ತೋಟ ನಿರ್ವಹಣೆ ಮತ್ತು ಅಭಿವೃದ್ಧಿ ಸೇವೆಗಳು
– ಕೃಷಿ ತೋಟಗಳನ್ನು ನಿರ್ವಹಣೆ ಮಾಡುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲು
– ಕೃಷಿ ತೋಟಗಳ ನಿರ್ವಹಣೆಗೆ ಇಲ್ಲಿದೆ ಉತ್ತಮ ಅವಕಾಶ
NAMMUR EXPRESS NEWS
ಕೃಷಿ ಎಂದರೆ ಎಲ್ಲರಿಗೂ ಕೂಡ ಇಷ್ಟ ಆದರೆ ಎಲ್ಲರೂ ಕೂಡ ಅವಲಂಬನೆ ಮಾಡಿಲ್ಲ ಅದರಲ್ಲೂ ಕೆಲವೇ ಕೆಲವೊಂದಿಷ್ಟು ರೈತರು ಮಾತ್ರ ಇದರ ನಿರ್ವಹಣೆ ಮಾಡುತ್ತಿದ್ದಾರೆ ನಿಮಗೆ ನಿರ್ವಹಣೆ ಮಾಡುವುದು ಅಥವಾ ಅದರ ಜವಾಬ್ದಾರಿಯು ತುಂಬಾ ಕಷ್ಟ ಆಗುತ್ತಾ ಇದ್ದರೆ ನಿಮಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ.
ವೈಜ್ಞಾನಿಕ ಕೃಷಿಯನ್ನು ಮಾಡುವ ಮಾದರಿಯಲ್ಲಿಯೇ ಕೃಷಿಯ ಮೂಲಕ ಚಮತ್ಕಾರವನ್ನು ಮಾಡಿದ್ದಾರೆ. ಮಲೆನಾಡಿನ ಹಳ್ಳಿಗಳಲ್ಲಿ ಈಗ ತೋಟಗಳಿಗೆ ವಾರಸುದಾರರಿದ್ದಾರೆ ಆದರೆ ಇದರ ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ಮಾಡುವವರು ತುಂಬಾ ಕಡಿಮೆಯಾಗಿದ್ದಾರೆ. ಮನೆಯಲ್ಲಿ ಇರುವ ವಯಸ್ಸಾದವರಿಗೆ ಎಲ್ಲವೂ ಕೂಡ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದಿದೆ.
ರೈತರ ಮಕ್ಕಳು ಉತ್ತಮ ಉದ್ಯೋಗಕ್ಕಾಗಿಯೋ , ಉದ್ಯಮಕ್ಕಾಗಿಯೋ ಬೇರೆ ಬೇರೆ ನಗರ ಹಾಗು ದೇಶಗಳಿಗೆ ಹೋಗುವದು ಸರ್ವೇಸಾಮಾನ್ಯವಾಗಿದೆ ಆದರೆ ಇದರ ಪರಿಣಾಮವನ್ನು ಇಂದು ನಾವು ಮಲೆನಾಡು ಭಾಗಗಳಲ್ಲಿ ಕಾಣಬಹುದು. ನೇರವಾಗಿ ಹೇಳಬೇಕು ಅಂದರೆ ಪ್ರಾಯಶಃ ಯಾರು ಹೆಚ್ಚು ಓದಿದ್ದಾರೋ ಅವರು ದೊಡ್ಡ ನಗರಗಳಲ್ಲೂ ಅಥವಾ ವಿದೇಶದಲ್ಲೂ ವಾಸಿಸುತ್ತಿದ್ದಾರೆ. ಕೆಲವು ಕಡೆ ವಯಸ್ಸಾದ ತಂದೆ ತಾಯಿಯರಿದ್ದಾರೆ ಮತ್ತೆ ಕೆಲವು ಕಡೆ ಅವರೂ ಇಲ್ಲ, ದೂರದಲ್ಲಿರುವವರಿಗೆ ಅವರ ಕೆಲಸದ ಒತ್ತಡದಲ್ಲಿ ಇಲ್ಲಿ ಬಂದು ಸರಿಯಾದ ಕೃಷಿ ಮಾಡಿಸುವದು ಕೂಡ ಕಷ್ಟ ಅದರ ಜೊತೆಯಲ್ಲಿ ಅವರಿಗೆ ಕೃಷಿಯ ಜ್ಞಾನ ಕಡಿಮೆ. ಉತ್ತಮವಾದ ಕೆಲಸ ಬಿಟ್ಟು ಕೃಷಿಗೆ ಮರಳುವದು ಉಚಿತವಲ್ಲ, ಯಾಕೆಂದರೆ ಕೃಷಿಯಲ್ಲಿ ಅಭಿವೃದ್ಧಿ ಸೀಮಿತ, ಆದರೆ ನಿಮಗೆ ಕೃಷಿ ನಿರ್ವಹಣೆ ಮಾಡುವುದಕ್ಕೆ ಉತ್ತಮ ವೇದಿಕೆಯನ್ನು ಸೃಷ್ಟಿಸಿದ್ದಾರೆ.
ಜಮೀನುಗಳನ್ನು ಅಥವಾ ತೋಟದ ನಿರ್ವಹಣೆಗಳನ್ನು ವಯಸ್ಸಾದಂತ ತಂದೆ ತಾಯಿಯರು ಅಥವಾ ಬೇರೆಯವರಿಗೆ ನೀವೇನಾದರೂ ತೋಟ ಜಮೀನುಗಳನ್ನು ನೋಡಿಕೊಳ್ಳಲು ಬಿಟ್ಟು ಹೋಗಿರುವಂಥವರಿಗೆ ಈ ಕೃಷಿ ಗ್ರಾಮ್ ತುಂಬಾ ಉಪಯುಕ್ತವಾಗಿದೆ. ಉದ್ಯೋಗದ ಉದ್ದೇಶದಿಂದಾಗಿ ನಿಮ್ಮ ಜಮೀನು ಅಥವಾ ತೋಟಗಳನ್ನ ಬಿಟ್ಟು ಬೇರೆ ಕಡೆ ಹೋಗಿರುವವರಿಗೂ ಕೂಡ ಈ ಕೃಷಿ ಗ್ರಾಮ್ ತುಂಬಾ ಉಪಯುಕ್ತಕರವಾಗಿರುತ್ತದೆ, ಯಾವುದೇ ರೀತಿಯ ತೊಂದರೆ ಇಲ್ಲದೆ ನೀವು ಇವರಿಗೆ ವಹಿಸಿ ತೋಟದ ನಿರ್ವಹಣೆ ಮಾಡಿಸಿಕೊಳ್ಳಬಹುದು.
ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂಬಿಎ ಪದವೀಧರ ಗಣೇಶ್ ಹೆಗಡೆ ಅವರು ಮಲೆನಾಡಿನ ಭಾಗಗಳಲ್ಲಿ ತೋಟಗಳು ಪಾಳು ಬೀಳುತ್ತಿರುವದನ್ನ ನೋಡಿ ಪರಿಹಾರ ಮಾರ್ಗ ಕಂಡುೊಳ್ಳಲು ೋಿಸಿ ನಿರ್ಧಾರಕ್ಕೆ ಬಂದರು. ಇದು ಪಕ್ಕಾ ʼಕಾರ್ಪೋರೇಟ್ ಫಾರ್ಮಿಂಗ್ ಸಿಸ್ಟಮ್ʼ. ಕೃಷಿ ವಿಜ್ಞಾನಿಗಳು, ಮ್ಯಾನೇಜರ್ ಗಳು, ಸೂಪರ್ ವೈಸರ್ಗಳನ್ನೊಳಗೊಂಡು ಕೊನೆಗೆ ಕೂಲಿ ಆಳುಗಳನ್ನು ನಿಯೋಜಿಸಿ ತೋಟದ ಸ್ಥಿತಿಗತಿ ಪರೀಕ್ಷಿಸಿ ಕೆಲಸ ಮಾಡುವ ತಂಡ. ಈಗ ಸದ್ಯದಲ್ಲಿ ಇವರು 200 ಎಕರೆ ಕೃಷಿ ತೋಟದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಕೃಷಿ ಅಥವಾ ತೋಟಗಳ ಒಪ್ಪಂದ ಹೇಗಿರುತ್ತೆ ಎಂದರೆ
ಹಳೆ ತೋಟಕ್ಕಾದರೆ ಒಂದು ವರ್ಷದ ಒಪ್ಪಂದ ಹಾಗೆಯೇ ಹೊಸ ತೋಟಕ್ಕೆ 5 ವರ್ಷದ ಒಪ್ಪಂದ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಆ ಬೆಳೆಗಳ ಮಾರ್ಕೆಟಿಂಗ್ ಅನ್ನೂ ಈ ಸಂಸ್ಥೆಯೇ ನೋಡಿಕೊಳ್ಳುತ್ತದೆ. ಇದು ಹೇಗೆಂದರೆ ಒಮ್ಮೆ ಇವರಿಗೆ ತೋಟ ವಹಿಸಿದರೆ ಸಂಪೂರ್ಣವಾಗಿ ಬೆಳೆ ಬೆಳೆದು ಕೊಟ್ಟು ಮಾರಾಟ ಮಾಡಿ ಹಣ ಕೈಗೆ ಇಡುವ ತನಕ ಪೂರ್ಣ ಕೆಲಸ ಇವರದ್ದೇ ಆಗಿರುವುದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತದೆ.
ವೈಜ್ಞಾನಿಕವಾಗಿ ಮಾಡುವಂತಹ ಕೃಷಿಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ, ಆಯಾ ವಾತಾವರಣಕ್ಕೆನುಗುಣವಾಗಿ ಅವರು ಮಿಶ್ರ ಬೆಳೆಯನ್ನ ಬೆಳೆಯಲು ಮುಂದಾಗುತ್ತಾರೆ. ಪ್ರತಿ ಕೆಲಸದ ಮಾಹಿತಿಗಳನ್ನ ಕೂಡ ಮಾಲೀಕರಿಗೆ ರವಾನೆ ಮಾಡಬಹುದಾಗಿದೆ ಇದು ಎಲ್ಲಾ ಕಡೆಯಲ್ಲೂ ಕೂಡ ಇರುವುದರಿಂದಾಗಿ ಉತ್ತಮ ಸೇವೆಯನ್ನು ನೀಡುತ್ತದೆ. ಸಿದ್ದಾಪುರ, ಎಲ್ಲಾಪುರ, ಸಾಗರ, ಸೊರಬ, ಬನವಾಸಿ, ತೀರ್ಥಹಳ್ಳಿಯ ಮಲೆನಾಡಿನ ರೈತರಿಗೆ ಇದು ಲಭ್ಯವಾಗುತ್ತದೆ.
ಇದೊಂದು ಸಾಮಾಜಿಕ ಕಳಕಳಿ ಹೊಂದಿದ ಸಂಸ್ಥೆಯಾಗಿದ್ದು ಇದನ್ನು ಗುರುತಿಸದ ಖ್ಯಾತ ಸಹಕಾರಿ ಸಂಸ್ಥೆ TSS ಇದರ ಜೊತೆ ಕೈಜೋಡಿಸಿದ್ದು, ಸಿದ್ದಾಪುರ , ಶಿರಸಿ , ಯಲ್ಲಾಪುರ ಹಾಗು ಮುಂಡಗೋಡ ತಾಲೂಕುಗಳಲ್ಲಿ TSS ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ .
ವಿವಿಧ ಯೋಜನೆಗಳು ಕೂಡ ಲಭ್ಯವಿದೆ
* ಸಮಗ್ರ ತೋಟದ ನಿರ್ವಹಣೆ ಹಾಗು ಅಭಿವೃದ್ಧಿ
* ಸೀಮಿತ ೋಟದ ನಿರ್ವಹಣೆ ( ವಾರ್ಷಿಕ ಕೆಲಸಗಳು)
* ಹೊಸತೋಟದ ನಿರ್ಮಾಣ ಹಾಗು ನಿರ್ವಹಣೆ
ಅನುಕೂಲಗಳು : ವೈಜ್ಞಾನಿಕ ಕೃಷಿ, ಅಂತರ್ ಹಾಗು ಹೊಸ ಬೆಳೆಗಳು, ಸಂಪೂರ್ಣ ಜವಾಬ್ದಾರಿ , ಪಾರದರ್ಶಕತೆ , ವೃತ್ತಿಪರತೆ ಹಾಗು ಹೆಚ್ಚಿನ ಆದಾಯ.
ಅವಶ್ಯಕತೆಯುಳ್ಳವರು 7483603847 ನಂಬರ್ ಗೆ ಸಂಪರ್ಕಿಸಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.