- ಪ್ರತಿನಿತ್ಯ ಒಪಿಡಿಗೆ ಬರ್ತಿದ್ದಾರೆ ಸಾವಿರಾರು ರೋಗಿಗಳು
- ಸರ್ಕಾರಿ ಆಸ್ಪತ್ರೆಗಳಲ್ಲಿ ಬೇಕು ಇನ್ನಷ್ಟು ಸೌಲಭ್ಯ
NAMMUR EXPRESS NEWS
ಮಲೆನಾಡು: ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ, ಮಂಜಿನ ಜೊತೆ ಬೀಳ್ತಿರೋ ಚಳಿ ಎಲ್ಲವೂ ಹವಾಮಾನವನ್ನೇ ಕೆಡಿಸಿದ್ದು ಜನರು ಚಳಿ ಜ್ವರ ನೆಗಡಿ ಕೆಮ್ಮಿನಂತಹ ಸಾಂಕ್ರಾಮಿಕ ಕಾಯಿಲೆಯಿಂದ ಬಳಲಾರಂಭಿಸಿದ್ದಾರೆ.
ಮಲೆನಾಡಿನ ಬಹುತೇಕ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ವರ, ಥಂಡಿ ಕೆಮ್ಮಿನ ರೋಗಿಗಳ ಸಂಖ್ಯೆ ಏರಿಕೆಯಾಗ ತೊಡಗಿದ್ದು, ಕಾಳಜಿ ವಹಿಸುವಂತೆ ವೈದ್ಯರುಗಳು ಮನವಿ ಮಾಡಿದ್ದಾರೆ. ಇನ್ನು ಆಸ್ಪತ್ರೆಗಳಲ್ಲಿ ಮೂಲ ಭೂತ ಸೌಕರ್ಯ ಇನ್ನು ಹೆಚ್ಚಿಸಬೇಕಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪುಟ್ಟ ಪುಟ್ಟ ಕ್ಲಿನಿಕ್ ಗಳಿಂದ ಆರಂಭಿಸಿ ಜಿಲ್ಲಾ, ತಾಲೂಕು ಆಸ್ಪತ್ರೆಗಳು ಪ್ರತಿನಿತ್ಯ ನೂರಾರು ರೋಗಿಗಳು ಜ್ವರದಿಂದ ಅಡ್ಮಿಟ್ ಆಗ್ತಿದ್ದಾರೆ. ಔಟ್ ಪೇಶೆಂಟ್ ಗಳಾಗಿ ಚಿಕಿತ್ಸೆ ಪಡೆಯೋರ ಸಂಖ್ಯೆ ಹೆಚ್ಚಾಗಿದೆ.
ಮಕ್ಕಳಲ್ಲಿ ಜ್ವರದ ಪ್ರಮಾಣ ಹೆಚ್ಚುತ್ತಲೇ ಇದೆ. ನಗರದಲ್ಲಿ ಹಿಂದಿನ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ವೈರಲ್ ಫಿವರ್, ಟೈಫಾಯಿಡ್ ಸೇರಿದಂತೆ ವಿವಿಧ ಬಗೆಯ ಜ್ವರಗಳು ಜನರನ್ನು ಹೈರಾಣಾಗಿಸಿದೆ.
ಮಣಿಪಾಲ್ ಆಸ್ಪತ್ರೆಯೊಂದಕ್ಕೆ ಪ್ರತಿನಿತ್ಯ 2 ಸಾವಿರಕ್ಕೂ ಅಧಿಕ ರೋಗಿಗಳು ದಾಖಲಾಗುತ್ತಿದ್ದಾರೆ. ಇನ್ನೂ ಮಕ್ಕಳಲ್ಲೂ ಗಂಟಲು ಊತ, ಜ್ವರ, ಡಿಸೆಂಟ್ರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ
ಮಾಯವಾದರ ಸರ್ಕಾರದ ಅರೋಗ್ಯ ಜಾಗೃತಿ!
ಮಳೆಗಾಲದಲ್ಲಿ ವಿಪರೀತ ಜ್ವರ, ಡೆಂಗ್ಯುವಿನಂಥಹ ಖಾಯಿಲೆ ಬರುತ್ತಿದೆ. ಜೊತೆಗೆ ಸಾಮಾನ್ಯ ಕೆಮ್ಮು ಜ್ವರದಂಥಹ ಖಾಯಿಲೆ ಕೂಡಾ ಹೆಚ್ಚಾಗ್ತಿದೆ.ಹೀಗಾಗಿ ಜನರು ಸ್ವಚ್ಛತೆಯನ್ನು ಕಾಪಾಡಬೇಕು.ಸೊಳ್ಳೆಗಳಿಂದ ದೂರ ಉಳಿಯಲು ಕೈಕಾಲು ಮುಚ್ಚುವಂತೆ ಬಟ್ಟೆ ಧರಿಸಬೇಕು ಕಾಲುಗಳಿಗೆ ಕೋಲ್ಡ್ ಆಗದ ರೀತಿಯಲ್ಲಿ ಸಾಕ್ಸ್ ಧರಿಸಬೇಕು ಒಂದು ವೇಳೆ ಜ್ವರದಂಥಹ ಗುಣಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ತಜ್ಞ ವೈದ್ಯರು ನೀಡಿದ್ದಾರೆ. ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ