- ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ಮಂದಾರ್ತಿ ಭೇಟಿ
- ಮಠಗಳಿಗೂ ತೆರಳಿ ವಿವಿಧ ಸ್ವಾಮೀಜಿಗಳಿಂದ ಆಶೀರ್ವಾದ
NAMMUR EXPRESS NEWS
ತೀರ್ಥಹಳ್ಳಿ: ಮಾಜಿ ಸಚಿವ, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಚುನಾವಣೆ ಸಮೀಪಿಸುತ್ತಿದ್ದಂತೆ ದೇವರ ಮೊರೆ ಹೋಗಿದ್ದಾರೆ.
ರಾಜ್ಯದಲ್ಲೇ ಸರಳ, ಸಜ್ಜನ ರಾಜಕಾರಣಿ ಎಂದೇ ಪ್ರಸಿದ್ಧರಾದವರು ಕಿಮ್ಮನೆ. ಕೊಟ್ಟ ಮಾತು ಉಳಿಸಿಕೊಂಡವರು. ಪ್ರಾಮಾಣಿಕ ರಾಜಕಾರಣಿ ಎಂದೇ ಖ್ಯಾತಿ ಗಳಿಸಿದವರು. ಈ ಬಾರಿ ಚುನಾವಣೆ ಅವರಿಗೆ ಅದೃಷ್ಟ ಪರೀಕ್ಷೆಯೇ ಸರಿ. ಹೀಗಿರುವಾಗ ಇಲ್ಲಿ ಟಿಕೆಟ್ ಗೊಂದಲವೂ ಇದೆ. ಹೀಗಿರುವಾಗ ಕಿಮ್ಮನೆ ಅವರು ಧರ್ಮಸ್ಥಳ, ಕೊಲ್ಲೂರು, ಮಂದಾರ್ತಿ, ರಾಮಚಂದ್ರಪುರ ಮಠ ಸೇರಿದಂತೆ ಎಲ್ಲೆಡೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳುನಾಡಿನ ದೈವ ಪರಂಪರೆಗೆ ಸೇರಿದ ಗುಳಿಗ ದೈವದ ಹುಟ್ಟು, ಬದುಕು, ನೆಲೆಗಳನ್ನು ಅವಲಂಬಿಸಿ ರೂಪುಗೊಂಡಿರುವ “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ ಕಿಮ್ಮನೆ ಸಾರಥ್ಯದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. 10 ಸಾವಿರಕ್ಕೂ ಹೆಚ್ಚು ಮಂದಿ ನಾಟಕ ನೋಡಿದ್ದರು.
ನಾಗ ದೋಷಕ್ಕೂ ವಿಶೇಷ ಪೂಜೆ!
ಕಿಮ್ಮನೆ ಅವರು ಧರ್ಮಸ್ಥಳಕ್ಕೂ ಭೇಟಿ ನೀಡಿ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗಡೆ ಆಶೀರ್ವಾದ ಪಡೆದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಕಡೆಗೂ ತೆರಳಿ ನಾಗ ದೋಷಕ್ಕೆ ಪೂಜೆ ಮಾಡಿಸಿದ್ದಾರೆ.