ಮಲ್ನಾಡ್ ಟಾಪ್ ನ್ಯೂಸ್
ಕಲಾವಿದ ರಮೇಶ್ ಬೇಗಾರ್ಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
– ಸಿದ್ದರಾಮಯ್ಯರವರಿಂದ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
– ನರೇಂದ್ರ ಮೋದಿ ಸರ್ಕಾರದಿಂದ ತೀರ್ಥಹಳ್ಳಿ ಕ್ಷೇತ್ರಕ್ಕೆ 710 ಮನೆ
– – ಅಂಗನವಾಡಿ ಹುದ್ದೆಗಳಿಗೆ ಭರ್ತಿ: ಮೋಸ ಹೋಗದಿರಿ ಹುಷಾರ್
NAMMUR EXPRESS NEWS
ಬೆಂಗಳೂರು: ಮಲೆನಾಡಿನ ಹೆಮ್ಮೆಯ ಕಲಾವಿದ ರಮೇಶ್ ಬೇಗಾರ್ಗೆ ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ,ಮಾಜಿ ಸಚಿವೆ ಉಮಾಶ್ರೀ,ಅಕಾಡೆಮಿ ಅಧ್ಯಕ್ಷರಾದ ಕೆ.ವಿ ನಾಗರಾಜ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ಕಲಾವಿದ ರಮೇಶ್ ಬೇಗಾರ್ ಇದೊಂದು ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ದಿನ ಇದಕ್ಕೆ ಕಾರಣರಾದ ನನ್ನ ತಂಡ,ಕಲಾವಿದ ಸ್ನೇಹಿತರು ಹಾಗೂ ಪ್ರೋತ್ಸಾಹಿಸಿದ ಕಲಾಭಿಮಾನಿಗಳೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದಿಂದ ತೀರ್ಥಹಳ್ಳಿ ಕ್ಷೇತ್ರಕ್ಕೆ 710 ಮನೆ
ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ PMAYG ಯೋಜನೆಯ ಡಿಯಲ್ಲಿ (ಪ್ರದಾನ ಮಂತ್ರಿ ಅವಾಸ್ ವಸತಿ ಯೋಜನೆ ಗ್ರಾಮೀಣ ) 2024-2025 ನೆ ಸಾಲಿನಲ್ಲಿ ಸಾಮಾನ್ಯ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ 247 ಎಸ್ ಸಿ ಮತ್ತು ಎಸ್ ಟಿ ವರ್ಗ ಕ್ಕೆ 463 ಮನೆಗಳು ಕೇಂದ್ರ ಸರ್ಕಾರದಿಂದ ಮಂಜೂರು ಆಗಿರುತ್ತವೆ.. ಸಾಮಾನ್ಯ ವರ್ಗಕ್ಕೆ 1.20.000 ಎಸ್ ಸಿ &ಎಸ್ ಟಿ ವರ್ಗಕ್ಕೆ 1.75.000 ಸಹಾಯ ಧನ ದೊರೆಯುತ್ತದೆ.. ಈ ಯೋಜನೆಯಲ್ಲಿ ಮನೆ ಅನುಮೋದನೆ ಅದ ತಕ್ಷಣ ದಲ್ಲಿ ಮುಂಗಡವಾಗಿ 30.000 ಸಹಾಯದನ ಬಿಡುಗಡೆ ಆಗುತ್ತದೆ. ನಂತರದಲ್ಲಿ ಮನೆಯ ಜಿಪಿಎಸ್ ಪ್ರಗತಿ ಗೆ ಅನುಗುಣವಾಗಿ ಸಹಾಯದನ ಬಿಡುಗಡೆ ಆಗುತ್ತದೆ. ಇದರ ಸದುಪಯೋಗ ಮಾಡಿಕೊಳ್ಳುವಂತೆ ಅರ್ಹ ಪಲಾನುಭವಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ, ಕೇಂದ್ರ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ.
– ಅಂಗನವಾಡಿ ಹುದ್ದೆಗಳಿಗೆ ಭರ್ತಿ: ಮೋಸ ಹೋಗದಿರಿ ಹುಷಾರ್
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ 07 ತಾಲೂಕುಗಳಲ್ಲಿ ಖಾಲಿಯಿರುವ 126 ಅಂಗನವಾಡಿ ಕಾರ್ಯಕರ್ತೆ ಮತ್ತು 448 ಸಹಾಯಕಿಯರ ಹುದ್ದೆಗಳಿಗೆ ಸ್ಥಳೀಯ ಕಂದಾಯ ಗ್ರಾಮ/ವಾರ್ಡ್ಗಳ ಕಾರ್ಯಕರ್ತೆಯರ ಹುದ್ದೆಗೆ ಪಿಯುಸಿ ಪಾಸಾದ ಹಾಗೂ ಸಹಾಯಕಿ ಹುದ್ದೆಗೆ ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಈ ಆಯ್ಕೆಯನ್ನು ಪಾರದರ್ಶಕವಾಗಿ ಮಾಡುವ ಸಲುವಾಗಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಈ ಆಯ್ಕೆಯನ್ನು ಅರ್ಹ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು.
ಕೆಲವು ಮಧ್ಯವರ್ತಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಸ್ವೀಕೃತವಾಗಿದ್ದು, ಯಾರೂ ಸಹ ಹಣ ನೀಡಿ ಮೋಸ ಹೋಗಬಾರದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.