- ಆಗುಂಬೆ ಬಸ್ ನಿಲ್ದಾಣದ ಬಳಿ ಭಾಷಣ ಮಾಡಿದ್ದರು
- ತೀರ್ಥಹಳ್ಳಿಯಲ್ಲಿ ಮಾಂಗಲ್ಯವನ್ನೇ ನೀಡಿದ ಮಹಾತಾಯಿ!
NAMMUR EXPRESS NEWS
ತೀರ್ಥಹಳ್ಳಿ 75ನೇ ಸ್ವಾತಂತ್ರ ಅಮೃತೋತ್ಸವ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿ ಆಗುಂಬೆ ಸರ್ಕಲ್ ಬಸ್ ಸ್ಟಾಪ್ ಪಕ್ಕದ ಪಾರ್ಕಿನ ಮುಂಭಾಗದಲ್ಲಿ ಗಾಂಧೀಜಿಯ ಕಲ್ಲಿನ ಸ್ತಂಭದಲ್ಲಿ ಗಾಂಧೀಜಿಯ ಮುಖ ಅನಾವರಣ ಮಾಡಲು ಸಿದ್ಧತೆ ನಡೆದಿದೆ.
ಗಾಂಧೀಜಿಯವರು ರಾಷ್ಟ್ರೀಯ ಚಳುವಳಿಯನ್ನು ಉದ್ದೀಪನ ಗೊಳಿಸುವ ಸಲುವಾಗಿ 17. 8.1927 ರಂದು ತೀರ್ಥಹಳ್ಳಿಗೆ ಆಗಮಿಸಿ ಶ್ರೀ ಲಿಂಗಪ್ಪನವರ ಡ್ರಾಮಾ ಥಿಯೇಟರಿನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದು ಗಾಂಧಿ ಹೋರಾಟಕ್ಕೆ ಸಂಗ್ರಹವಾದ ರೂಪಾಯಿ ರೂ.1506 ಅನ್ನು ತೀರ್ಥಹಳ್ಳಿ
ಮಹಾಜನತೆ ಗಾಂಧಿ ಚರಕ ನಿಧಿಗೆ ಅರ್ಪಿಸಿದ್ದರು ಎಂದು 1.9.1927ರ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಗಾಂಧೀಜಿ ತೀರ್ಥಹಳ್ಳಿಯ ಭೇಟಿ ವಿಶೇಷವಾಗಿ ಉಲ್ಲೇಖವಾಯಿತು, ಅಂದು ದೇಶದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಎಂದು ಇದರ ಮಾಹಿತಿಯನ್ನು ಡಿ ಎಸ್ ಸೋಮಶೇಖರ್ ನಿವೃತ್ತ ಪ್ರಾಂಶುಪಾಲರು ತೀರ್ಥಹಳ್ಳಿ ಉಲ್ಲೇಖಿಸಿದ್ದಾರೆ.
ಗಾಂಧೀಜಿಯ ಮುಖವಾಡವನ್ನು ಬಾಳೆಬೇಲಿನ ಖ್ಯಾತ ಕಲಾವಿದರಾದ ಬಿ.ಡಿ. ಜಗದೀಶ್ ಅವರ ಕಲಾಕುಸಿರಿಯಲ್ಲಿ ತಾಮೃ ಹಾಗೂ ಹಿತ್ತಾಳಿ ಲೋಹದಲ್ಲಿ ಮೂಡಿಬಂದಿದೆ. ಆ.15ರ ಸಂಜೆ 5:00 ಗಂಟೆಗೆ ಗಾಂಧೀಜಿಯ ಮುಖವಾಡ ಸ್ತಂಭವನ್ನು ಮಾನ್ಯ ಗೃಹ ಸಚಿವರಾದ ಅರದ ಜ್ಞಾನೇಂದ್ರ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈಸೂರಲ್ಲಿ ಹೋರಾಟದ ನೆನಪು!
- ಬ್ರಿಟಿಷರ ಆಳ್ವಿಕೆಯಿಂದ ‘ಸ್ವತಂತ್ರ ಎಂಬ ಫಲಕ ಹಾಕಿದ್ರು
- ದೇಶದಲ್ಲೇ ನಮ್ಮ ಜಿಲ್ಲೆಯ ಈಸೂರು ಹೆಮ್ಮೆ
ಮಹಾತ್ಮಾ ಗಾಂಧಿಯವರ ಕ್ವಿಟ್ ಇಂಡಿಯಾ ಚಳುವಳಿಯಿಂದ ಪ್ರೇರಿತರಾಗಿ 1942ರಲ್ಲಿ ಸ್ವತಂತ್ರ ಗ್ರಾಮವೆಂದು ಘೋಷಿಸಿದ ಮೊದಲ ಗ್ರಾಮವೇ ಈಸೂರು. ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸುವಂತೆ ಒತ್ತಾಯಿಸಿ ‘ತೆರಿಗೆ ಕಟ್ಟಬೇಡಿ’ ಎಂಬ ಘೋಷಣೆಗಳೊಂದಿಗೆ ಪ್ರತಿದಿನ ಗ್ರಾಮದಲ್ಲಿ ಜಾಗೃತಿ ಮೆರವಣಿಗೆ ನಡೆಸಲಾಯಿತು. ಸೆಪ್ಟೆಂಬರ್ 25, 1942 ರಂದು, ಇಬ್ಬರು ಗ್ರಾಮ ಅಧಿಕಾರಿಗಳು ತೆರಿಗೆ ವಸೂಲಿ ಮತ್ತು ಪಹಣಿ ತಯಾರಿಗಾಗಿ ಬಂದಾಗ, ಗ್ರಾಮದ ಯುವಕರು ಅವರ ನೋಂದಣಿ ಪುಸ್ತಕಗಳನ್ನು ವಶಪಡಿಸಿಕೊಂಡರು. ಮರುದಿನ ಗ್ರಾಮಸ್ಥರು ಗ್ರಾಮವನ್ನು ಬ್ರಿಟಿಷರ ಆಳ್ವಿಕೆಯಿಂದ ‘ಸ್ವತಂತ್ರ’ ಎಂದು ಘೋಷಿಸುವ ಫಲಕವನ್ನು ಹಾಕಿದರು. ಈ ಘಟನೆಯು ಬ್ರಿಟಿಷರು ಗ್ರಾಮವನ್ನು ವಶಪಡಿಸಿಕೊಳ್ಳಲು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲು ಕಾರಣವಾಯಿತು.ಇದೀಗ ಈಸೂರಲ್ಲಿ
ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಲೆನಾಡು ಕೊಡುಗೆ
ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಳವಳಿಗೆ ಇಡೀ ದೇಶವೇ ಸಂದಿಸಿತ್ತು. ಹಲವರಂತೂ ಕುಟುಂಬವನ್ನೇ ಬಿಟ್ಟು ಬಾಪೂಜಿಯನ್ನು ಹಿಂಬಾಲಿಸಿದ್ದರು. ತಮ್ಮಿಂದಾದ ಆರ್ಥಿಕ ಸಹಾಯವನ್ನೂ ಮಾಡಿದರು. ಅದರಲ್ಲಿ ಮಲೆನಾಡಿನ ಕೊಡುಗೆಯನ್ನೂ ಈ ವೇಳೆ ಸ್ಮರಿಸಲೇಬೇಕು.
ಮುಂಚೆಯಿಂದಲೂ ಮಲೆನಾಡು ಅತಿಥಿ ಸತ್ಕಾರಕ್ಕೆ ಹೆಸರುವಾಸಿ. ಗಾಂಧೀಜಿ ಅವರು ಶಿವಮೊಗ್ಗಕ್ಕೆ ಬಂದಾಗಲೂ ಎಲ್ಲಿಲ್ಲದ ಪ್ರೀತಿ ವ್ಯಕ್ತವಾಗಿತ್ತು. 1927ರ ಆಗಸ್ಟ್ 17ರಂದು ಗಾಂಧಿಜಿ ಅವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ, ಭದ್ರಾವತಿ, ಶಿವಮೊಗ್ಗ ಮತ್ತು ತೀರ್ಥಹಳ್ಳಿಗೆ ಭೇಟಿ ನೀಡಿದ್ದರು. ಅವರೊಂದಿಗೆ ಕಸ್ತೂರಬಾ, ಸರ್ದಾರ್ ವಲ್ಲಭಭಾಯ್ ಪಟೇಲ್, ಮಹಾದೇವ್ ದೇಸಾಯಿ, ರಾಜಾಜಿ ಗಂಗಾಧರ್ರಾವ್ ದೇಶಪಾಂಡೆ, ರಾಜಗೋಪಾಲಾಚಾರಿ ಅವರು ಬಂದಿದ್ದರು.
ಮಾಂಗಲ್ಯವನ್ನೇ ನೀಡಿದ ಮಹಾತಾಯಿ!
ತೀರ್ಥಹಳ್ಳಿಯ ಬಸ್ ನಿಲ್ದಾಣ ಹಿಂಭಾಗದ ಸಿಲ್ವರ್ ಜ್ಯುಬಲಿ ರೀಡಿಂಗ್ ರೂಂನಲ್ಲಿ ಗಾಂಧೀಜಿ ವಿಶ್ರಾಂತಿ ಪಡೆದಿದ್ದರು. ಭಾಷಣದ ಬಳಿಕ ಗಾಂಧೀಜಿ ಅವರು ಜ್ವರಾರಿ ಕಂಪನಿಯ ಮಂಜುನಾಥಯ್ಯ ಅವರ ಗೃಹಪ್ರವೇಶ ನೆರವೇರಿಸಿದ್ದರು. ಆ ವೇಳೆ, ಮಂಜುನಾಥಯ್ಯ ಅವರ ಅತ್ತೆ ಗಂಗಮ್ಮ
ಬಂಗಾರದ ಚೂರೊಂದನ್ನು, ಮಂಜುನಾಥ್ ಅವರ ಅಕ್ಕ ಲಕ್ಷ್ಮಮ್ಮ ತನ್ನ ಮಾಂಗಲ್ಯ ಸರವನ್ನೇ ಗಾಂಧೀಜಿಗೆ ಅರ್ಪಿಸಿದ್ದರು.
ಸ್ಥಳೀಯ ಹೋರಾಟಗಾರರು ತಾವು ಸಂಗ್ರಹಿಸಿದ 1506 ರೂ.ಗಳನ್ನು ಗಾಂಧೀಜಿಗೆ ನೀಡಿದ್ದರು. ಗಾಂಧೀಜಿ ಅವರ ಭೇಟಿಯಿಂದ ಗುರುಮೂರ್ತಿ, ಮಂಜುನಾಥಯ್ಯ, ವಿಶ್ವನಾಥರಾವ್, ಬಿ.ಆರ್.ಶ್ಯಾಮ್ ಐತಾಳ ಬೆಳಕಿಗೆ ಬಂದರು.ಶಿವಮೊಗ್ಗದ ವೆಂಕಟಸುಬ್ಬಾಶಾಸ್ತ್ರಿ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಗಾಂಧೀಜಿ ಅವರು ಅವರ ಮನೆಗೆ ತೆರಳಿ ಕುಶಲೋಪರಿ ವಿಚಾರಿಸಿದರು. ಆ ವೇಳೆ, ವೆಂಕಟಸುಬ್ಬಾಶಾಸ್ತ್ರಿ ಅವರ ತಾಯಿ ಚಿನ್ನದ ಸರವನ್ನು ನೀಡಿದ್ದರು.