ಮಲೆನಾಡ ಆಟ ಆಡಿ ಖುಷಿ ಪಟ್ಟ ರಾಜಧಾನಿ ಮಲೆನಾಡಿಗರು!
– ಮಲೆನಾಡು ಮಿತ್ರ ವೃಂದರಿಂದ ಮಲೆನಾಡಿಗರ ಕ್ರೀಡಾಕೂಟ ಯಶಸ್ವಿ
– 2000ಕ್ಕೂ ಹೆಚ್ಚು ಜನರು ಭಾಗಿ: ಮಲೆನಾಡ ಜನರ ಸಮ್ಮಿಲನ
– ಗಮನ ಸೆಳೆದ ಕಡುಬು ತಿನ್ನುವ ಸ್ಪರ್ಧೆ, ಗೋಣಿ ಚೀಲದ ಓಟ!
NAMMUR EXPRESS NEWS
ಬೆಂಗಳೂರು: ಮಲೆನಾಡ ಆಟ ಆಡಿ ಖುಷಿ ಪಟ್ಟ ರಾಜಧಾನಿ ಮಲೆನಾಡಿಗರು. ಬೆಂಗಳೂರಿನ ಮಲೆನಾಡು ಮಿತ್ರ ವೃಂದರಿಂದ ಮಲೆನಾಡಿಗರ ಕ್ರೀಡಾಕೂಟ ಯಶಸ್ವಿಯಾಗಿ ಭಾನುವಾರ ನಡೆಯಿತು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಮೂಲದ ಸುಮಾರು 2000ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಮಲೆನಾಡ ಜನರ ಸಮ್ಮಿಲನಕ್ಕೆ ಈ ಕಾರ್ಯಕ್ರಮ ವೇದಿಕೆಯಾಯಿತು. ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಸಂಭ್ರಮದಿಂದ ಪಾಲ್ಗೊಂಡರು. ಕಡುಬು ತಿನ್ನುವ ಸ್ಪರ್ಧೆ, ಗೋಣಿ ಚೀಲದ ಓಟ ಸೇರಿ ಅನೇಕ ಕ್ರೀಡೆಗಳು ಗಮನ ಸೆಳೆದವು. ರಾಜಧಾನಿಯ ಜಾಲಹಳ್ಳಿ ಹೆಚ್ ಎಮ್ ಟಿ ಮೈದಾನದಲ್ಲಿ ಸಾವಿರಾರು ಮಲೆನಾಡಿಗರ ಸಮಾಗಮಕ್ಕೆ ಈ ಕ್ರೀಡಾಕೂಟ ವೇದಿಕೆಯಾಯಿತು. ಮಲೆನಾಡು ಮಿತ್ರವೃಂದದ ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು, ಉಪಾಧ್ಯಕ್ಷರಾದ ಹರೀಶ್ ಹಿಂಬ್ರವಳ್ಳಿ, ಕಾರ್ಯದರ್ಶಿ ಸಂದೇಶ್ ಹಂದಿಗೋಡು,ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಹಿಸಣ, ಖಜಾಂಚಿ ಸುಧಾಕರ್ ಯಡದಳ್ಳಿ, ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ ಸಿಸ್ಲೆ, ದಿನೇಶ್ ಹೊಸನಗರ, ಸಂಸ್ಥಾಪಕ ಅಧ್ಯಕ್ಷರಾದ ಸುಬ್ಬಯ್ಯ ನಂಟೂರು, ಮಾಜಿ ಅಧ್ಯಕ್ಷರಾದ ಕರುಣಾಕರ್ ಕಿರುಕೊಡಿಗೆ, ಅನಿಲ್ ಹೊಸಕೊಪ್ಪ, ವಾಸಪ್ಪ ಪಡುಬೈಲ್, ನಿರ್ದೇಶಕರಾದ ವನಮಾಲಯ್ಯ ಇಳಿಮನೆ, ನಾಗೇಶ್ ಕೇಳೂರು, ಜಗದೀಶ್ ಸಿಡ್ಲುಮನೆ, ಸಿದ್ದಪ್ಪ ಹುಕ್ಕಳಿ, , ಮಂಜುನಾಥ್. ತಲುವಾನೆ, ಕೆ.ಸಿ. , ನವೀನ್ ಕಾನುವಳ್ಳಿ,, ಸ್ವೀಕೃತ್ ಹೆಗ್ಗಡೆ ಯಡದಳ್ಳಿ, ಗಿರೀಶ್, ಸುಕೇಶ್ ದಾಸನಕೊಡಿಗೆ, ಷಣ್ಮುಖ, , ಸತ್ಯಪಾಲ್ ಹೊಸೂರು, ನಿದರ್ಶನ್.ಜಿ.ಎಸ್ ಸೇರಿದಂತೆ ಹಲವರ ಶ್ರಮದಿಂದ ಒಂದೊಳ್ಳೆ ಕಾರ್ಯಕ್ರಮ ನಡೆಯಿತು. ವಾಲಿಬಾಲ್, ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟ ಈ ಸ್ಪರ್ಧೆಗಳು ರೋಮಾಂಚನ ಮೂಡಿಸಿದವು. ಮಲೆನಾಡಿನ ಉದ್ಯಮಿಗಳು, ರಾಜಕೀಯ ಮುಖಂಡರು, ಸಂಘಟಕರು ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ನೌಕರರು ಹಾಗೂ ಸಿಬ್ಬಂದಿಗಳು ಮತ್ತು ಜನತೆ ಸಂಭ್ರಮದಿಂದ ಈ ಹಬ್ಬದಲ್ಲಿ ಭಾಗವಹಿಸಿದರು. ಉತ್ತಮ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ರಾತ್ರಿಯವರೆಗೂ ಕೂಡ ಕಾರ್ಯಕ್ರಮ ಮುಂದುವರೆದಿತ್ತು, ಅತ್ಯುತ್ತಮ ಮಲೆನಾಡಿನ ವೇದಿಕೆಯಾಗಿ ಮಾರ್ಪಟ್ಟಿತು. ಮಲೆನಾಡು ಮಿತ್ರ ಇವರಿಂದ ಕ್ಯಾಲೆಂಡರ್ ಬಿಡುಗಡೆಗೊಂಡಿದ್ದು ಇದೇ ವೇಳೆ ಕ್ಯಾಲೆಂಡರ್ ಬಿಡುಗಡೆ ಮಾಡಲು ಕಾರಣಾಕರ್ತರಾದ ಎಲ್ಲ ದಾನಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಸಿನಿಮಾ ತಾರೆಯರು, ಧಾರವಾಹಿ ನಟ ನಟಿಯರು, ಯುವ ಮುಖಂಡರು ಕೂಡ ಹಾಜರಿದ್ದರು.
ಗಮನ ಸೆಳೆದ ಕಡುಬು ತಿನ್ನುವ ಸ್ಪರ್ಧೆ!
ಮಲೆನಾಡು ಮಿತ್ರರಿಂದ ವಿಶೇಷ ಆಕರ್ಷಣೆಯಾಗಿ ಪುರುಷ ಮತ್ತು ಮಹಿಳೆಯರಿಗಾಗಿ ಕಡುಬು ತಿನ್ನುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಎಂಟೂವರೆಯಷ್ಟು ಕಡುಬು ತಿಂದ ಮಹಿಳೆ ಮಹಿಳೆಯರ ವಿಭಾಗದಲ್ಲಿ, ಪುರುಷರ ವಿಭಾಗದಲ್ಲಿ ಕಡಬು ತಿಂದು ಬಹುಮಾನವನ್ನ ಪಡೆದುಕೊಂಡು ಈ ಕ್ರೀಡೆ ಎಲ್ಲರ ಗಮನ ಸೆಳೆಯಿತು. ಕನ್ನಡ ಹೋರಾಟಗಾರ ನಾಗರಾಜ್ ಅಗಳಬೈಲು, ನಿವೃತ್ತ ಬಿಬಿಎಂಪಿ ಮುಖ್ಯ ಅಭಿಯಂತರ ನಾಗರಾಜ್ ಕೊಳಿಗೆ, ಸಮಾಜ ಸೇವಕ ಮಣಿ ಹೆಗಡೆ, ಯುವ ನಾಯಕರಾದ ಸುಧೀರ್ ಕುಮಾರ್ ಮುರೊಳ್ಳಿ, ಪ್ರಶಾಂತ್ ಸಾಗರ, ಉದ್ಯಮಿ ಅಚ್ಚುತ್ ಗೌಡ, ನಟ ಗೌರಿಶಂಕರ್ ಸೇರಿದಂತೆ ಅನೇಕರು ಭೇಟಿ ನೀಡಿದ್ದರು.