- ಜನ, ಸಾಮಾಜಿಕ ಸೇವೆಯಲ್ಲಿ ಮುಂಚೂಣಿ
- ಕುರುಬ ಸಮಾಜದ ನಾಯಕರಿಂದ ಹೆಚ್ಚಿದ ಒತ್ತಡ
- ಶಿವಮೊಗ್ಗದಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕೆ?
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಪ್ರಭಾವಿ ನಾಯಕ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಈಶ್ವರಪ್ಪ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಕೆಂಬ ಒತ್ತಡ ಇದೀಗ ಹೆಚ್ಚಾಗಿದೆ.
ಈಶ್ವರಪ್ಪ ಅವರ ಜತೆ ಜತೆಗೆ ಕಾಂತೇಶ್ ಅವರು ಕ್ಷೇತ್ರದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಸದಾ ಚಟುವಟಿಕೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರರಷ್ಟೇ ಶಿವಮೊಗ್ಗದಾದ್ಯಂತ ಹೆಸರು ಮಾಡಿದ್ದಾರೆ. ಎಲ್ಲಾ ಅರ್ಹತೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿ ಪಕ್ಷ ಬರುವ ಪರಿಷತ್ ಚುನಾವಣೆಯಲ್ಲಿ ಕಾಂತೇಶ್ ಅವರನ್ನು ಆಯ್ಕೆ ಮಾಡಿ ಕುರುಬ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹ ವ್ಯಕ್ತವಾಗಿದೆ.
ಕಾಂತೇಶ್ ಅವರಿಗೆ ಸ್ಥಾನ ಮಾನ ನೀಡಲು ಒತ್ತಡ?
ಈಶ್ವರಪ್ಪ ಬಳಿಕ ಶಿವಮೊಗ್ಗದಲ್ಲಿ ಕಾಂತೇಶ್ ಅವರೇ ಉತ್ತರಾಧಿಕಾರಿ ಎನ್ನಲಾಗಿತ್ತು. ಜೊತೆಗೆ ಪಕ್ಷ, ಕಾರ್ಯಕರ್ತರು,. ನಾಯಕರ ಜತೆ ಕಾಂತೇಶ್ ಗುರುತಿಸಿಕೊಂಡಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಪಕ್ಷದ ವಲಯದಲ್ಲಿ ಹಲವು ಜವಾಬ್ದಾರಿ ಹೊತ್ತಿದ್ದರು. ಇದೀಗ ಮಗನಿಗೆ ಸ್ಥಾನ ಮಾನ ನೀಡಬೇಕೆಂದು ಈಶ್ವರಪ್ಪ ಕೂಡ ಪಟ್ಟು ಹಿಡಿದಿದ್ದಾರೆ ಎಂದೂ ತಿಳಿದು ಬಂದಿದೆ.
ಜೊತೆಗೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಬೇಕೆಂದು ಅಭಿಮಾನಿಗಳು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.