- ಜೋಗ ಅಭಿವೃದ್ಧಿಗೆ 120 ಕೋಟಿ ಹಣ
- ಸಾಗರ ಭೇಟಿ ವೇಳೆ ಸಿಎಂ ಘೋಷಣೆ
ಸಾಗರ: ವಿಶ್ವವಿಖ್ಯಾತ ಜೋಗ ಇನ್ಮುಂದೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. 120 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಮಾಡಿ ದೇಶದ ಅತ್ಯುತ್ತಮ ಪ್ರವಾಸಿತಾಣವನ್ನಾಗಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಾಗರದ ನಗರಸಭೆ ಪೌರ ಸನ್ಮಾನ ಸ್ವೀಕರಿಸಿ ಈ ಘೋಷಣೆ ಮಾಡಿದ್ದಾರೆ. ಸಮಗ್ರ ಸಾಗರ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ತಕ್ಷಣವೇ ಸಾಗರದ ರಸ್ತೆ ಅಭಿವೃದ್ಧಿಗೆ 30 ಕೋಟಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಇತ್ತೀಚೆಗೆ ತಾನೇ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಈಗಾಗಲೇ ಕಾಮಗಾರಿ ಶುರುವಾಗಿದೆ.