- ಗೋಮಾಂಸ ವಶ: ಪೊಲೀಸ್ ಕೇಸ್
- ಕೊಪ್ಪದ ಹೇರೂರು ಬಳಿ ಪ್ರಕರಣ
- ಎನ್. ಆರ್. ಪುರ: ಬುದ್ಧಿಮಾಂಧ್ಯೆ ಮೇಲೆ ಅತ್ಯಾಚಾರಕ್ಕೆ ಯತ್ನ : ವೃದ್ಧನ ಬಂಧನ
- ಕೊಪ್ಪದ ಜಯಪುರದಲ್ಲಿ ಬಸ್ ಒಳಗೆ ಕಾಳಿಂಗ!
NAMMUR EXPRESS NEWS
ಕೊಪ್ಪ: ಕೊಪ್ಪ ತಾಲ್ಲೂಕಿನಲ್ಲಿ ಗೋ ಮಾಂಸ ದಂಧೆ ಪ್ರಕರಣ ಹೆಚ್ಚಿದೆ. ಈ ನಡುವೆ ಅಕ್ರಮವಾಗಿ ಗೋಮಾಂಸವನ್ನು ಶೇಖರಣೆ ಮಾಡಲಾಗಿದ್ದ ಮನೆಗೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಪುರ ಷರೀಫ್ ಎಂಬುವರ ಮನೆಗೆ ದಾಳಿ ನಡೆಸಿದ ಪೊಲೀಸರು, ಮನೆಯಲ್ಲಿ ಅಕ್ರಮವಾಗಿ ಶೇಖರಣೆ ಮಾಡಲಾಗಿದ್ದ ಸುಮಾರು 76 ಕೆ.ಜಿ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಜಯಪುರ ಪೊಲೀಸ್ ಠಾಣೆಯ ಪಿಎಸ್ ಐ ಜ್ಯೋತಿ ಹಾಗೂ ಎಎಸ್ ಐ ನಿಂಗೇಗೌಡ ಅವರ ತಂಡ ನಡೆಸಿದ್ದು ಪೊಲೀಸರು ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.
ಆರೋಪಿಯನ್ನು ಬಂಧಿಸಿ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು, ಜಯಪುರ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೋರಿದ್ದಾರೆ.
ಬುದ್ಧಿಮಾಂಧ್ಯೆ ಮೇಲೆ ರೇಪ್ ಯತ್ನ : ವೃದ್ಧನ ಬಂಧನ
ಎನ್.ಆರ್.ಪುರ ಪಟ್ಟಣ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವೃದ್ಧರೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಶಾಲೆಯ ಬಸ್ ಚಾಲಕ ತಾಲ್ಲೂಕಿನ ಮಲ್ಲಂದೂರು ಗ್ರಾಮ ನಿವಾಸಿ ಸದಾಶಿವ ಶೆಟ್ಟಿ (66) ಬಂಧಿತ ಆರೋಪಿ
ಸದಾಶಿವಶೆಟ್ಟಿ ಪಟ್ಟಣದ ವ್ಯಾಪ್ತಿಯ ಬುದ್ಧಿಮಾಂಧ್ಯೆ (20) ಯುವತಿ ಮೇಲೆ ಮಂಗಳವಾರ ರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಯುವತಿ ಸಹೋದರಿ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಸ್ಸಲ್ಲಿ ಕಾಳಿಂಗ!: ಚಲಿಸುತ್ತಿದ್ದ ಬಸ್ನಲ್ಲಿ ಚಾಲಕನ ಬಳಿಯೇ ಕಾಳಿಂಗ ಸರ್ಪವೊಂದು ಹೆಡೆ ಎತ್ತಿದ ಘಟನೆ ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮದ ಬಳಿ ವರದಿಯಾಗಿದೆ.
ಕೆಎಸ್ಆರ್ ಟಿಸಿ ಬಸ್ ಶೃಂಗೇರಿಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.
ಏನಿದು ಘಟನೆ?: ಸರ್ಕಾರಿ ಬಸ್ ಚಾಲನೆ ವೇಳೆ ಬ್ರೇಕ್ ಒತ್ತಲು ಹೋದ ಚಾಲಕ ಕಾಳಿಂಗ ಸರ್ಪವನ್ನು ಕಂಡು ಶಾಕ್ ಗೆ ಒಳಗಾಗಿದ್ದಾನೆ. ಆತ ಗಾಬರಿಗೊಂಡರೂ ಅವಸರ ಮಾಡದೆ ಮೆಲ್ಲನೆ ಬಸ್ನ್ನು ನಿಲ್ಲಿಸಿ ಕೆಳಗೆ ಇಳಿದಿದ್ದಾನೆ. ಬಸ್ ನಲ್ಲಿ ಹಾವಿರುವ ವಿಷಯ ತಿಳಿಯುತ್ತಿದ್ದಂತೆ ಪ್ರಯಾಣಿಕರು ಎದ್ದೋ. ಬಿದ್ದೋ. ಎಂಬಂತೆ ಕೆಳಗಿಳಿದು ಓಡಿದ್ದಾರೆ. ಹೀಗಾಗಿ ಕೆಲ ಸಮಯ ಬಸ್ ಅನ್ನು ನಿಲ್ಲಿಸಲಾಯಿತು.
ಕುಡಿದು ಪಾಠ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಶಿಕ್ಷಕಿ!
- ಯುವತಿ ಜತೆ ಮೈಸೂರಿನ ಲಾಡ್ಜ್ನಲ್ಲಿ ಬಿಜೆಪಿ ಮುಖಂಡ!
ತುಮಕೂರು ಜಿಲ್ಲೆಯ ಚಿಕ್ಕ ಸಾರಂಗಿ ಪ್ರಾಥಮಿಕ ಶಾಲೆಯಲ್ಲಿ ಕಂಠಪೂರ್ತಿ ಕುಡಿದು ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿಯೊಬ್ಬರು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಶಿಕ್ಷಕಿ ಗಂಗಲಕ್ಷ್ಮಮ್ಮ ಎಂಬುವವರೇ ಕುಡಿದು ಪಾಠ ಮಾಡಿತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕಿ ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಳೆದ 5 ವರ್ಷದಿಂದ ಕುಡಿಯುವ ಚಟಕ್ಕೆ ಒಳಗಾಗಿದ್ದರು ಎನ್ನಲಾಗುತ್ತಿದೆ.
ಇನ್ನೂ ಬೆಳಿಗ್ಗೆ ಶಿಕ್ಷಕಿ ಕುಡಿದುಕೊಂಡು ಬಂದು ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು, ಅಲ್ಲದೇ ಸಹೋದ್ಯೋಗಿಗಳೊಂದಿಗೆ ಗಲಾಟೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಶಿಕ್ಷಕಿಯ ಈ ತಪ್ಪು ನಡವಳಿಕೆಯನ್ನು ತಿದ್ದಿಕೊಳ್ಳಲು ಪೋಷಕರು ತಾಕೀತು ಮಾಡಿದ್ದಾರೆ. ಆದರೆ ಗಂಗಲಕ್ಷ್ಮಮ್ಮ ತನ್ನ ಚಾಳಿ ಬಿಟ್ಟಿರಲಿಲ್ಲ. ಇದರಿಂದ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು ಈಗ ಗ್ರಾಮಸ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಯುವತಿ ಜತೆ ಸಿಕ್ಕಿಬಿದ್ದ ಬಿಜೆಪಿ ಮುಖಂಡ!:ಮಂಡ್ಯ ಬಿಜೆಪಿ ಮುಖಂಡನ ಹನಿಟ್ರ್ಯಾಪ್ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ಲಾಡ್ಜ್ಗೆ ಹೋಗುವ ಮುನ್ನ ಯುವತಿ ಜತೆ ಬಿಜೆಪಿ ಮುಖಂಡ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಲಾಡ್ಜ್ನಲ್ಲಿ ಇವರಿಬ್ಬರೂ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ವಿಡಿಯೋ ಹೊಸ ತಿರುವು ಕೊಟ್ಟಿದೆ.
ದಕ್ಷಿಣ ಕನ್ನಡ ಮೂಲದ ಜಗನ್ನಾಥ ಶೆಟ್ಟಿ ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ಯುವತಿ ಜತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ವಿಡಿಯೋವೈರಲ್ ಆಗಿದೆ. ಚಿನ್ನಾಭಾರಣ ವ್ಯಾಪರಿಯಾದ ಇವರು ಬಿಜೆಪಿ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಮೈಸೂರಿನ ದರ್ಶನ್ ಲಾಡ್ಜ್ನಲ್ಲಿ ಸಲ್ಮಾ ಎಂಬ ಮಹಿಳೆ ಸೇರಿ ನಾಲ್ವರು ನುಗ್ಗುತ್ತಾರೆ. ಕೋಣೆಯೊಂದರಲ್ಲಿ ಕಾಲೇಜು ಯುವತಿ ಜತೆ ಜಗನ್ನಾಥ್ ಶೆಟ್ಟಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅದೇ ಕೋಣೆಯಲ್ಲಿ ಜಗನ್ನಾಥ್ ಶೆಟ್ಟಿ ನಕಲಿ ಐಡಿ ಕಾರ್ಡ್ ಕೂಡ ಸಿಗುತ್ತೆ. ಅದರಲ್ಲಿ ಕಾಲೇಜಿನ ಪ್ರಿನ್ಸಿಪಾಲ್
ಜಗನ್ನಾಥ್ ಶೆಟ್ಟಿ ಎಂದಿರುತ್ತೆ, ಇಬ್ಬರಿಗೂ ಏನು ಕೆಲಸ ಎಂದು ಸಲ್ಮಾರ ತಂಡ ಪ್ರಶ್ನಿಸಿದರೆ, ಇವರು ನಮ್ಮ ಪ್ರಿನ್ಸಿಪಾಲ್. ಟ್ಯೂಷನ್ ಹೇಳಿಸಿಕೊಳ್ಳೋಕೆ ಅಂತ ಇಲ್ಲಿಗೆ ಬಂದೆ, ಅವರಿಗೇನು ಮಾಡಬೇಡಿ ಫೀಸ್ ಎಂದು ಯುವತಿ ಗೋಗರೆಯುತ್ತಾರೆ. ಯುವತಿ ಮತ್ತು ಜಗನ್ನಾಥ್ ಶೆಟ್ಟಿ ಇಬ್ಬರಿಗೂ ಸಲ್ಮಾ ಗ್ಯಾಂಗ್ ಥಳಿಸಿದ್ದು, ತಪ್ಪಾಯ್ತು ಬಿಟ್ಬಿಡಿ ಎಂದು ಜಗನ್ನಾಥ್ ಕೈಮುಗಿದು ಬೇಡಿದರೂ ಈ ತಂಡ ಬಿಟ್ಟಿಲ್ಲ. ಈ ಎಲ್ಲವನ್ನೂ ಸಲ್ಮಾ ಕಡೆಯವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
ನಿದ್ದೆ ಮಾಡುತ್ತಲೇ 6 ಲಕ್ಷ ಗೆದ್ದ ತರುಣಿ!
ರಾಷ್ಟ್ರಮಟ್ಟದಲ್ಲಿ ಒಂದು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅದೇನೆಂದರೆ ಯಾವುದಾದರು ವ್ಯಕ್ತಿ ಸುಮಾರು 100 ದಿನಗಳ ಕಾಲ ಕನಿಷ್ಠ 9 ಘಂಟೆ ನಿದ್ದೆ ಮಾಡಿದರೆ ಅವರಿಗೆ 6 ಲಕ್ಷ ಬಹುಮಾನ ನೀಡುವುದಾಗಿ ಎಂದು. ಇದಕ್ಕಾಗಿ ಸುಮಾರು 4.5 ಲಕ್ಷ ಸ್ಪರ್ಧಿಗಳು ಅರ್ಜಿಯನ್ನು ಹಾಕಿದ್ದರು. ಆದರೆ ಇದರಲ್ಲಿ ಸೆಲೆಕ್ಟ್ ಆಗಿದ್ದು ಮಾತ್ರ 15 ಜನ ಮಾತ್ರ. ಕೊನೆಯದಾಗಿ ಕೇವಲ 4 ಮಂದಿ ಅಂತಿಮ ಘಟಕ್ಕೆ ತಲುಪಿದರು. ಈ ನಾಲ್ಕರಲ್ಲಿ ಬಂಗಾಳದ ಹೂಗ್ಲಿಯ ಶ್ರೀರಾಂಪುರದ ತ್ರಿಪರ್ಣ ಚಕ್ರವರ್ತಿ ಕೂಡ ಒಬ್ಬರು.
ಎಲ್ಲ ಸ್ಪರ್ಧಿಗಳಿಗೂ ಹಾಸಿಗೆ ಮತ್ತು ಸ್ಲಿಪ್ ಟ್ರ್ಯಾಕರ್ ಕೊಟ್ಟು ಮಲಗುವ ನಿಮ್ಮ ಕೌಶಲವನ್ನು ನೀವು ಪ್ರದರ್ಶಿಸಬೇಕು ಎಂದು ಹೇಳಲಾಗಿತ್ತು. ಅದರಂತೆ ಈ ಸರ್ಧೆಯಲ್ಲಿ ತ್ರಿಪರ್ಣ ಚಕ್ರವರ್ತಿ ಜಯಶೀಲರಾಗಿ 6 ಲಕ್ಷ ಬಹುಮಾನವನ್ನು ಗೆದ್ದಿದ್ದಾರೆ. ಅಮೆರಿಕ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇವರು ಸದ್ಯ ವರ್ಕ್ ಫ್ರಮ್ ಹೋಂನಲ್ಲಿದ್ದರು. ಹೀಗಾಗಿ ಇವರು ದಿನ ರಾತ್ರಿ ನಿದ್ದೆ ಕೆಡುತ್ತಿದ್ದರು. ಆದರೆ ಇದೀಗ ಈ ಸ್ಪರ್ಧೆಯ ಮೂಲಕ ತಮಗೆ ಬೇಕಾದಷ್ಟು ನಿದ್ದೆ ಕೂಡ ಮಾಡಿದ್ದಾರೆ ಅದರ ಜೊತೆ ಲಕ್ಷಾಂತರೂಪಾಯಿ ಹಣವನ್ನು ಸಹ ಗಳಿಸಿದ್ದಾರೆ.