ದಿನೇ ದಿನೇ ಒತ್ತುವರಿ ತೆರವು ಕಿರಿಕ್!
– ಮೂರು ಎಕರೆ ಒಳಗಿನ ಒತ್ತುವರಿ ತೆರವಿಲ್ಲ ನಿಜಾನಾ?
– ಮಲೆನಾಡಲ್ಲಿ ಜಮೀನು ತೆರವಿನ ವಿರುದ್ಧ ವಿಶೇಷ ಗ್ರಾಮ ಸಭೆ
NAMMUR EXPRESS NEWS
ಚಿಕ್ಕಮಗಳೂರು: ಒತ್ತುವರಿ ತೆರವು ವಿರುದ್ಧ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಜನಾಂದೋಲನಕ್ಕೆ ವೇದಿಕೆ ಸಿದ್ಧವಾಗಿದೆ.
ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಸಲುವಾಗಿ ಜನವಿರೋಧಿ ಅರಣ್ಯ ಕಾಯ್ದೆಗಳನ್ನು ಜಾರಿ ಮಾಡಲಾಗುತ್ತಿದೆ. ಸೆಕ್ಷನ್ 4 ಮುಂದೆ ಮೀಸಲು ಅರಣ್ಯವಾಗಲಿದ್ದು, ಮೀಸಲು ಅರಣ್ಯವಾದರೆ ಆ ಜಾಗಕ್ಕೆ ಕಾಲಿಡದಂತೆ ಅರಣ್ಯ ಇಲಾಖೆ ನಿರ್ಬಂಧ ಮಾಡಲಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಜಯಪುರ ಮೇಗುಂದಾ ಹೋಬಳಿ ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
ಕಸ್ತೂರಿ ರಂಗನ್ ವರದಿ, ಸೆಕ್ಷನ್ 4, ಸೆಕ್ಷನ್ 17 ಅರಣ್ಯ ಕಾಯ್ದೆಗಳು ಜಮೀನು ಉಳ್ಳವರ ಸಮಸ್ಯೆಯಲ್ಲ, ಪ್ರತಿಯೊಬ್ಬ ಜನಸಾಮಾನ್ಯನ ಸಮಸ್ಯೆಯಾಗಿದೆ. ಇವುಗಳು ಜಾರಿಯಾದರೆ ಜನರು ಸ್ವತಂತ್ರವಾಗಿ ಈ ನೆಲದಲ್ಲಿ ವಾಸಿಸುವ ಹಕ್ಕು ಕಳೆದುಕೊಳ್ಳುವ ಜೊತೆಗೆ ವಸತಿ ರಹಿತ ಬಡವರು ನಿವೇಶನ ಪಡೆಯಲಾಗದೆ. ತಮ್ಮ ಜೀವಿತಾವಧಿ ಪೂರ್ತಿ ಬಾಡಿಗೆಯ ಮನೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆಗೆ ಬೀಳಬೇಕಾಗುತ್ತದೆ.
ರಸಗೊಬ್ಬರ, ಕೀಟ ನಾಶಕ ಬಳಸದೇ ಕೃಷಿ ಮಾಡಬೇಕಾಗುತ್ತದೆ. ಕುಡಿಯುವ ನೀರು, ವಿದ್ಯುತ್ ಲೈನ್, ಹೊಲ ಗದ್ದೆಗಳ ರಸ್ತೆಗಳು ಎಲ್ಲದಕ್ಕೂ ಅರಣ್ಯ ಇಲಾಖೆ ಅನುಮತಿ ಬೇಕು. ಹೊಸ ಯೋಜನೆಗಳಿಗೆ ಅನುಮತಿ ಸಿಗುವುದಿಲ್ಲ. ವಸತಿ ರಹಿತರು, ಮನೆ ನಿರ್ಮಿಸಲು, ಕಾಡಿನಲ್ಲಿ ಶವ ಸುಡಲೂ ಸಹ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಸಡ್ಡು ಹೊಡೆದಿದ್ದಾರೆ.
ಮೂರು ಎಕರೆ ಒಳಗಿನ ಒತ್ತುವರಿ ತೆರವಿಲ್ಲ!: ಸರ್ಕಾರ
2015ರ ನಂತರದ ಒತ್ತುವರಿ ತೆರವಿಗೆ ಸೂಚಿಸಲಾಗಿದೆ. 2015ರ ಸರ್ಕಾರದ ಆದೇಶ, ನಡಾವಳಿಯಂತೆ ಮೂರು ಎಕರೆಗಿಂತ ಮೇಲ್ಪಟ್ಟ ದೊಡ್ಡ ಒತ್ತುವರಿ ತೆರವು ಮಾಡಲಾಗುತ್ತಿದ್ದು,ಬಡ ರೈತರ ಒತ್ತುವರಿ (ಪಟ್ಟಾಭೂಮಿ,ಒತ್ತುವರಿ ಸೇರಿ ಮೂರು ಎಕರೆ)ತೆರವು ಮಾಡಿಸುವುದಿಲ್ಲ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.