- ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಸೇವೆ
- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪ್ರದಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹರಳೀಮಠ ನಾಗರಾಜ್ ಹಾಗೂ ಜಯಮ್ಮ ದಂಪತಿಯ ಪುತ್ರಿ ವಿಮಲ ಸಂಕೇತ್ ಹೆಗ್ಡೆ ಅವರಿಗೆ ವಾಣಿಜ್ಯ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಡಿಸಿದ ಪ್ರಬಂಧಕ್ಕೆ ರಾಣಿ ಚೆನ್ನಮ್ಮ ವಿವಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ರೋಲ್ ಆಫ್ ಮೈಕ್ರೋ ಫೈನಾನ್ಸ್ ಇನ್ ವುಮೆನ್ ಎಂಪವರ್ಮೆಂಟ್ ವಿಥ್ ಸ್ಪೆಷಿಯಲ್ ರೆಫರೆನ್ಸ್ ಟು ಶಿವಮೊಗ್ಗ ಜಿಲ್ಲೆ ಎಂಬ ಮಹಾ ಪ್ರಬಂಧಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪಿ.ಹೆಚ್.ಡಿ ಪ್ರದಾನ ಮಾಡಿದೆ.
ವಿಮಲ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಆಕಾಶ್ ಅವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧ ಮಂಡಿಸಿದ್ದಾರೆ. ಇವರು ಪ್ರಸ್ತುತ ತುಂಗಾ ಮಹಾವಿದ್ಯಾಲಯದ ಎಂ.ಕಾಂ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತಿದ್ದಾರೆ.
ಸಾಧನೆಗೆ ಶುಭಾಶಯಗಳು
ಡಾ. ವಿಮಲ ಅವರ ಸಾಧನೆಗೆ ತುಂಗಾ ಮಹಾವಿದ್ಯಾಲದ ಆಡಳಿತ ಮಂಡಳಿ, ಬೋಧಕ ವರ್ಗ, ಸಿಬ್ಬಂದಿ, ವಿದ್ಯಾರ್ಥಿಗಳು ಶುಭಾಶಯ ಸಲ್ಲಿಸಿದ್ದಾರೆ.
ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಶುಭಾಶಯ ಸಲ್ಲಿಸುತ್ತದೆ