ಉದುರುತ್ತಿರುವ ಅಡಿಕೆ: ಮಲೆನಾಡಿನ ರೈತರ ಗೋಳು!
– ಹವಾಮಾನದ ವೈಪರಿತ್ಯದಿಂದ ಅಡಿಕೆ ಪಸಲು ಭಾರಿ ಕುಂಠಿತ
– ಅಡಿಕೆ ಮರದ ಬುಡದಲ್ಲಿ ಅಡಿಕೆ: ಹೀಗಾದರೆ ರೈತರ ಕಥೆ ಏನು?
NAMMUR EXPRESS NEWS
ಶಿವಮೊಗ್ಗ/ ಚಿಕ್ಕಮಗಳೂರು : ಮಲೆನಾಡಿನಲ್ಲಿ ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬದುಕು ಇದೀಗ ಆತಂಕಕ್ಕೆ ತಲುಪಿದೆ. ಒಂದು ಕಡೆ ಎಲೆ ಚುಕ್ಕಿ ರೋಗ, ಇತರೆ ಕೊಳೆ ರೋಗದಿಂದ ಕಂಗೆಟ್ಟಿರುವ ರೈತರು, ಇದೀಗ ತಮ್ಮ ಬದುಕಿನ ಪ್ರತಿರೂಪವಾಗಿರುವ ಅಡಿಕೆ ಬೆಳೆ, ಅಡಿಕೆ ಕಾಯಿಗಳು ಮರದಿಂದ ಉದುರುತ್ತಿದೆ. ಕೆ ಜಿ ಗಟ್ಟಲೆ ಕಾಯಿಗಳು ಮರದ ಬುಡದಲ್ಲಿ ಕೊಳೆತು ಬೀಳುತ್ತಿದೆ. ಇದರಿಂದ ರೈತರು ಏನು ಮಾಡಲಾಗದಂತಹ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ಒಂದು ತಿಂಗಳಿಂದ ಮಳೆ ಮತ್ತಷ್ಟು ಹೆಚ್ಚಾಗಿರುವುದು ಅಡಿಕೆ ತೋಟದಲ್ಲಿ ಶೀತದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಅಡಿಕೆ ಫಸಲು ಬರುವ ಹಂತದಲ್ಲಿದ್ದು ಅಂತಹ ಅಡಿಕೆಗಳು ಈಗ ಉದುರುತ್ತಿವೆ. ಅಡಿಕೆಗಳು ಅತಿ ಬೇಗ ಬಂದಂತೆ ಬಾಸವಾಗುತ್ತಿದೆ. ಇನ್ನೂ ಅಡಿಕೆ ಹಣ್ಣಾದಂತೆ ಕಂಡರೂ ಕೂಡ ಅವು ಚಿಗುರಿನ ಸ್ಥಿತಿಯಲ್ಲಿದೆ. ಇನ್ನೂ ಕೆಲವೆಡೆ ಅಡಿಕೆ ಕಾಯಿಗಳು ಅಡಿಕೆ ಮರದ ಬುಡದಲ್ಲಿ ಉದರುತ್ತಿರುವುದು ರೈತರನ್ನು ಆತಂಕಕ್ಕೆ ಈಡು ಮಾಡಿದೆ. ಈ ಬಾರಿ ಸುಮಾರು 30 % ರಷ್ಟು ಪಸಲು ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಾದ ತೀರ್ಥಹಳ್ಳಿ, ಸಾಗರ, ಕೊಪ್ಪ, ಮೂಡಿಗೆರೆ, ಶೃಂಗೇರಿ, ಹೊಸನಗರ. ಈ ಭಾಗದಲ್ಲಿ ಕಂಡುಬರುತ್ತಿದೆ.
ಒಂದು ಕಡೆ ರೋಗ ಕಾಟ: ಇನ್ನೊಂದೆಡೆ ಮಳೆ ಆಟ!
ಮಲೆನಾಡಿನ ಜೀವನಾಡಿಯಾಗಿರುವಂತಹ ಅಡಿಕೆ ಒಂದು ಕಡೆ ಅಡಿಕೆ ರೋಗದ ಆತಂಕ ಕಂಡುಬಂದರೆ ಮತ್ತೊಂದೆಡೆ ಮಳೆ ಸಂಪೂರ್ಣವಾಗಿ ರೈತರನ್ನು ಆತಂಕಕ್ಕೆ ಈಡು ಮಾಡಿದೆ. ಇನ್ನೊಂದೆಡೆ ಅಡಿಕೆಗೆ ಕುಸಿಯುತ್ತಿರುವ ಬೆಲೆಯಿಂದ ರೈತರನ್ನು ಕಂಗಾಲಾಗಿ ಮಾಡಿದೆ. ಈಗಾಗಲೇ ಅಡಿಕೆ ಕಳೆದ ಒಂದು ದಶಕಗಳಿಂದ ಮಲೆನಾಡು ಭಾಗದ ರೈತರ ಬದುಕನ್ನ ಹಸನಗೊಳಿಸಿತ್ತು. ಜೊತೆಗೆ ರೋಗಗಳು ಕಡಿಮೆ ಇದ್ದರೂ ಮಳೆ ಹೆಚ್ಚಿದ ಕಾರಣ ಪಸಲು ಕೈಗೆ ಸಿಗುತ್ತಿತ್ತು. ಈ ವರ್ಷ ಅತಿಯಾಗಿ ಸುರಿಯುತ್ತಿರುವ ಮಳೆ ರೈತರಿಗೆ ಕಂಗಾಲಾಗಿ ಮಾಡಿದೆ. ಇನ್ನಷ್ಟು ದಿನ ಮಳೆ ಬಂದಲ್ಲಿ ರೈತರಿಗೆ ಕೃಷಿ ಚಟುವಟಿಕೆ ಮಾಡುವುದು ಕೂಡ ಕಷ್ಟವಾಗಲಿದೆ. ಹೀಗಾಗಿ ಮುಂದಿನ ದಿನದಲ್ಲಿ ಆದಷ್ಟು ರೈತರು ವೈಜ್ಞಾನಿಕವಾಗಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗಿ ಎಂದು ಕೃಷಿ ತಜ್ಞರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮಳೆ ಹಾಗೂ ಕೊಳೆ ರೈತರ ಬದುಕನ್ನು ಕಷ್ಟಕ್ಕೆ ಈಡು ಮಾಡುತ್ತಿದೆ.