ಟಾಪ್ ನ್ಯೂಸ್ ಮಲ್ನಾಡ್
– ಹೊಸನಗರ : ಗೊಬ್ಬರದ ಚೀಲ ತುಂಬಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿ
– ಚಿಕ್ಕಮಗಳೂರು: ಕಾಫಿನಾಡಲ್ಲಿ ಅಪರೂಪದ ರಕ್ತಕನ್ನಡಿ ಹಾವು ಪತ್ತೆ
– ತೀರ್ಥಹಳ್ಳಿ : ಪೋಷಕರು ಬೈದಿದ್ದರು ಎಂದು 10 ವರ್ಷದ ಬಾಲಕ ನೇಣಿಗೆ ಶರಣು
– ಶಿವಮೊಗ್ಗ : ರಸ್ತೆ ಅಪಘಾತದಲ್ಲಿ ನಿವೃತ್ತ ಇಂಜಿನಿಯರ್ ಸಾವು
NAMMUR EXPRESS NEWS
ಹೊಸನಗರ : ಪಟ್ಟಣದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 766 ಸಿ ಶಿವಮೊಗ್ಗ ರಸ್ತೆಯ ಶ್ರೀ ಗುರು ಶಕ್ತಿ ಆಟೋಮೊಬೈಲ್ಸ್ ಬಳಿ, ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಗೊಬ್ಬರದ ಚೀಲ ತುಂಬಿಕೊಂಡು ಹೋಗುತ್ತಿದ್ದ ಲಾರಿ ಮಗುಚಿ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಮಂಗಳೂರಿನಿಂದ ಸೊರಬಕ್ಕೆ ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಹಾನಗಲ್ಲಿನ ಲಾರಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದು ರಸ್ತೆಯಲ್ಲಿ ಮಗುಚಿ ಅಪಘಾತ ನಡೆದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿದು ಬಾರಿ ಶಬ್ದ ಉಂಟಾದ ಕಾರಣ ಅಕ್ಕ ಪಕ್ಕದ ಮನೆಯವರು ಕೂಡಲೇ ಎದ್ದು ಬಂದಿದ್ದಾರೆ. ಮತ್ತು ತಕ್ಷಣವೇ ಲಾರಿಯೊಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಹೊರ ತರುವಲ್ಲಿ ನೆರವಾದರು ಎಂದು ಸ್ಥಳೀಯರು ತಿಳಿಸಿದ್ದಾರೆ.
– ಚಿಕ್ಕಮಗಳೂರು: ಕಾಫಿನಾಡಲ್ಲಿ ಅಪರೂಪದ ರಕ್ತಕನ್ನಡಿ ಹಾವು ಪತ್ತೆ
ಚಿಕ್ಕಮಗಳೂರು : ಕಾಫಿನಾಡಲ್ಲಿ ಅಪರೂಪದ ರಕ್ತಕನ್ನಡಿ ಹಾವು ಪತ್ತೆಯಾಗಿದೆ. ಉರಗಗಳ ಸಂತತಿಯಲ್ಲೇ ಈ ಕೋರಲ್ ಸ್ನೇಕ್ ಮೋಸ್ಟ್ ಡೇಂಜರ್ ಆಗಿದೆ. ಮಲೆನಾಡಲ್ಲಿ ಇದನ್ನ ಹಪ್ಪಟೆ, ರಕ್ತ ಗನ್ನಡಿ, ಹವಳದ ಹಾವು ಅಂತಾರೆ. ಕಳಸ ತಾಲೂಕಿನ ಕಲಕ್ಕಿ ಗ್ರಾಮದಲ್ಲಿ ಈ ಡೇಂಜರ್ ಸ್ನೇಕ್ ಪತ್ತೆಯಾಗಿದೆ. ದೇಹದ ಮೇಲೆ ಕಪ್ಪು ಕೆಳಭಾಗ ಕೆಂಪು ಬಣ್ಣದಿಂದ ಕೂಡಿರುವ ಈ ಹಾವು ಕಡಿದರೆ ಸಾಯೋದು ಕಡಿಮೆ, ಆದರೆ, ದೇಹಕ್ಕೆ ನಾನಾ ಸಮಸ್ಯೆ ಒಡ್ಡುತ್ತೆ. ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರೋದು ಕಡಿಮೆ, ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಾತ್ರ ಅಪರೂಪದ ಹಾವು ಕಾಣ ಸಿಗುತ್ತದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಕಳಸ ಉರಗ ತಜ್ಞ ರಿಜ್ವಾನ್ ಮನೆ ಅಂಗಳದಲ್ಲಿ ಈ ಹಾವು ಕಾಣಿಸಿ ಕೊಂಡಿದೆ.
– ತೀರ್ಥಹಳ್ಳಿ : ಪೋಷಕರು ಬೈದಿದ್ದರು ಎಂದು 10 ವರ್ಷದ ಬಾಲಕ ನೇಣಿಗೆ ಶರಣು
ತೀರ್ಥಹಳ್ಳಿ : 10 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಸಂಭವಿಸಿದೆ. ಇಲ್ಲಿನ ಗ್ರಾಮವೊಂದರಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಹತ್ತು ವರ್ಷದ ಬಾಲಕನಿಗೆ ಮನೆಯವರು ಯಾವುದೋ ಕಾರಣಕ್ಕಾಗಿ ಬೈದಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದಾಗ್ಯು ಈ ಬಗ್ಗೆ ಇನ್ನಷ್ಟೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ. ಘಟನೆ ಸಂಬಂಧ ಮಾಳೂರು ಠಾಣಾ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
– ಶಿವಮೊಗ್ಗ : ರಸ್ತೆ ಅಪಘಾತದಲ್ಲಿ ನಿವೃತ್ತ ಇಂಜಿನಿಯರ್ ಸಾವು
ಶಿವಮೊಗ್ಗ : ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವ್ಯಾಗನರ್ ಕಾರ್ನಲ್ಲಿದ್ದ ಖಾಸಗಿ ಸಂಸ್ಥೆಯ ನಿವೃತ್ತ ಇಂಜಿನಿಯರ್ ಸಾವು ಕಂಡಿದ್ದಾರೆ. ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿ ಹಾಗೂ ವಿಜ್ಞಾನ ಇಂಡಸ್ಟ್ರೀಸ್ ನ ನಿವೃತ್ತ ಸಹಾಯಕ ಇಂಜಿನಿಯರ್ ನಾಗರಾಜ್ (66) ಅಪಘಾತದಲ್ಲಿ ಮೃತಪಟ್ಟರೆ ಅವರ ಪತ್ನಿ ಮತ್ತು ಮಗನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಶಿವಮೊಗ್ಗದ ಗಾಡಿಕೊಪ್ಪದಿಂದ ಸಾಗರದ ವಿಟ್ಲಕೊಪ್ಪ ದಲ್ಲಿದ್ದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ವಾಪಾಸ್ ಬರುವಾಗ ಆಯನೂರಿನ ದೊಡ್ಡದಾನವಂದಿ ಕ್ರಾಸ್ ಬಳಿ ಅಡ್ಡದಿಡ್ಡವಾಗಿ ಬರುತ್ತಿದ್ದ ಗೂಡ್ಸ್ ವಾಹನವನ್ನು ತಪ್ಪಿಸುವ ಸಲುವಾಗಿ ವ್ಯಾಗನರ್ ವಾಹನವನ್ನು ಎಡಕ್ಕೆ ತಿರುಗಿಸಿದ್ದಾರೆ.bಎಡಗಡೆ ಚಲಿಸುತ್ತಿದ್ದ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಹೊಡೆದು ರಸ್ತೆಯ ಮೇಲೆ ಪಲ್ಟಿ ಹೊಡೆದು ನಿಂತಿದೆ. ವ್ಯಾಗನರ್ ವಾಹನವನ್ನು ಚಲಿಸುತ್ತಿದ್ದು ಅಪಘಾತದಲ್ಲಿ ತೀವ್ರಗಾಯಗೊಂಡಿದ್ದರು. ವಾಹನದಲ್ಲಿ ಪತ್ನಿ ಮತ್ತು ಮಗ ಇದ್ದು ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಮೆಗ್ಗಾನ್ ಗೆ ಸೇರಿಸಲಾಗಿತ್ತಾದರೂ ಅವರು ಮೃತರಾಗಿರುವದುರನ್ನು ವೈದ್ಯರು ಘೋಷಿಸಿದರು.