ತೀರ್ಥಹಳ್ಳಿಯಲ್ಲಿ ಲಾಡ್ಜಲ್ಲಿ ರೆಕಾರ್ಡ್ ಬುಕ್ ಕಳವು!
– ಲಾಡ್ಜ್ ರಿಸೆಪ್ಷನಿಗೆ ನುಗ್ಗಿ ಕಳವು ಮಾಡಿದ ಕಳ್ಳರು
– ಅನೈತಿಕ ಚಟುವಟಿಕೆಗೆ ದಾಖಲೆ ಬಳಕೆ ಸಾಧ್ಯತೆ? ಎಚ್ಚರ ಎಚ್ಚರ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಬಾಳೆಬೈಲ್ ಸಮೀಪದ ಲಾಡ್ಜ್ ಒಂದಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಅಲ್ಲಿದ ದಾಖಲೆ ಹಾಗೂ ರೆಕಾರ್ಡ್ ಬುಕ್ ಗಳನ್ನು ಕಳವು ಮಾಡಿರುವಾಗ ಘಟನೆ ನಡೆದಿದೆ. ಕಳವು ಯಾಕಾಗಿದೆ ಇದರಿಂದ ಅವರಿಗೆ ಪ್ರಯೋಜನ ಏನು ಎಂಬುದು ಇದೀಗ ಕುತೂಹಲ ಮೂಡಿದ್ದು ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಕೂಡ ಲಾಡ್ಜ್ ಗಳಲ್ಲಿ ದಾಖಲೆ ಬುಕ್ ಜೊತೆಗೆ ಗ್ರಾಹಕರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಉಳ್ಳಂತಹ ಮಾಹಿತಿಯ ರೆಕಾರ್ಡ್ ಬುಕ್ ಗಳನ್ನು ಕಳುವು ಮಾಡಲಾಗಿತ್ತು. ಇದೀಗ ತೀರ್ಥಹಳ್ಳಿಯಲ್ಲೂ ಕೂಡ ಈ ಹಿಂದೆ ಕಳೆದ ಎರಡು ವಾರಗಳಲ್ಲಿ ಅನೇಕ ಕಡೆ ಕಳುವು ಮಾಡಲಾಗಿದೆ ಎನ್ನಲಾಗಿದೆ. ಇತ್ತೀಚಿಗೆ ಬಾಳೆ ಬೈಲ್ ಲಾಡ್ಜ್ ಒಂದಕ್ಕೆ ನುಗ್ಗಿ ಇಬ್ಬರು ಕಳ್ಳರು ದಾಖಲೆ ಉಳ್ಳ ರೆಕಾರ್ಡ್ ಬುಕ್ ಗಳನ್ನು ಕಳವು ಮಾಡಿದ್ದಾರೆ. ಈ ದಾಖಲೆಗಳನ್ನು ಬಳಸಿ ಗ್ರಾಹಕರಿಗೆ ಬ್ಲಾಕ್ ಮೇಲ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ಗ್ಯಾಂಗ್ ಬೆನ್ನು ಹತ್ತಿರುವ ಪೊಲೀಸ್ ಇಲಾಖೆ ರೆಕಾರ್ಡ್ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.