಿ ಗೆದ್ದು ಜಿಲ್ಲಾ ರಾಜ್ಯ,ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡ ಈ ಪ್ರತಿಭೆಗೆ ನಿಜವಾಗಲೂ ಅಭಿನಂದನೆಗಳು.
ನಮ್ಮೂರ್ ಎಕ್ಸ್ಪ್ರೆಸ್ ಕೂಡ ಶುಭಾಶಯ ಸಲ್ಲಿಸುತ್ತದೆ