Categories
ಮಲ್ನಾಡ್

ಜೋಗ ಆಗಲಿದೆ ಜಗಮಗ..!

  • ಜೋಗ ಅಭಿವೃದ್ಧಿಗೆ 120 ಕೋಟಿ ಹಣ
  • ಸಾಗರ ಭೇಟಿ ವೇಳೆ ಸಿಎಂ ಘೋಷಣೆ

ಸಾಗರ: ವಿಶ್ವವಿಖ್ಯಾತ ಜೋಗ ಇನ್ಮುಂದೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. 120 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ‌ ಮಾಡಿ ದೇಶದ ಅತ್ಯುತ್ತಮ ಪ್ರವಾಸಿತಾಣವನ್ನಾಗಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಾಗರದ ನಗರಸಭೆ ಪೌರ ಸನ್ಮಾನ ಸ್ವೀಕರಿಸಿ ಈ ಘೋಷಣೆ ಮಾಡಿದ್ದಾರೆ. ಸಮಗ್ರ ಸಾಗರ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ತಕ್ಷಣವೇ ಸಾಗರದ ರಸ್ತೆ ಅಭಿವೃದ್ಧಿಗೆ 30 ಕೋಟಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಇತ್ತೀಚೆಗೆ ತಾನೇ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಈಗಾಗಲೇ ಕಾಮಗಾರಿ ಶುರುವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.